ಮೌಂಟ್ ಮಾಂಗುನುಯ್: ಆತಿಥೇಯ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ನಲ್ಲಿ 101ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲಿ ಸತತ ಮೂರನೆ ಟೆಸ್ಟ್ ಗೆದ್ದಂತಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ 431 ರನ್ಗಳಿಸಿದ್ದ ನ್ಯೂಜಿಲ್ಯಾಂಡ್ ಪಾಕ್ ತಂಡವನ್ನು 239 ರನ್ಗಳಿಗೆ ಕಟ್ಟಿಹಾಕಿತ್ತು. 192 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ 180 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡ ಕಿವೀಸ್ ಪ್ರವಾಸಿ ತಂಡಕ್ಕೆ 373 ರನ್ಗಳ ಟಾರ್ಗೆಟ್ ನೀಡಿತ್ತು.
ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಪಾಕ್ 4ನೇ ದಿನದಂತ್ಯದಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್ಗಳಿಸಿತ್ತು. 5ನೇ ಗೆಲುವಿಗೆ 301 ರನ್ಗಳ ಅಗತ್ಯವಿತ್ತು. ಆದರೆ, ಡ್ರಾ ಸಾಧಿಸಿಕೊಳ್ಳಲು ಪ್ರಯತ್ನಿಸಿದ ಪಾಕಿಸ್ತಾನ 5ನೇ ದಿನದ ಕೊನೆಯವರೆಗೂ ಹೋರಾಟ ನಡೆಸಿತಾದರೂ ಇನ್ನೂ 27 ಎಸೆತಗಳಿದ್ದಂತೆ 271 ರನ್ಗಳಿಗೆ ಆಲೌಟ್ ಆಗಿ 101ರನ್ಗಳ ಸೋಲು ಕಂಡಿತು.
ಇದನ್ನು ಓದಿ: ಭಾರತ ತಂಡಕ್ಕೆ ಮತ್ತೊಮ್ಮೆ ಅದೃಷ್ಟವಾದ ಎಂಸಿಜಿ: ಇಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳೆಷ್ಟು?
ಪಾಕಿಸ್ತಾನ ಪರ ಒಂದು ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಹೋರಾಟ ನಡೆಸಿದ ಫವಾದ್ ಅಲಮ್ 269 ಎಸೆತಗಳನ್ನ ಎದುರಿಸಿ 102 ರನ್ಗಳಿಸಿದರು. ಇವರನ್ನು ಬಿಟ್ಟರೆ ನಾಯಕ ಮೊಹಮ್ಮದ್ ರಿಜ್ವಾನ್ 101 ಎಸೆತಗಳಲ್ಲಿ 60 ರನ್ಗಳಿಸಿದರು. ಪಾಕಿಸ್ತಾನದ ಟಾಪ್ ಆರ್ಡರ್ ವೈಫಲ್ಯದಿಂದ ಈ ಪಂದ್ಯ ಕಳೆದುಕೊಳ್ಳಬೇಕಾಯಿತು.
ಈ ಗೆಲುವಿನೊಂದಿಗೆ ಕಿವೀಸ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ(129) ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ21 ರನ್ಗಳಿಸಿ ಕಿವೀಸ್ ನಾಯಕ ನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.