ETV Bharat / sports

ಬ್ಯಾಟಿಂಗ್​ನಲ್ಲಿ ಜೀರೋ, ಆದ್ರೂ ಈತನೇ ಕಿವೀಸ್​ ಪಾಲಿನ ಹೀರೋ!

author img

By

Published : Jul 13, 2019, 11:57 AM IST

2015 ವಿಶ್ವಕಪ್​ನಲ್ಲಿ 2 ಶತಕ ಹಾಗೂ 1 ಅರ್ಧಶತಕ ಸಹಿತ 547 ರನ್​ಗಳಿಸಿದ್ದ ಗಪ್ಟಿಲ್​ 2019 ರ ವಿಶ್ವಕಪ್​ನಲ್ಲಿ 9 ಪಂದ್ಯಗಳಿಂದ ಕೇವಲ ಒಂದು ಅರ್ಧಶತಕದ ನೆರವಿನಿಂದ 167 ರನ್​ಗಳಿಸಿದ್ದಾರೆ.

Guptill

ಲಂಡನ್​: ಟೂರ್ನಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್​ ಆರಂಭಿಕ ಬ್ಯಾಟ್ಸ್​ಮನ್​ ಮಾರ್ಟಿನ್​​ ಗಪ್ಟಿಲ್​ ನಂತರದ ಪಂದ್ಯಗಳಲ್ಲಿ ಹೆಚ್ಚು ಒಂದಂಕಿ ಮೊತ್ತಕ್ಕೆ ಸೀಮಿತರಾಗಿದ್ದರು. ಆದರೆ ಅವರೇ ತಮ್ಮ ತಂಡ ಫೈನಲ್​ ತಲುಪಲು ನೆರವಾಗಿ ಕಿವೀಸ್​ ಪಾಲಿಗೆ ಹೀರೋ ಆಗಿದ್ದಾರೆ.

ಹೌದು. ಗಪ್ಟಿಲ್​ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 73 ರನ್​ಗಳಿಸಿದ್ದರು. ಅದನ್ನು ಹೊರತು ಪಡಿಸಿ ಉಳಿದ 8 ಇನ್ನಿಂಗ್ಸ್​ಗಳಲ್ಲಿ ಒಂದು ಪಂದ್ಯದಲ್ಲಿ 35 ರನ್​ಗಳಿಸಿದ್ದು ಬಿಟ್ಟರೆ ಒಂದಂಕಿ ಮೊತ್ತಕ್ಕೆ ಹೆಚ್ಚುಬಾರಿ ಔಟಾಗಿದ್ದರು. ಆದರೆ, ಹೇಗೋ ರನ್​ ರೇಟ್​ ಆಧಾರದ ಮೇಲೆ ಸೆಮಿಫೈನಲ್​ ತಲುಪಿದ್ದ ಕಿವೀಸ್​ ಫೈನಲ್​ಗೇರಲು ಗಪ್ಟಿಲ್​ ಮಾಡಿದ ಒಂದು ರನ್​ಔಟ್​ನಿಂದ ಎಂದರೆ ಅದು ಅತಿಶಯೋಕ್ತಿಯಲ್ಲ.

Guptill
ಧೋನಿಯನ್ನು ರನ್​ ಮಾಡಿದ ಖುಷಿಯಲ್ಲಿ ಗಪ್ಟಿಲ್​

2015 ರ ವಿಶ್ವಕಪ್​ನಲ್ಲಿ ಟೂರ್ನಿಯ ಗರಿಷ್ಠ ಸ್ಕೋರರ್​ ಆಗಿದ್ದ ಗಪ್ಟಿಲ್​, ಈ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದರು. ಆದರೆ ಸೆಮಿಫೈನಲ್​ನಲ್ಲಿ ಎಂಎಸ್​ ಧೋನಿಯನ್ನು ತಮ್ಮ ಚಾಣಾಕ್ಷ ಫೀಲ್ಡಿಂಗ್​ ಮೂಲಕ ಡೈರೆಕ್ಟ್​ ಹಿಟ್​ ಮಾಡಿ ತಂಡವನ್ನು ಸೆಮಿಫೈನಲ್​ಗೇರುವಂತೆ ಮಾಡಿ ತಮ್ಮ ವಿರುದ್ಧದ ಟೀಕೆಯನ್ನು ಕೊಂಚ ತಗ್ಗಿಸಿಕೊಂಡಿದ್ದಾರೆ.

ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗಪ್ಟಿಲ್​, ನನ್ನ ಪ್ರದರ್ಶನದಿಂದ ಬೇರೆಯವರಿಗಿಂತ ಹೆಚ್ಚು ನಿರಾಶೆ ನನಗೆ ಆಗಿದೆ. ಆದರೆ ನನ್ನ ಅದೃಷ್ಟ ಧೋನಿಯನ್ನು ರನ್​ಔಟ್​ ಮಾಡುವ ಮೂಲಕ ತಂಡಕ್ಕೆ ಗೆಲುವು ತಂಡುಕೊಟ್ಟಿರುವುದು ಖುಷಿ ನೀಡಿದೆ. ಆದರೆ ಫೈನಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ ಎಂದು ತಿಳಿಸಿದ್ದಾರೆ.

ಗಪ್ಟಿಲ್​ 2015 ವಿಶ್ವಕಪ್​ನಲ್ಲಿ 2 ಶತಕ ಹಾಗೂ 1 ಅರ್ಧಶತಕ ಸಹಿತ 547 ರನ್​ಗಳಿಸಿದ್ದ ಗಪ್ಟಿಲ್​ 2019 ರ ವಿಶ್ವಕಪ್​ನಲ್ಲಿ 9 ಪಂದ್ಯಗಳಿಂದ ಕೇವಲ ಒಂದು ಅರ್ಧಶತಕದ ನೆರವಿನಿಂದ 167 ರನ್​ಗಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.