ETV Bharat / sports

ಕೆಪಿಎಲ್​ ಇತಿಹಾಸದಲ್ಲೇ ದಾಖಲೆ 241ರನ್​ ಚೇಸ್​​... ಮೈಸೂರು ವಾರಿಯರ್ಸ್​ ಹೊಸ ರೆಕಾರ್ಡ್​! - ಮೈಸೂರು ವಾರಿಯರ್ಸ್

ಕರ್ನಾಟಕ ಪ್ರೀಮಿಯರ್​ ಲೀಗ್​​ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣವಾಗುತ್ತಿದ್ದು, ಇದೀಗ ಮತ್ತೊಂದು ದಾಖಲೆ ಬಳ್ಳಾರಿ-ಮೈಸೂರು ನಡುವಿನ ಪಂದ್ಯದಲ್ಲಿ ಮೂಡಿ ಬಂದಿದೆ.

ಮೈಸೂರು ವಾರಿಯರ್ಸ್​​
author img

By

Published : Aug 26, 2019, 11:31 PM IST

ಮೈಸೂರು: ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್​ ಲೀಗ್​​ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣವಾಗುತ್ತಿದ್ದು, ಇದೀಗ ಮತ್ತೊಂದು ರೆಕಾರ್ಡ್​ ನಿರ್ಮಾಣವಾಗಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ​ ಒಡೆಯರ್​ ಮೈದಾನದಲ್ಲಿ ಬಳ್ಳಾರಿ ಟಸ್ಕರ್ಸ್​ ಹಾಗೂ ಮೈಸೂರು ವಾರಿಯರ್ಸ್​ ನಡುವೆ ನಡೆದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಟಾಸ್​​ ಗೆದ್ದು ಮೊದಲು ಬ್ಯಾಟ್​ ನಡೆಸಿದ ಬಳ್ಳಾರಿ ತಂಡ ನಾಯಕ ಸಿಎಂ ಗೌತಮ್​​(92), ಕೃಷ್ಣಪ್ಪ ಗೌತಮ್​(48) ಹಾಗೂ ಪಡಿಕ್ಕಲ್​​(57)ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2ವಿಕೆಟ್​​ ಕಳೆದುಕೊಂಡು 240ರನ್​ಗಳಿಕೆ ಮಾಡಿತು.

ಇದರ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್​ ತಂಡ ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡು ಸೋಲುವ ಭೀತಿಗೊಳಗಾಯಿತು. ಆದರೆ ಈ ವೇಳೆ ಬ್ಯಾಟ್​ ಬೀಸಿದ ಅನಿರುದ್ಧ ಜೋಶಿ ಕೇವಲ 58 ಎಸೆತಗಳಲ್ಲಿ 9ಸಿಕ್ಸರ್​ ಹಾಗೂ 7 ಬೌಂಡರಿಗಳ ನೆರವಿನಿಂದ 125ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.

ಇನ್ನು ತಂಡಕ್ಕೆ ಕೊನೆ ಆರು ಎಸೆತಗಳಲ್ಲಿ 20ರನ್​ಗಳ ಅವಶ್ಯಕತೆ ಇದ್ದಾಗ ಬ್ಯಾಟ್​ ಬೀಸಿದ ಮಂಜೀಶ್​ ರೆಡ್ಡಿ ಸಿಕ್ಸರ್​ ಮೇಲೆ ಸಿಕ್ಸರ್​​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಜತೆಗೆ ತಾವು ಎದುರಿಸಿದ 9 ಎಸೆತಗಳಲ್ಲಿ ಬರೋಬ್ಬರಿ 30ರನ್​ಗಳಿಕೆ ಮಾಡಿದರು. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 7ವಿಕೆಟ್​​ ಕಳೆದುಕೊಂಡು 241ರನ್​ಗಳಿಕೆ ಮಾಡಿ 3ವಿಕೆಟ್​ಗಳ ಗೆಲುವು ದಾಖಲು ಮಾಡುವ ಮೂಲಕ ಪ್ಲೇ-ಆಫ್ ಕನಸು ಜೀವಂತವಾಗಿಟ್ಟುಕೊಂಡಿದೆ.

