ಮುಂಬೈ: 22 ವರ್ಷದ ಸರ್ಫರಾಜ್ ಖಾನ್ ಅವರ ಭರ್ಜರಿ ತ್ರಿಶತಕದ ನೆರವಿನಿಂದ ಉತ್ತರ ಪ್ರದೇಶ 625 ರನ್ಗಳನ್ನು ಹಿಂದಿಕ್ಕಿದ ಮುಂಬೈ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ 3 ಅಂಕ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಉತ್ತರ ಪ್ರದೇಶ ತಂಡ ಅಕ್ಷದೀಪ್ ನಾಥ್(115) ಶತಕ ಹಾಗೂ ಉಪೇಂದ್ರ ಯಾದವ್ ಅವರ(203) ಭರ್ಜರಿ ದ್ವಿಶತಕದ ನೆರವಿನಿಂದ 625 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ 40 ಬಾರಿಯ ರಣಜಿ ಚಾಂಪಿಯನ್ ಮುಂಬೈ 16 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆದರೆ, ಭುಪಿನ್ ಲವಣಿ 43, ಹಾಗೂ ಜೀತಂದ್ರ ತಾಮೊರೆ 51, ಸಿದ್ದಾರ್ಥ್ ಲಾಡ್ 98, ಸರ್ಫರಾಜ್ ಖಾನ್ 301, ಆದಿತ್ಯಾ ತಾರೆ 97, ಮುಲಾನಿ 65 ರನ್ಗಳ ಸಹಾಸದಿಂದ 625 ರ ಬೃಹತ್ ಮೊತ್ತವನ್ನು ಹಿಂದಿಕ್ಕಿತು. ಒಟ್ಟಾರೆ 166.3 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಮುಂಬೈ 688 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ 63 ರನ್ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಸಂಪಾದಿಸಿತು.
6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಸರ್ಫರಾಜ್ ಖಾನ್ 391 ಎಸೆತಗಳಲ್ಲಿ 30 ಬೌಂಡರಿ 8 ಸಿಕ್ಸರ್ ನೆರವಿನಿಂದ 301 ರನ್ಗಳಿಸಿ ಔಟಾಗದೇ ಉಳಿದರು. 6ನೇ ಕ್ರಮಾಂದಲ್ಲಿ ಬ್ಯಾಟಿಂಗ್ ನಡೆಸಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್ಮನ್ ಹಾಗೂ ತ್ರಿಶಕ ಸಿಡಿಸಿದ ಮುಂಬೈನ 7 ನೇ, ದೇಶದ 45ನೇ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಪಾತ್ರರಾದರು.