ನವದೆಹಲಿ: ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ದೆಹಲಿ ತಂಡ ಕೇವಲ 73 ಓವರ್ಗಳಲ್ಲಿ ಕೊನೆಯ ದಿನ ಬರೋಬ್ಬರಿ 347 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಜಯ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ 16 ರನ್ಗಳ ಹಿನ್ನಡೆ ಅನುಭವಿಸಿದ್ದ ದೆಹಲಿ ತಂಡಕ್ಕೆ ಈ ಪಂದ್ಯ ಡ್ರಾ ಆದರೂ ಕೇವಲ ಒಂದು ಅಂಕ ಸಂಪಾದಿಸುತ್ತಿತ್ತು. ಆದರೆ, ನಿತೀಶ್ ರಾಣಾ ಅವರ ಸ್ಫೋಟಕ ಆಟದ ನೆರವಿನಿಂದ ದೆಹಲಿ ತಂಡ 347 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಡ್ರಾಗೊಳ್ಳುತ್ತಿದ್ದ ಪಂದ್ಯ ಗೆದ್ದು ಸಂಪೂರ್ಣ 6 ಅಂಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
- ' class='align-text-top noRightClick twitterSection' data=''>
ಮೊದಲು ಬ್ಯಾಟಿಂಗ್ ನಡೆಸಿದ ವಿದರ್ಭ 179 ರನ್ಗಳಿಗೆ ಆಲೌಟ್ ಆದರೆ ಇದಕ್ಕುತ್ತರವಾಗಿ ದೆಹಲಿ 163 ರನ್ಗಳಿಗೆ ಆಲೌಟ್ ಆಗಿ 16 ರನ್ಗಳ ಹಿನ್ನಡೆ ಅನುಭವಿಸಿತು. 2ನೇ ಇನ್ನಿಂಗ್ಸ್ನಲ್ಲಿ ವಿದರ್ಭ ತಂಡ 330 ರನ್ ಸಿಡಿಸಿ ದೆಹಲಿಗೆ 346 ರನ್ಗಳ ಗುರಿ ನೀಡಿತ್ತು. ವಿದರ್ಭ ಪರ ಗಣೇಶ್ ಸತೀಶ್ 100, ಅಕ್ಷಯ್ ವಾಡೇಕರ್ 70, ವಾಷಿಮ್ ಜಾಫರ್ 40, ಸಂಜಯ್ ರಘುನಾಥ್ 57 ರನ್ ಗಳಿಸಿದ್ದರು.
347 ರನ್ಗಳ ಗುರಿ ಪಡೆದ ದೆಹಲಿ ತಂಡಕ್ಕೆ ಕುನಾಲ್ 75, ಹಿತೆನ್ ದಲಾಲ್ 82, ದ್ರುವ್ ಶೋರೆ 44, ಅನುಜ್ ರಾವತ್ 44 ಹಾಗೂ ನಿತೀಶ್ ರಾಣಾ ಕೇವಲ 68 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ ಔಟಾಗದೆ 105 ರನ್ಗಳಿಸಿ 5 ವಿಕೆಟ್ಗಳ ಜಯ ತಂದುಕೊಟ್ಟರು.