ETV Bharat / sports

ಮುಂಬೈ 4ನೇ ಬಾರಿ IPL ಗೆಲ್ಲೋಕೆ.. ಈ'ಪಂಚ್‌' ಸಾಕು!

author img

By

Published : Mar 19, 2019, 5:52 PM IST

ಸಧ್ಯದಲ್ಲೇ ಐಪಿಎಲ್‌ 12ನೇ ಆವೃತ್ತಿಗೆ ಚಾಲನೆ ಸಿದಲಿದ್ದು 11 ಸೀಸನ್‌ಗಳಲ್ಲಿ 3 ಬಾರಿ ಐಪಿಎಲ್‌ ಕಪ್‌ ತನ್ನ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್‌ ಇದೀಗ ನಾಲ್ಕನೇ ಬಾರಿಗೆ ಕಪ್ ಗೆದ್ದರೂ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಐವರು ವಿದೇಶಿ ಪ್ಲೇಯರ್ಸ್‌..!

ಶೀಘ್ರದಲ್ಲೇ ಐಪಿಎಲ್‌ 12ನೇ ಆವೃತ್ತಿ ಪ್ರಾರಂಭ

ಮುಂಬೈ : ಹೌದು ಕಣ್ರೀ.. ಮುಂಬೈ ಇಂಡಿಯನ್ಸ್‌ ಈಗಾಗಲೇ 11 ಸೀಸನ್‌ಗಳಲ್ಲಿ 3 ಬಾರಿ ಐಪಿಎಲ್‌ ಕಪ್‌ ತನ್ನ ಮುಡಿಗೇರಿಸಿಕೊಂಡಿದೆ. ಈಗ ನಾಲ್ಕನೇ ಬಾರಿಗೆ ಕಪ್ ಗೆದ್ದರೂ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಐವರು ವಿದೇಶಿ ಪ್ಲೇಯರ್ಸ್‌.

ಮಾರ್ಚ್‌ 23ರಿಂದ ಚುಟುಕು ಕ್ರಿಕೆಟ್ ಹಬ್ಬ. ಐಪಿಎಲ್‌ 12ನೇ ಆವೃತ್ತಿಗೆ ಅವತ್ತೇ ಚಾಲನೆ. 8 ತಂಡಗಳ ಆಟಗಾರರ ತಾಲೀಮು ಜೋರಿದೆ. ಪ್ರತಿ IPL ಆವೃತ್ತಿಯಲ್ಲೂ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ಗೆಲ್ಲುವ ಫೆವಿರೇಟ್ ತಂಡ ಆಗಿರುತ್ತವೆ. ಮುಂಬೈ ಇಂಡಿಯನ್ಸ್‌ 2013, 2015 ಮತ್ತು 2017 ಹೀಗೆ ಮೂರುಬಾರಿ ಚಾಂಪಿಯನ್‌ ಆಗಿದೆ. ಈ ಐವರು ವಿದೇಶಿ ಪ್ಲೇಯರ್ಸ್‌ನಿಂದಲೇ ಈಗ 4ನೇ ಬಾರಿ IPL ಚಾಂಪಿಯನ್ ಆಗಲು ಹೊರಟಿದೆ ಮುಂಬೈ ಇಂಡಿಯನ್ಸ್‌.

1. ಕ್ವಿಂಟನ್ ಡಿಕಾಕ್ :

