ETV Bharat / sports

ಈ ವಿಶ್ವಕಪ್​​ನ ಭಾರತದ ಕೊನೆ ಪಂದ್ಯದಲ್ಲೇ ಧೋನಿ ವಿದಾಯ - ಟೀಂ ಇಂಡಿಯಾ

ಮಹೇಂದ್ರ ಸಿಂಗ್​ ಧೋನಿ
author img

By

Published : Jul 3, 2019, 2:19 PM IST

Updated : Jul 3, 2019, 3:30 PM IST

2019-07-03 14:15:11

ವಿಶ್ವಕಪ್​ ಟೂರ್ನಿ ನಂತರ ನಿವೃತ್ತಿ ಘೋಷಣೆ

ಲಂಡನ್: ಭಾರತಕ್ಕೆ 2 ವಿಶ್ವಕಪ್​​ ಗೆಲ್ಲಿಸಿಕೊಟ್ಟ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶ್ವಕಪ್​ ಟೂರ್ನಿ ನಂತರ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಸದ್ಯ ಪ್ರಸಕ್ತ ಟೂರ್ನಿಯಲ್ಲಿ ಸೆಮಿಫೈನಲ್​ ತಲುಪಿರುವ ಟೀಂ ಇಂಡಿಯಾ, ವಿಶ್ವಕಪ್​​ ಟೂರ್ನಿಯಲ್ಲಿ ಆಡುವ ಕೊನೆಯ ಪಂದ್ಯವೇ ಧೋನಿ ಅವರ ಕೊನೆಯ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್​ ಮತ್ತು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ದರಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು ನಿವೃತ್ತಿ ತೆಗೆದುಕೊಳ್ಳುವಂತೆ ಟ್ವಿಟ್ಟರ್​ನಲ್ಲಿ ಆಗ್ರಹಿಸಿದ್ದರು.

ಟೀಂ ಇಂಡಿಯಾ ಪರ 348 ಏಕದಿನ ಪಂದ್ಯಗಳನ್ನ ಆಡಿರುವ ಧೋನಿ, 10 ಶತಕ ಮತ್ತು 72 ಅರ್ಧಶತಕ ಗಳಿಸಿದ್ದು, ಒಟ್ಟು10,723 ರನ್​ ಗಳಿಸಿದ್ದಾರೆ. 90 ಟೆಸ್ಟ್​ ಪಂದ್ಯಗಳಿಂದ 1 ದ್ವಿಶತಕ, 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4,876 ರನ್​ ಗಳಿಸಿದ್ದಾರೆ. ಇನ್ನು ಟಿ-20ಯಲ್ಲಿ 190 ಪಂದ್ಯಗಳಿಂದ ಒಟ್ಟು4,432 ರನ್​ಗಳಿಸಿದ್ದಾರೆ.

Intro:Body:

1 768-512-3674416-thumbnail-3x2-bjgjkgjgjpg.jpg  

Conclusion:
Last Updated : Jul 3, 2019, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.