ಮುಂಬೈ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ ಸಿಡಿಸುವ ಹೆಲಿಕಾಪ್ಟರ್ ಶಾಟ್ ಇದೀಗ ಎಲ್ಲ ಬ್ಯಾಟ್ಮನ್ಸ್ಗಳೂ ಹೆಲಿಕಾಪ್ಟರ್ ಶಾಟ್ ಬಾರಿಸುತ್ತಿದ್ದಾರೆ. ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ನ ಚೆನ್ನೈ ವಿರುದ್ಧದ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಈ ಶಾಟ್ ಸಿಡಿಸಿ ಸಂಭ್ರಮಿಸಿದ್ದಾರೆ.
ಮುಂಬೈನ ವಾಖೆಂಡೆ ಮೈದಾನದಲ್ಲಿ ನಿನ್ನೆ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ ಕೇವಲ 8 ಎಸೆತಗಳಲ್ಲಿ 3ಸಿಕ್ಸರ್ ಸೇರಿ 25 ರನ್ಗಳಿಕೆ ಮಾಡಿದ್ದರು. 20ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಸಿಡಿಸಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಜತೆಗೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಧೋನಿಗೆ ಸಖತ್ ಟಾಂಗ್ ನೀಡಿದ್ದಾರೆ. ಇನ್ನು ಪಾಂಡ್ಯ ಸಿಡಿಸಿರುವ ಹೆಲಿಕಾಪ್ಟರ್ ಶಾಟ್ಗೆ ಧೋನಿ ಯಾವುದೇ ರೀತಿಯ ರಿಯಾಕ್ಷನ್ ನೀಡದೇ ಸುಮ್ಮನೆ ನಿಂತುಕೊಂಡು ನೋಡಿದ್ದಾರೆ.
Special to hit helicopter shot with @msdhoni watching: Hardik
— IndianPremierLeague (@IPL) April 4, 2019 " class="align-text-top noRightClick twitterSection" data="
"Hoped MS would congratulate me after that shot 😜"
An overjoyed @hardikpandya7 talks about emulating inspiration MSD's pet stroke against CSK. Interview by @Moulinparikh #MIvCSK @mipaltan
📹 https://t.co/jLLWXuZRYe pic.twitter.com/aci6s6cPBF
">Special to hit helicopter shot with @msdhoni watching: Hardik
— IndianPremierLeague (@IPL) April 4, 2019
"Hoped MS would congratulate me after that shot 😜"
An overjoyed @hardikpandya7 talks about emulating inspiration MSD's pet stroke against CSK. Interview by @Moulinparikh #MIvCSK @mipaltan
📹 https://t.co/jLLWXuZRYe pic.twitter.com/aci6s6cPBFSpecial to hit helicopter shot with @msdhoni watching: Hardik
— IndianPremierLeague (@IPL) April 4, 2019
"Hoped MS would congratulate me after that shot 😜"
An overjoyed @hardikpandya7 talks about emulating inspiration MSD's pet stroke against CSK. Interview by @Moulinparikh #MIvCSK @mipaltan
📹 https://t.co/jLLWXuZRYe pic.twitter.com/aci6s6cPBF
ವಿಶೇಷವೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ನೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಸಿಡಿಸುವ ಅಭ್ಯಾಸ ಕೂಡ ನಡೆಸಿದ್ದರು. ಇದೀಗ ಅದರ ಸದುಪಯೋಗ ಪಡೆದುಕೊಂಡು ಮೈದಾನದಲ್ಲೇ ಸಖತ್ ಆಗಿ ಸಿಕ್ಸರ್ ಸಿಡಿಸುತ್ತಿದ್ದಾರೆ. ಇನ್ನು ಇದೇ ವಿಷಯವಾಗಿ ಪಂದ್ಯ ಮುಗಿದ ಬಳಿಕ ಪಾಂಡ್ಯ ಮಾತನಾಡಿದ್ದು, 'ಹೆಲಿಕಾಪ್ಟರ್ ಶಾಟ್ ನೋಡಿ ಧೋನಿ ನನ್ನನ್ನು ಅಭಿನಂದಿಸುತ್ತಾರೆ ಎಂದುಕೊಂಡಿದ್ದೆ. ಆದರೂ ಆ ಹೊಡೆತಕ್ಕೆ ನನಗೆ ಧೋನಿ ಸ್ಫೂರ್ತಿ. ಆ ಬಗ್ಗೆ ಖುಷಿಯಿದೆ' ಎಂದಿದ್ದಾರೆ. ಇನ್ನು ನಿನ್ನೆಯ ಪಂದ್ಯವನ್ನ ಮುಂಬೈ 37ರನ್ಗಳ ಅಂತರದಿಂದ ಗೆದ್ದುಕೊಂಡಿದೆ.