ವೆಲ್ಲಿಂಗ್ಟನ್: ನಾಲ್ಕನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸಾಧಾರಣ ಮೊತ್ತದ ಗುರಿಯನ್ನು ಕಿವೀಸ್ ತಂಡಕ್ಕೆ ನೀಡಿದೆ.
-
Innings Break!
— BCCI (@BCCI) January 31, 2020 " class="align-text-top noRightClick twitterSection" data="
50* from Pandey and a quick fire 39 from KL Rahul help #TeamIndia post a total of 165/8 on the board.
Scorecard - https://t.co/QyAOabVSHl #NZvIND pic.twitter.com/mHtn7r6VlJ
">Innings Break!
— BCCI (@BCCI) January 31, 2020
50* from Pandey and a quick fire 39 from KL Rahul help #TeamIndia post a total of 165/8 on the board.
Scorecard - https://t.co/QyAOabVSHl #NZvIND pic.twitter.com/mHtn7r6VlJInnings Break!
— BCCI (@BCCI) January 31, 2020
50* from Pandey and a quick fire 39 from KL Rahul help #TeamIndia post a total of 165/8 on the board.
Scorecard - https://t.co/QyAOabVSHl #NZvIND pic.twitter.com/mHtn7r6VlJ
ನಾಲ್ಕನೇ ಟಿ-20ಯಲ್ಲಿ ಮೊದಲ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ 8 ರನ್ಗಳನ್ನು ಗಳಿಸಿ ಔಟಾದರು. ನಂತರ ಒಂದು ಬದಿ ವಿಕೆಟ್ ಉರುಳುತ್ತಿದ್ದರೆ ಇನ್ನೊಂದೆಡೆ ಕೆ.ಎಲ್. ರಾಹುಲ್ ಬ್ಯಾಟ್ ಬೀಸುತ್ತಿದ್ದರು. ಕೆ.ಎಲ್ ರಾಹುಲ್ 39 ರನ್ಗಳನ್ನು ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಮನೀಷ್ ಪಾಂಡೆ ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು.
ಇನ್ನು ನಾಯಕ ಕೊಹ್ಲಿ 11, ಶಿವಂ ದುಬೆ 12, ಶ್ರೇಯಸ್ ಅಯ್ಯರ್ 1 , ವಾಷಿಂಗ್ಟನ್ ಸುಂದರ್ 0, ಶಾರ್ದೂಲ್ ಠಾಕೂರ್ 20, ಯುಜ್ವೇಂದ್ರ ಚಹಾಲ್ 1 ರನ್ ಕಲೆ ಹಾಕಿದ್ದಾರೆ. ಮನೀಷ್ ಪಾಂಡೆ 50 ಹಾಗೂ ನವದೀಪ್ ಸೈನಿ 11 ರನ್ ಗಳಿಸಿ ಅಜೇಯರಾಗುಳಿದರು.
ಒಟ್ಟಾರೆ ನಿಗದಿತ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು ಭಾರತ ತಂಡ 165 ರನ್ಗಳನ್ನು ಕಲೆ ಹಾಕಿ ಕಿವೀಸ್ಗೆ 166 ರನ್ಗಳ ಗುರಿ ನೀಡಿದೆ.