ರಾವಲ್ಪಿಂಡಿ: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಪಾಕಿಸ್ತಾನದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರಾಗಿರುವ ನಶೀಮ್ ಶಾ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಕಿರಿಯ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ನಶೀಮ್ ತನ್ನ ಎಂಟನೇ ಓವರ್ನಲ್ಲಿ ನಜ್ಮುಲ್ ಹೊಸೈನ್ ಸೆಂಟೋ(16), ತೈಜುಲ್ ಇಸ್ಲಾಮ್(0) ಹಾಗೂ ಮಹಮದುಲ್ಲಾ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ 5ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
-
☝️ Najmul Hossain Shanto
— ICC (@ICC) February 9, 2020 " class="align-text-top noRightClick twitterSection" data="
☝️ Taijul Islam
☝️ Mahmudullah
Hat-trick for Naseem Shah! 🔥 #PAKvBAN pic.twitter.com/dVlKZUP9Zl
">☝️ Najmul Hossain Shanto
— ICC (@ICC) February 9, 2020
☝️ Taijul Islam
☝️ Mahmudullah
Hat-trick for Naseem Shah! 🔥 #PAKvBAN pic.twitter.com/dVlKZUP9Zl☝️ Najmul Hossain Shanto
— ICC (@ICC) February 9, 2020
☝️ Taijul Islam
☝️ Mahmudullah
Hat-trick for Naseem Shah! 🔥 #PAKvBAN pic.twitter.com/dVlKZUP9Zl
ಶಾಗೂ ಮೊದಲು ವಾಸಿಂ ಅಕ್ರಮ್ 2 ಬಾರಿ, ಅಬ್ದುಲ್ ರಜಾಕ್, ಮೊಹಮ್ಮದ್ ಶಮಿ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.
ನಶೀಮ್ ಶಾ ಇದಕ್ಕೂ ಮೊದಲು ಅತ್ಯಂತ 5 ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು. ಇದೀಗ ಹ್ಯಾಟ್ರಿಕ್ ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್
ನಶೀಮ್ ಶಾ(16 ವರ್ಷ 359 ದಿವಸ) vs ಬಾಂಗ್ಲಾದೇಶ(2020)
ಅಲೋಕ್ ಕಪಾಲಿ(19-240) vs ಪಾಕಿಸ್ತಾನ(2003)
ಅಬ್ಧುಲ್ ರಜಾಕ್(20-202) vs ಶ್ರೀಲಂಕಾ(2000)
ಹರ್ಭಜನ್ ಸಿಂಗ್ (20-251) vs ಆಸ್ಟ್ರೇಲಿಯಾ(2001)