Intro:Body:

ಕೆಪಿಎಲ್​ ಇತಿಹಾಸದಲ್ಲೇ ದಾಖಲೆ 241ರನ್​ ಚೇಸ್​​... ಮೈಸೂರು ವಾರಿಯರ್ಸ್​ ಹೊಸ ರೆಕಾರ್ಡ್​! ​

ಮೈಸೂರು: ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್​ ಲೀಗ್​​ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣವಾಗುತ್ತಿದ್ದು, ಇದೀಗ ಮತ್ತೊಂದು ರೆಕಾರ್ಡ್​ ನಿರ್ಮಾಣವಾಗಿದೆ. 

ಮೈಸೂರಿನ ಶ್ರೀಕಂಠ ನರಸಿಂಹ ರಾಜ್​ ಒಡೆಯರ್​ ಮೈದಾನದಲ್ಲಿ ಬಳ್ಳಾರಿ ಟಸ್ಕರ್ಸ್​ ಹಾಗೂ ಮೈಸೂರು ವಾರಿಯರ್ಸ್​ ನಡುವೆ ನಡೆದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಟಾಸ್​​ ಗೆದ್ದು ಮೊದಲು ಬ್ಯಾಟ್​ ನಡೆಸಿದ ಬಳ್ಳಾರಿ ತಂಡ ನಾಯಕ ಸಿಎಂ ಗೌತಮ್​​(92), ಕೃಷ್ಣಪ್ಪ ಗೌತಮ್​(48) ಹಾಗೂ ಪಡಿಕ್ಕಲ್​​(57)ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2ವಿಕೆಟ್​​ ಕಳೆದುಕೊಂಡು 240ರನ್​ಗಳಿಕೆ ಮಾಡಿತು. 

ಇದರ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್​ ತಂಡ ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡು ಸೋಲುವ ಭೀತಿಗೊಳಗಾಯಿತು. ಆದರೆ ಈ ವೇಳೆ ಬ್ಯಾಟ್​ ಬೀಸಿದ ಅನಿರುದ್ಧ ಜೋಶಿ ಕೇವಲ 58 ಎಸೆತಗಳಲ್ಲಿ 9ಸಿಕ್ಸರ್​ ಹಾಗೂ 7 ಬೌಂಡರಿಗಳ ನೆರವಿನಿಂದ 125ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. 

ಇನ್ನು ತಂಡಕ್ಕೆ ಕೊನೆ ಆರು ಎಸೆತಗಳಲ್ಲಿ 20ರನ್​ಗಳ ಅವಶ್ಯಕತೆ ಇದ್ದಾಗ ಬ್ಯಾಟ್​ ಬೀಸಿದ ಮಂಜೀಶ್​ ರೆಡ್ಡಿ ಸಿಕ್ಸರ್​ ಮೇಲೆ ಸಿಕ್ಸರ್​​ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಜತೆಗೆ ತಾವು ಎದುರಿಸಿದ 9 ಎಸೆತಗಳಲ್ಲಿ ಬರೋಬ್ಬರಿ 30ರನ್​ಗಳಿಕೆ ಮಾಡಿದರು. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 7ವಿಕೆಟ್​​ ಕಳೆದುಕೊಂಡು 241ರನ್​ಗಳಿಕೆ ಮಾಡಿ  3ವಿಕೆಟ್​ಗಳ ಗೆಲುವು ದಾಖಲು ಮಾಡುವ ಮೂಲಕ  ಪ್ಲೇ-ಆಫ್ ಕನಸು ಜೀವಂತವಾಗಿಟ್ಟುಕೊಂಡಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.