ಸೌಥ್‌ ಆಫ್ರಿಕಾದ ವಿಕೆಟ್‌ ಕೀಪರ್ ಕಮ್‌ ಬ್ಯಾಟ್ಸ್‌ಮೆನ್‌. ಕಳೆದ ವರ್ಷ ಆರ್‌ಸಿಬಿ ಪರ ಆಡಿದ್ದ ದಾಂಡಿಗ. ಆದರೆ, ಈ ಸಾರಿ ರೋಹಿತ್ ಶರ್ಮಾ ಕ್ಯಾಪ್ಟೆನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಕ್ವಿಂಟನ್‌ ಈಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅದರ ಲಾಭ ಮುಂಬೈಗೆ ಸಿಕ್ಕಲಿದೆ. ಓಪನರ್‌ ಬ್ಯಾಟಿಂಗ್‌ ಜತೆ ವಿಕೆಟ್‌ ಕೀಪಿಂಗ್‌ನಿಂದಲೂ ತಂಡಕ್ಕೆ ನೆರವಾಗುತ್ತಾರೆ ಡಿಕಾಕ್‌. ಮುಂಬೈನ ವಾಂಖೆಡೆ ಒಳ್ಳೇ ಬೌನ್ಸಿಂಗ್‌ ಪಿಚ್. ಅದ್ಭುತ ಸ್ಟ್ರೈಕ್‌ರೇಟ್‌ನಿಂದ ಡಿಕಾಕ್‌ ಎದುರಾಳಿಗಳಿಗೆ ದುಃಸ್ವಪ್ನವಾಗಲಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಡಿಕಾಕ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದರು. ಒಂದು ಶತಕ ಮತ್ತು 3 ಅರ್ಧಶತಕವೂ ಸೇರಿ 353 ರನ್‌ನ ಒಂದೇ ಸಿರೀಸ್‌ನಲ್ಲಿ ಸಿಡಿಸಿ, ಮ್ಯಾನ್‌ ಆಫ್‌ ದಿ ಸಿರೀಸ್‌ ಆಗಿದ್ದಾರೆ. ಡಿಕಾಕ್‌ ಆಟದಿಂದಲೇ ಐದು ಏಕದಿನ ಪಂದ್ಯ ಕ್ಲೀನ್‌ಸ್ವಿಪ್‌ ಮಾಡಿ ಹರಿಣಗಳು ಸರಣಿ ಗೆದ್ದಿವೆ.

2. ಬೆನ್ ಕಟಿಂಗ್‌ :

ಮುಂಬೈ ತಂಡದಲ್ಲೀಗ ಬೆನ್‌ ಕಟಿಂಗ್‌ ಆಲ್‌ರೌಂಡ್‌. ಕೆಳಕ್ರಮಾಂಕದಲ್ಲಿ ಬ್ಯಾಟಿಂಗಿಳಿದು ಎದುರಾಳಿಗೆ ಆಘಾತ ನೀಡ್ತಾರೆ. ತಂಡ ದೊಡ್ಡ ಮೊತ್ತ ಕಲೆಹಾಕಲು ಹೆಲ್ಪಾಗುತ್ತಾರೆ. 2016ರ IPL ಫೈನಲ್‌ ಪಂದ್ಯದಲ್ಲಿ ಬೆನ್‌ ಹೈದರಾಬಾದ್ ಸನ್‌ರೈಸರ್ಸ್‌ ಪರ 15 ಬಾಲ್‌ಗೆ 39 ರನ್‌ ಗಳಿಸಿದ್ದರು. 3 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಬೆನ್ನುಮೂಳೆ ಮುರಿದಿದ್ದರು ಬೆನ್‌. ಅವತ್ತು ಅದೇ ಮೊದಲ ಬಾರಿಗೆ 8ರನ್‌ನಿಂದ ಹೈದರಾಬಾದ್‌ ಸನ್‌ರೈಸರ್ಸ್‌ ತಂಡ ಐಪಿಎಲ್‌ ಚಾಂಪಿಯನ್‌ ಆಗಿತ್ತು. ಬೆನ್‌ ಕಟಿಂಗ್ ಮ್ಯಾನ್‌ ಆಫ್‌ ದಿ ಮ್ಯಾಚ್ ಆಗಿದ್ದರು. ಈವರೆಗೂ 14 ಐಪಿಎಲ್‌ ಪಂದ್ಯ ಆಡಿರುವ ಬೆನ್ ಕಟಿಂಗ್ 177.42 ಸ್ಟ್ರೈಕ್‌ರೇಟ್‌ನಲ್ಲಿ 220 ರನ್‌ ಗಳಿಸಿದ್ದಾರೆ. ಅಲ್ಲದೇ 9 ವಿಕೆಟ್‌ ಕೂಡ ಕಿತ್ತಿದ್ದಾರೆ.

3. ಕಿರನ್ ಪೋಲಾರ್ಡ್‌ :

