ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದು ಬಹುತೇಕ ಡೌಟ್ ಆಗಿದ್ದು, ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅದರ ಭವಿಷ್ಯ ನಿಂತುಕೊಂಡಿದೆ. ಹೀಗಾಗಿ ಕೆಲವರ ಕ್ರಿಕೆಟ್ ಭವಿಷ್ಯ ಅತಂತ್ರಗೊಂಡಿದ್ದು ಮತ್ತೊಮ್ಮೆ ಟೀಂ ಇಂಡಿಯಾ ಜರ್ಸಿ ತೊಡುವುದು ಡೌಟ್ ಆಗಿದೆ.
ಈ ಟೂರ್ನಿಯಲ್ಲಿ ಆರ್ಭಟಿಸಿ ಮತ್ತೊಮ್ಮೆ ತಂಡಕ್ಕೆ ಮರಳುವ ಕನಸು ಕಾಣುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ಕೂಡ ಇದೀಗ ತೂಗುಯ್ಯಾಲೆಯಲ್ಲಿ ನಿಂತಿದೆ.
IPL ನಡೆಯದಿದ್ರೆ ಧೋನಿ ವಿಶ್ವಕಪ್ ತಂಡಕ್ಕೆ ಮರಳುವುದು ಸಂಶಯ: ಕೆ.ಶ್ರೀಕಾಂತ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕೆಲ ದಿನ ಬಾಕಿ ಇರುವಾಗಲೇ ಫ್ರಾಂಚೈಸಿ ಸೇರಿಕೊಂಡು ಭರ್ಜರಿ ತಯಾರಿ ನಡೆಸಿದ್ದ ಧೋನಿ, ಮುಂಬರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಆಡುವ 11ರ ಬಳಗದಲ್ಲಿ ಜಾಗ ಪಡೆದುಕೊಳ್ಳುವ ಕನಸು ಕಾಣುತ್ತಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ಐಪಿಎಲ್ ಮುಂದೂಡಿಕೆಯಾಗಿದೆ.
ಸಿಎಸ್ಕೆ ಫಿಸಿಯೋ ಹೇಳಿದ್ದು..
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಿಸಿಯೋ ಟಾಮಿ ಸಿಮ್‌ಸೆಕ್ ಮಾತನಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ತಯಾರಿ ನಡೆಸಿದ್ದ ಧೋನಿ ಮುಂಬರುವ ಐಸಿಸಿ ಟಿ-20 ಕ್ರಿಕೆಟ್ನಲ್ಲಿ ಜಾಗ ಪಡೆದುಕೊಳ್ಳುವ ಇರಾದೆಯಲ್ಲಿದ್ದರು. ಸಿಎಸ್ಕೆ ಪೂರ್ವಾಭ್ಯಾಸದಲ್ಲಿ ಭಾಗಿಯಾಗಿದ್ದ ಧೋನಿ ಅದ್ಭುತ ತಯಾರಿ ನಡೆಸಿದ್ದರು. ಹೀಗಾಗಿ ಅವರು ವಿಶ್ವಕಪ್ ಆಡಲು ಅರ್ಹರು ಎಂದು ನಾನು ಅಂದುಕೊಂಡಿದ್ದೆ ಎಂದು ತಿಳಿಸಿದ್ದಾರೆ.