ಕ್ರೈಸ್ಟ್ಚರ್ಚ್: ಡಿವೋನ್ ಕಾನ್ವೆ ಮತ್ತು ಬೌಲರ್ಗಳು ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಅತಿಥೇಯ ನ್ಯೂಜಿಲ್ಯಾಂಡ್ ತಂಡ 53 ರನ್ಗಳ ಅಂತರದಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದು ಬೀಗಿದೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ ಟಿವೋನ್ ಕಾನ್ವೆ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 184 ರನ್ಗಳಿಸಿತ್ತು.
ಕೇವಲ 11 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮನಿಸಿದ ಕಾನ್ವೆ 59 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿ ಸಮೇತ ಅಜೇಯ 99 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಗ್ಲೇನ್ ಫಿಲಿಫ್ಸ್ 20 ಎಸೆತಗಳಲ್ಲಿ 30 ಮತ್ತು ನಿಶಾಮ್ 15 ಎಸೆತಗಳಲ್ಲಿ 26 ರನ್ಗಳಿಸಿದರು.
ನಾಯಕ ವಿಲಿಯಮ್ಸನ್ 12, ಸೀಫರ್ಟ್ 1 ಹಾಗೂ ಗಪ್ಟಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆಸ್ಟ್ರೇಲಿಯಾ ಪರ ಡೇನಿಯಲ್ಸ್ ಸ್ಯಾಮ್ಸ್ 40ಕ್ಕೆ2, ಜೇ ರಿಚರ್ಡ್ಸನ್ 31ಕ್ಕೆ 2, ಸ್ಟೋಯ್ನಿಸ್ 17ಕ್ಕೆ 1 ವಿಕೆಟ್ ಪಡೆದರು.
-
🏏 99* off 59
— ICC (@ICC) February 22, 2021 " class="align-text-top noRightClick twitterSection" data="
🔥 10 fours and three sixes
Devon Conway’s brilliant knock earned him the Player of the Match in the first #NZvAUS T20I 🌟 pic.twitter.com/ApeXnrULrc
">🏏 99* off 59
— ICC (@ICC) February 22, 2021
🔥 10 fours and three sixes
Devon Conway’s brilliant knock earned him the Player of the Match in the first #NZvAUS T20I 🌟 pic.twitter.com/ApeXnrULrc🏏 99* off 59
— ICC (@ICC) February 22, 2021
🔥 10 fours and three sixes
Devon Conway’s brilliant knock earned him the Player of the Match in the first #NZvAUS T20I 🌟 pic.twitter.com/ApeXnrULrc
ಇನ್ನು 185 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಿರಂತ ವಿಕೆಟ್ ಕಳೆದುಕೊಂಡು 17.3 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್ 45 ಹಾಗೂ ಅಶ್ಟನ್ ಅಗರ್ 23 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ನಾಯಕ ಫಿಂಚ್ 2, ಜೋಶ್ ಫಿಲಿಪ್ಪೆ 2, ಮ್ಯೂಥ್ಯೂ ವೇಡ್ 12, ಮ್ಯಾಕ್ಸ್ವೆಲ್ 1, ಸ್ಟೋಯ್ನಿಸ್ 8, ಡೇನಿಯಲ್ ಸ್ಯಾಮ್ಸ್ 1, ಜೇ ರಿಚರ್ಡ್ಸನ್ 11 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕಿವೀಸ್ ಬೌಲರ್ಗಳಲ್ಲಿ ಇಶ್ ಸೋಧಿ 28ಕ್ಕೆ 4, ಟಿಮ್ ಸೌಥಿ 10ಕ್ಕೆ 2, ಟ್ರೆಂಟ್ ಬೌಲ್ಟ್ 22ಕ್ಕೆ 2 ಹಾಗೂ ಕೈಲ್ ಜಮೀಸನ್ 32ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ:ತವರಿನ ತಂಡ ತನಗೆ ಬೇಕಾದಂತೆ ಪಿಚ್ ಸಿದ್ಧಪಡಿಸಿಕೊಳ್ಳುವುದು ಹೊಸದೇನಲ್ಲ; ರೋಹಿತ್ ಶರ್ಮಾ