ETV Bharat / sports

ವಿಚಿತ್ರ ಹೊಡೆತದ ಮೂಲಕ ಕ್ರಿಕೆಟ್​​​​​​ ಅಭಿಮಾನಿಗಳ ಗಮನ ಸೆಳೆದ ಕಿವೀಸ್​​​ ಬ್ಯಾಟ್ಸ್​ಮನ್​​​​.​.. ವಿಡಿಯೋ - ನೈಲ್​ ಬ್ರೂಮ್​ ವಿಶೇಷ ಹೊಡೆತ ವೈರಲ್​

​ಧೋನಿ ಹೆಲಿಕಾಪ್ಟರ್ ಶಾಟ್​, ದಿಲ್ಶನ್​ ದಿಲ್​ಸ್ಕೂಪ್​, ಪೀಟರ್​ಸನ್​ ಸ್ವಿಚ್​ ಹಿಟ್​, ಸೆಹ್ವಾಗ್​ ಅಪ್ಪರ್​ಕಟ್​ ಶಾಟ್​ಗಳನ್ನು ಕ್ರಿಕೆಟ್​ ಜಗತ್ತಿಗೆ ಪರಿಚಯಿಸಿದ್ದರು. ಆದರೆ ಕಿವೀಸ್​ ಬ್ರೂಮ್​ ಪ್ರಯೋಗಿಸಿದ ಹೊಡೆತಕ್ಕೆ ನೆಟ್ಟಿಗರು ಹೆಸರು ಹುಡುಕುವಂತಾಗಿದೆ.

New Zealand Neil broom
New Zealand Neil broom
author img

By

Published : Nov 30, 2019, 4:53 PM IST

ಒಟಾಗೋ: ಕ್ರಿಕೆಟ್​ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಬಗೆಯ ಹೊಡೆತಗಳು ಅನ್ವೇಷಣೆಯಾಗುತ್ತಿರುತ್ತವೆ. ಅವು ಆಟಗಾರನ ಹೆಸರಿನಲ್ಲೇ ಪ್ರಸಿದ್ಧಿ ಪಡೆದದ್ದೂ ಇವೆ. ಇದೇ ರೀತಿ ಕಿವೀಸ್​ ಕ್ರಿಕೆಟಿಗ ಪ್ರಯೋಗಿಸಿರುವ ಹೊಸ ಹೊಡೆತ ಇಂಟರ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ.

ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮನ್​ ನೈಲ್​ ಬ್ರೂಮ್​ ಕಿವೀಸ್​ನ ಲಿಸ್ಟ್​ ಎ ಪಂದ್ಯದಲ್ಲಿ ಹೊಸ ಅನಧಿಕೃತ ಹೊಡೆತ ಪ್ರಯೋಗಿಸಿದ್ದಾರೆ. ಒಟಾಗೋ ತಂಡದ ಪರ ಬ್ಯಾಟಿಂಗ್​ ನಡೆಸುವ ವೇಳೆ ವೆಲ್ಲಿಂಗ್ಟನ್​ ತಂಡದ ಬೌಲರ್​ ಹ್ಯಾಮಿಶ್​ ಬೆನ್ನೆಟ್​ ಎಸೆದ ಬೌನ್ಸರ್​​ಅನ್ನು ಜಂಪ್​ ಮಾಡಿ ಕೀಪರ್​ನ ತಲೆ ಮೇಲಿಂದ ಬೌಂಡರಿ ಬಾರಿಸಿದ್ದಾರೆ. ಈ ಹೊಡೆತದ ವಿಡಿಯೋವನ್ನು ಒಟಾಗೋ ಕ್ರಿಕೆಟ್​ ಕ್ಲಬ್​ ತನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು "ಈ ಹೊಡೆತವನ್ನು ಹಿಂದೆ ಎಂದಾದರೂ ಕಂಡಿದ್ದೀರಾ?" ಎಂದು ಬರೆದುಕೊಂಡಿದೆ.

ಈ ಪಂದ್ಯದಲ್ಲಿ ಬ್ರೂಮ್​ 112 ರನ್​ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಒಟಾಗೋ ಕೇವಲ 2 ರನ್​ಗಳ ರೋಚಕ ಜಯ ಸಾಧಿಸಿದೆ.

ಬ್ರೂಮ್​ಗಿಂತ ಮೊದಲು ಭಾರತದ ಎಂ.ಎಸ್.ಧೋನಿ ಹೆಲಿಕಾಪ್ಟರ್​ ಹೊಡೆತವನ್ನು ಪರಿಚಯಿಸಿ ಕ್ರಿಕೆಟ್​ ಲೋಕಕ್ಕೆ ಆಶ್ಚರ್ಯ ಮೂಡಿಸಿದ್ದರು. ಅದೇ ರೀತಿ ದಿಲ್ಶನ್​ ದಿಲ್​ಸ್ಕೂಪ್​, ಪೀಟರ್​ಸನ್​ ಸ್ವಿಚ್​ ಹಿಟ್​, ಸೆಹ್ವಾಗ್​ ಅಪ್ಪರ್​ಕಟ್​ ಶಾಟ್​ಗಳನ್ನು ಕ್ರಿಕೆಟ್​ ಜಗತ್ತಿಗೆ ಪರಿಚಯಿಸಿದ್ದರು. ಆದರೆ ಬ್ರೂಮ್​ ಪ್ರಯೋಗಿಸಿದ ಹೊಡೆತಕ್ಕೆ ನೆಟ್ಟಿಗರು ಹೆಸರು ಹುಡುಕುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.