ETV Bharat / sports

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎರಡು ವಿಶೇಷ ದಾಖಲೆಗೆ ಪಾತ್ರವಾದ ಮುಂಬೈ ಇಂಡಿಯನ್ಸ್​ - MI vs DC IPL

ಐಪಿಎಲ್​ನಲ್ಲಿ 4 ಬಾರಿ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್, ಗರಿಷ್ಠ ಪಂದ್ಯವನ್ನಾಡಿದ ತಂಡ ಎಂಬ ದಾಖಲೆಗೆ ಈ ಹಿಂದೆಯೇ ಪಾತ್ರವಾಗಿದೆ, ಆದರೆ, ಇಂದಿನ ಪಂದ್ಯದ ಮೂಲಕ ಐಪಿಎಲ್​ನಲ್ಲಿ 200ನೇ ಪಂದ್ಯವಾಡಿದ ಏಕೈಕ ತಂಡ ಎನಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್​
ಮುಂಬೈ ಇಂಡಿಯನ್ಸ್​
author img

By

Published : Oct 31, 2020, 5:59 PM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತನ್ನ 200ನೇ ಐಪಿಎಲ್ ಪಂದ್ಯವನ್ನಾಡುವ ಮೂಲಕ ಐಪಿಎಲ್​ನಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ತಂಡ ಎನಿಸಿಕೊಂಡಿದೆ.

ಐಪಿಎಲ್​ನಲ್ಲಿ 4 ಬಾರಿ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಗರಿಷ್ಠ ಪಂದ್ಯವನ್ನಾಡಿದ ತಂಡ ಎಂಬ ದಾಖಲೆಗೆ ಈ ಹಿಂದೆಯೇ ಪಾತ್ರವಾಗಿದೆ, ಆದರೆ, ಇಂದಿನ ಪಂದ್ಯದ ಮೂಲಕ ಐಪಿಎಲ್​ನಲ್ಲಿ 200ನೇ ಪಂದ್ಯವಾಡಿದ ಏಕೈಕ ತಂಡ ಎನಿಸಿಕೊಂಡಿದೆ.

ಮುಂಬೈ ಬಿಟ್ಟರೆ, ಚಾಲೆಂಜರ್ಸ್​ ಬೆಂಗಳೂರು ತಂಡ 193, ಕೆಕೆಆರ್​ 191, ಡೆಲ್ಲಿ ಕ್ಯಾಪಿಟಲ್ಸ್​ 190 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​ 189 ಪಂದ್ಯಗಳನ್ನಾಡಿ ನಂತರದ ಸ್ಥಾನದಲ್ಲಿವೆ.

ಇನ್ನು ಟಿ-20 ಕ್ರಿಕೆಟ್​ನಲ್ಲೂ ಅತಿ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಕೂಡ ಮುಂಬೈ ಇಂಡಿಯನ್ಸ್​ ಪಾಲಾಗಿದೆ. ಮುಂಬೈ ತಂಡ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಎರಡು ಸೇರಿ 222 ಪಂದ್ಯಗಳನ್ನಾಡಿದೆ. ಮುಂಬೈ ಹೊರತು ಪಡಿಸಿದರೆ, ಇಂಗ್ಲೆಂಡ್​ನ ಸಮರ್​ಸೆಟ್​ 221, ಹ್ಯಾಂಪ್​ಸೈರ್​ 217, ಸಸೆಕ್ಸ್​ 212, ಸರ್ರೆ 211 ಪಂದ್ಯಗಳನ್ನಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.