ಮುಂಬೈ: ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ಆರ್ಸಿಬಿ ಸ್ಟಾರ್ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ತಮ್ಮ ನೆಚ್ಚಿನ ಐಪಿಎಎಲ್ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಭಾರತದ 7 ಆಟಗಾರರಿಗೆ ಅವಕಾಶ ನೀಡಿದ್ದಾರೆ.
ಕ್ರಿಕ್ಬಜ್ನಲ್ಲಿ ಕಾಮೆಂಟೇಟರ್ ಹರ್ಷ ಬೋಗ್ಲೆ ಅವರೊಂದಿಗೆ ಆನ್ಲೈನ್ ಸಂವಾದದಲ್ಲಿ ಪಾಲ್ಗೊಂಡಿದ್ದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ತಮ್ಮ ನೆಚ್ಚಿನ ಆಲ್ ಸ್ಟಾರ್ ಐಪಿಎಲ್ ತಂಡವನ್ನು ಘೋಷಿಸಿದರು. ಈ ತಂಡದಲ್ಲಿ ಐಪಿಎಲ್ ನಿಯಮಾವಳಿಯಂತೆ ಎಬಿಡಿ 7 ಭಾರತೀಯ ಆಟಗಾರರು ಮತ್ತು 4 ವಿದೇಶಿ ಆಟಗಾರರನ್ನು ಹೆಸರಿಸಿದ್ದಾರೆ.
ಎಬಿಡಿ ನೆಚ್ಚಿನ ಐಪಿಎಲ್ ತಂಡದಲ್ಲಿ ನಾಯಕರಾಗಿ ಭಾರತದ ಮಾಜಿ ನಾಯಕ ಹಾಗೂ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಆಯ್ಕೆಯಾಗಿದ್ದಾರೆ. ಆರಂಭಿಕರಾಗಿ ಮಾಜಿ ಭಾರತದ ಆರಂಭಿಕ ವಿರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಮತ್ತು ತಮ್ಮನ್ನು ಆಯ್ಕೆ ಮಾಡಿದ್ದಾರೆ.
5ನೇ ಸ್ಥಾನಕ್ಕೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್, 6 ನೇ ಕ್ರಮಾಂಕಕ್ಕೆ ಎಂಎಸ್ಡಿ ಹಾಗೂ ಎರಡನೇ ಅಲ್ರೌಂಡರ್ ಸ್ಥಾನಕ್ಕೆ ಭಾರತದ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿರುವ ವಿಲಿಯರ್ಸ್ ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಸ್ಪಿನ್ ವಿಭಾಗದಲ್ಲಿ ಹಾಗೂ ವೇಗಿಗಳಾಗಿ ಜಸ್‌ಪ್ರೀತ್ ಬುಮ್ರಾ, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡರನ್ನು ಆಯ್ಕೆ ಮಾಡಿದ್ದಾರೆ.
ಎಬಿ ಡಿವಿಲಿಯರ್ಸ್ ಆಲ್ ಸ್ಟಾರ್ ಐಪಿಎಲ್ ತಂಡ:
ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ,ಎಬಿ ಡಿ ವಿಲಿಯರ್ಸ್ , ಬೆನ್ ಸ್ಟೋಕ್ಸ್ , ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ರಶೀದ್ ಖಾನ್ , ಭುವನೇಶ್ವರ್ ಕುಮಾರ್, ಕಾಗಿಸೊ ರಬಾಡ , ಜಸ್‌ಪ್ರೀತ್ ಬುಮ್ರಾ.