ETV Bharat / sports

91ಕ್ಕೆ ಆಲೌಟ್​ ಆದ್ರೂ ಪಂದ್ಯ ಗೆದ್ದ ನ್ಯೂಜಿಲ್ಯಾಂಡ್​ ವನಿತೆಯರು... ಸೆಮಿಫೈನಲ್​ ಆಸೆ ಜೀವಂತ - ನ್ಯೂಜಿಲ್ಯಾಂಡ್ ಸೆಮಿಫೈನಲ್​ ಆಸೆ ಜೀವಂತ

ಮಹಿಳೆಯರ ಟಿ20 ವಿಶ್ವಕಪ್​ನ 13ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್​ ತಂಡಗಳ ನಡುವಿನ ಪಂದ್ಯ ರೋಚಕವಾಗಿ ಅಂತ್ಯಗೊಂಡಿದೆ.

T20 world cup
ಟಿ20 ವಿಶ್ವಕಪ್​
author img

By

Published : Feb 29, 2020, 6:13 PM IST

ಮೆಲ್ಬೋರ್ನ್​: ಬಾಂಗ್ಲಾದೇಶ ಮಹಿಳೆಯರ ವಿರುದ್ಧ ಕೇವಲ 91 ರನ್​ಗಳಿಗೆ ಆಲೌಟ್​ ಆದರೂ ನ್ಯೂಜಿಲ್ಯಾಂಡ್​ ವನಿತೆಯರು 17 ರನ್​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರ ಟಿ20 ವಿಶ್ವಕಪ್​ನ 13ನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್​ ತಂಡಗಳ ನಡುವಿನ ಪಂದ್ಯ ರೋಚಕವಾಗಿ ಅಂತ್ಯಗೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಕಿವೀಸ್​ ಮಹಿಳೆಯರು ಕೇವಲ 91 ರನ್​ಗಳಿಗೆ ಆಲೌಟ್​ ಆಗಿದ್ದಾರೆ. ವಿಕೆಟ್​ ಕೀಪರ್​ ರಚೆಲ್​ ಪ್ರಿಸ್ಟ್​ (25), ಸೂಜಿ ಬೇಟ್ಸ್​ (15), ಡಿವೈನ್​ (12) ಹಾಗೂ ಮ್ಯಾಡಿ ಗ್ರೀನ್​(11) ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದಾರೆ. ಉಳಿದವರು ಒಂದು ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

T20 world cup
ಬಾಂಗ್ಲಾದೇಶ ತಂಡ

ಬಾಂಗ್ಲಾದೇಶ ಪರ ರಿತು ಮೋನಿ 4 ವಿಕೆಟ್​, ಸಲ್ಮಾ ಖತುನ್ 3 ಹಾಗೂ ರುಮಾನ ಅಹ್ಮದ್​ 2 ವಿಕೆಟ್​ ಪಡೆದು ಕಿವೀಸ್ ತಂಡವನ್ನು 100 ರ ಗಡಿ ದಾಟದಂತೆ ನೋಡಿಕೊಂಡರು.

92 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಕಿವೀಸ್​ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 74 ರನ್​ಗಳಿಗೆ ಆಲೌಟ್​ ಆಯಿತು. ವಿಕೆಟ್​ ಕೀಪರ್​ ನಗರ್​ ಸುಲ್ತಾನ 21 ರನ್​ಗಳಿಸಿದ್ದೇ ಗರಿಷ್ಠ ಸ್ಕೋರ್​ ಆಯಿತು. ಇವರನ್ನು ಬಿಟ್ಟರೆ ರಿತು ಮೋನಿ 10, ಮರ್ಷಿದಾ ಖತುನ್​ 11 ರನ್​ಗಳಿಸಿ ಎರಡಂಕಿ ಮೊತ್ತ ದಾಖಸಿದರು.

ನ್ಯೂಜಿಲ್ಯಾಂಡ್​-ಬಾಂಗ್ಲಾದೇಶ ಪಂದ್ಯ ಹೈಲೈಟ್ಸ್​

ಅದ್ಭುತ ಬೌಲಿಂಗ್​ ದಾಳಿ ನಡೆಸಿದ ಕಿವೀಸ್​ನ ಲೀ​ ಕ್ಯಾಸ್ಪರೆಕ್​ ಹಾಗೂ ಹೇಲಿ ಜೆನ್ಸೆನ್​ ತಲಾ ಮೂರು ವಿಕೆಟ್​ ಹಾಗೂ ಅಮೇಲಿಯಾ ಕೆರ್​ 4 ಓವರ್​ಗಳಲ್ಲಿ ಕೇವಲ 10 ರನ್​ ನೀಡಿ ಒಂದು ವಿಕೆಟ್​, ನಾಯಕ ಸೂಫಿ ಡಿವೈನ್​ 4 ಓವರ್​ಗಳಲ್ಲಿ 14 ರನ್​ ನೀಡಿ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿನ ಪ್ರಮುಖ ಪಾತ್ರವಹಿಸಿದರು.

ಈ ಗೆಲುವಿನ ಮೂಲಕ ನ್ಯೂಜಿಲ್ಯಾಂಡ್​ ತಂಡ ಟಿ20 ವಿಶ್ವಕಪ್​ನಲ್ಲಿ ಕಡಿಮೆ ರನ್​ ಡಿಫೆಂಡ್​ ಮಾಡಿ ಗೆದ್ದ ತಂಡ ಎಂಬ ದಾಖಲೆಗೆ ಪಾತ್ರವಾಯಿತು.

ಭಾರತ ಈಗಾಗಲೆ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಎ ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಈ ಎರಡು ತಂಡಗಳು ಮಾರ್ಚ್​ 2 ರಂದು ಕಣಕ್ಕಿಳಿಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.