ಲಂಡನ್: ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತಂಡಕ್ಕೆ ಗಾಯದ ಸಮಸ್ಯೆ ಹೆಚ್ಚು ಕಾಡುತ್ತಿದ್ದು, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಮತ್ತೋರ್ವ ಬೌಲರ್ ಗಾಯಗೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಟೀಂ ಇಂಡಿಯಾ ನೆಟ್ ಬೌಲರ್ ಆಗಿ ಐಪಿಎಲ್ ಹೀರೋ ನವದೀಪ್ ಸೈನಿ ಅವರನ್ನ ಇಂಗ್ಲೆಂಡ್ಗೆ ಕರೆಯಿಸಿಕೊಂಡಿದೆ. ಈ ಹಿಂದೆ ದೀಪಕ್ ಚಹರ್ ಹಾಗೂ ಖಲೀಲ್ ಅಹ್ಮದ್ ಜತೆ ಸೈನಿ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ, ಅವರು ಗಾಯಾಳುಗೊಂಡಿದ್ದ ಕಾರಣ ಇದೀಲ್ ಲಂಡನ್ ವಿಮಾನವೇರಿದ್ದಾರೆ.
ಭುವಿ ಗಾಯಗೊಂಡಿರುವ ಕಾರಣ, ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ನೆಟ್ನಲ್ಲಿ ಬೌಲಿಂಗ್ ಮಾಡಲು ಬೌಲರ್ಗಳಿಲ್ಲದ್ದಂತಾಗಿದೆ. ಹೀಗಾಗಿ ನವದೀಪ್ಗೆ ಬುಲಾವ್ ನೀಡಲಾಗಿದೆ. ಈ ಹಿಂದೆ ಟೀಂ ಇಂಡಿಯಾ ತಂಡದೊಂದಿಗೆ ಖಲೀಲ್ ಅಹ್ಮದ್ ಇದ್ದರು. ಆದರೆ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಸರಣಿಗಾಗಿ ಆಯ್ಕೆಗೊಂಡಿರುವ ಕಾರಣ, ಇದೀಗ ಸೈನಿ ನೆಟ್ ಬೌಲರ್ ಆಗಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ.