ಜೈಪುರ(ರಾಜಸ್ಥಾನ): ಇತ್ತೀಚೆಗಷ್ಟೆ ಮುಗಿದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಸಹಿತ ಟಿ20 ಕ್ರಿಕೆಟ್ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ದೀಪಕ್ ಚಹಾರ್ ತಮ್ಮ ಸಾಧನೆಗೆ ಎಂಎಸ್ ಧೋನಿಯ ಮಾರ್ಗದರ್ಶನವೇ ಕಾರಣವೆಂದು ತಿಳಿಸಿದ್ದಾರೆ.
ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವ ಯುವ ಆಟಗಾರರಿಗೆ ಮಾರ್ಗದರ್ಶನದ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಧೋನಿ, ಇಂದು ಬಹುಪಾಲು ಯುವ ಕ್ರಿಕೆಟಿಗರಿಗೆ ಗುರುವಾಗಿದ್ದಾರೆ. ಅದೇ ರೀತಿ ಐಪಿಎಲ್ ಧೋನಿ ನೇತೃತ್ವದಲ್ಲಿ ಆಡುವ ದೀಪಕ್ ಚಹಾರ್ ತಮ್ಮ ವಿಶ್ವದಾಖಲೆಯ ಸಾಧನೆಗೆ ಧೋನಿ ಕಾರಣವೆಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನನ್ನ ಸಾಧನೆಯನ್ನು ಐಪಿಎಲ್ಗೆ ನೀಡಲು ಬಯಸುತ್ತೇನೆ. ಸಿಎಸ್ಕೆ ಹಾಗೂ ಧೋನಿ ಬಾಯ್ರಿಂದ ತುಂಬಾ ಕಲಿತಿದ್ದೇನೆ. ಬ್ಯಾಟ್ಸ್ಮನ್ಗಳ ದೇಹ ಬಾಷೆಯನ್ನು ಅರಿತು ಅವರಿಗೆ ಹೇಗೆ ಬೌಲಿಂಗ್ ಮಾಡಬೇಕೆಂಬುದು ನನಗೆ ಧೋನಿಯವರು ನೀಡಿದ ಸಲಹೆಯಿಂದ ನನ್ನಲ್ಲಿ ಅಳವಡಿಸಿಕೊಂಡೆ ಎಂದು ಚಹಾರ್ ಹೇಳಿದ್ದಾರೆ.
ವಿಕೆಟ್ ಹಿಂದೆ ನಿಲ್ಲುವ ಧೋನಿ ಬ್ಯಾಟ್ಸ್ಮನ್ಗಳ ಚಲನೆಗಳ ಜೊತೆಗೆ ನಮ್ಮ ಬೌಲಿಂಗ್ ಶೈಲಿಯನ್ನು ಗಮನಿಸುತ್ತಿರುತ್ತಾರೆ. ನಾನು ಕೆಟ್ಟ ಬಾಲ್ ಪ್ರಯೋಗಿಸಿದಾಗ ಹಲವು ಬಾರಿ ಮೈದಾನದಲ್ಲೇ ನನಗೆ ಬೈದಿದ್ದಾರೆ. ಆದರೆ ಅವರ ಸಲಹೆ ನಂತರ ಖಂಡಿತ ನಾನು ವಿಕೆಟ್ ಪಡೆಯಲು ಯಶಸ್ವಿಯಾಗುತ್ತಿದ್ದೆ ಎಂದು ತಮ್ಮ ಸಾಧನೆಯನ್ನು ಕೂಲ್ ಕ್ಯಾಪ್ಟನ್ಗೆ ಅರ್ಪಿಸಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ 3ನೇ ಟಿ20ಯಲ್ಲಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಸಹಿತ 7ರನ್ ನೀಡಿ 6 ವಿಕೆಟ್ ಪಡೆದಿದ್ದರು. ಇದಾದ ಕೇವಲ 48 ಘಂಟೆಗಳಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮತ್ತೊಂದು ಹ್ಯಾಟ್ರಿಕ್ ಪಡೆದಿದ್ದರು.