ವೆಸ್ಟ್‌ ಇಂಡೀಸ್‌ನ ದೈತ್ಯ ದಾಂಡಿಗ ಕಿರನ್ ಪೋಲಾರ್ಡ್‌ ಟಿ-20 ಕ್ರಿಕೆಟ್‌ನಲ್ಲಿ, ಕ್ರಿಸ್‌ಗೇಲ್‌ ಮತ್ತು ಬ್ರಾಂಡೆನ್ ಮ್ಯಾಕ್‌ಲಮ್‌ ಬಳಿಕ 9 ಸಾವಿರ ರನ್‌ ಪೂರೈಸಿದ ವಿಶ್ವದ 3ನೇ ಬ್ಯಾಟ್ಸ್‌ಮೆನ್‌. ಪೋಲಾರ್ಡ್‌ ರೀತಿಯ ಅನುಭವಿ ಆಲ್‌ರೌಂಡರ್ ಇದ್ರೇ ಮುಂಬೈ ಇಂಡಿಯನ್ಸ್‌ ಮತ್ತಷ್ಟು ಮಜಬೂತಾಗುತ್ತೆ. ಟಿ-20 ಫಾರ್ಮ್ಯಾಟ್‌ನಲ್ಲಿ ಪೋಲಾರ್ಡ್‌ 458 ಪಂದ್ಯದಿಂದ 150.29 ಸ್ಟ್ರೈಕ್‌ರೇಟ್‌ನಲ್ಲಿ 9037 ರನ್‌ ಗಳಿಸಿದ್ದಾರೆ. 585 ಬೌಂಡರಿ ಮತ್ತು 586 ಸಿಕ್ಸ್‌ ಭಾರಿಸಿದ್ದಾರೆ. 1 ಶತಕ ಮತ್ತು 45 ಅರ್ಧಶತಕ ಪೋಲಾರ್ಡ್‌ ಹೆಸರಲ್ಲಿವೆ. ಐಪಿಎಲ್‌ನಲ್ಲಿ 121 ಪಂದ್ಯ ಆಡಿ ಪೋಲಾರ್ಡ್‌145.73 ಸ್ಟ್ರೈಕ್‌ರೇಟ್‌ನಲ್ಲಿ 2476 ರನ್‌ ಸಿಡಿಸಿದ್ದಾರೆ. ಜತೆಗೆ 56 ವಿಕೆಟ್‌ ಉರುಳಿಸಿದ್ದಾರೆ.

4. ಇವಿನ್ ಲ್ಯೂಯಿಸ್ :

ಚೋಟಾ ಕ್ರಿಸ್‌ಗೇಲ್‌ ಎಂಬ ಖ್ಯಾತಿಯ ಇವಿನ್ ಲ್ಯೂಯಿಸ್ ಟ್ರ್ಯಾಕ್‌ ರೆಕಾರ್ಡ್‌ ಸೂಪರಾಗಿದೆ. 123 ಟಿ-20 ಪಂದ್ಯದಿಂದ 3607 ರನ್‌ ಗಳಿಸಿರುವ ಇವಿನ್‌ 144.68 ಸ್ಟ್ರೈಕ್‌ರೇಟ್‌ನಲ್ಲಿ 239 ಸಿಕ್ಸ್‌ ಹಾಗೂ 293 ಬೌಂಡರಿ ಭಾರಿಸಿದ್ದಾರೆ. 4 ಶತಕ, 25 ಅರ್ಧಶತಕ ಲ್ಯೂಯಿಸ್‌ ಹೆಸರಿನಲ್ಲಿವೆ. 13 ಐಪಿಎಲ್‌ ಪಂದ್ಯದಿಂದ 138.41 ಸ್ಟ್ರೈಕ್‌ರೇಟ್‌ನಲ್ಲಿ 382 ರನ್‌ ಗಳಿಸಿದ್ದಾರೆ.

5 ಲಸಿತ್‌ ಮಾಲಿಂಗ :

ಲಸಿತ್ ಮಾಲಿಂಗ ಮುಂಬೈ ಇಂಡಿಯನ್ಸ್‌ ತಂಡದಲ್ಲಿರೋದ್ರಿಂದ ಬೌಲಿಂಗ್‌ ಪಡೆ ಮತ್ತಷ್ಟು ಶಕ್ತಿಶಾಲಿಯಾಗಿದೆ. ಯಾರ್ಕರ್‌ ಸ್ಪೆಷಲಿಸ್ಟ್ ಮಾಲಿಂಗ ಎದುರಾಳಿ ತಂಡದ ಬ್ಯಾಟ್ಸ್‌ಮೆನ್‌ ಎದೆನಡುಗಿಸುವುದಂತೂ ಪಕ್ಕಾ. ಇವರೆಲ್ಲರೂ ತಮ್ಮ ಈಗಿನ ಲಯ ಮುಂದುವರೆಸಿದ್ರೇ, ಮುಂಬೈ ಇಂಡಿಯನ್ಸ್‌ IPL 4ನೇ ಬಾರಿಗೆ ತನ್ನ ಮುಡಿಗೇರಿಸಿಕೊಳ್ಳಲಿದೆ.

Intro:Body:

1 Mumbai 4th Time Clinch IPL-Cup Becouse These 5 Players.txt  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.