ETV Bharat / sports

ಸೇನೆಯಲ್ಲಿ ಕ್ರಿಕೆಟ್‌ ಸಾಮ್ರಾಟ್‌ ಧೋನಿ ದಿನಚರಿ ಹೀಗಿದೆ.. ಸೆಲ್ಯೂಟ್‌ ಸೋಲ್ಜರ್‌!

ಸೇನೆಯಲ್ಲಿ ಗಡಿ ಕಾಯ್ತಿರುವ ಧೋನಿ ನಡೆ ಕಂಡ್ರೇ ನೀವೂ ಸೆಲ್ಯೂಟ್‌ ಮಾಡದೇ ಇರೋದಿಲ್ಲ. ಧೋನಿ ಡ್ಯುಟಿಗೆ ತೆರಳುವ ಮೊದಲು ತಮ್ಮ ಶೂಗಳನ್ನ ತಾವೇ ಪಾಲಿಶ್‌ ಮಾಡ್ತಿರುವ ಫೋಟೋವೊಂದು ವೈರಲ್‌ ಆಗಿದೆ.

ಸೇನೆಯಲ್ಲಿ ಕ್ರಿಕೆಟ್‌ ಸಾಮ್ರಾಟ್‌ ಧೋನಿ ದಿನಚರಿ
author img

By

Published : Aug 6, 2019, 6:06 PM IST

ಕಾಶ್ಮೀರ: ಕ್ರಿಕೆಟ್‌ ಲೋಕದ ತಾರೆ, ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಪ್ರೀತಿಸದವರೇ ಇಲ್ಲ. ಇತ್ತೀಚೆಗೆ ಅವರ ಪರ್ಫಾಮೆನ್ಸ್‌ ಬಗ್ಗೆ ಎಷ್ಟೇ ಟೀಕೆಗಳಿದ್ರೂ ಈಗಲೂ ಮಾಹಿ ಯುವಕರಿಗೆ ಸ್ಫೂರ್ತಿ. ಸೇನೆಯಲ್ಲಿ ಗಡಿ ಕಾಯ್ತಿರುವ ಧೋನಿ ನಡೆ ಕಂಡ್ರೇ ನೀವೂ ಸೆಲ್ಯೂಟ್‌ ಮಾಡದೇ ಇರೋದಿಲ್ಲ.

ms-dhoni-polishing-his-shoe-while-serving-in-indian-army
ಸೆಲ್ಯೂಟ್‌ ಸೋಲ್ಜರ್‌!

ಕಾಶ್ಮೀರದಲ್ಲಿನ ಭಾರತೀಯ ಸೇನೆಯ 106 TA ಬಟಾಲಿಯನ್‌ನಲ್ಲಿ ಮಾಜಿ ಕ್ಯಾಪ್ಟನ್‌ ಧೋನಿ ಈಗ ಗಡಿ ಕಾಯುತ್ತಿದ್ದಾರೆ. ಕ್ಯಾಪ್ಟನ್‌ ಕೂಲ್‌ 2 ತಿಂಗಳು ಕ್ರಿಕೆಟ್‌ಗೆ ವಿಶ್ರಾಂತಿ ಪಡೆದು ಸೇನೆ ಸೇರಿರೋದು ಎಲ್ಲರಿಗೂ ಗೊತ್ತಿದೆ. ಅಗಸ್ಟ್‌ 15ರವರೆಗೂ ಧೋನಿ ಗಡಿ ಕಾಯಲಿದ್ದಾರೆ. ಮೊನ್ನೆಯಷ್ಟೇ ಯೋಧರ ಜತೆ ಲೆಫ್ಟಿನೆಂಟ್‌ ಕರ್ನಲ್ ಧೋನಿ ವಾಲಿಬಾಲ್ ಆಡಿ ಗಮನ ಸೆಳೆದಿದ್ದರು. ಈಗ ಅದೇ ಧೋನಿ ಡ್ಯುಟಿಗೆ ತೆರಳುವ ಮೊದಲು ತಮ್ಮ ಶೂಗಳನ್ನ ತಾವೇ ಪಾಲಿಶ್‌ ಮಾಡ್ತಿರುವ ಫೋಟೋವೊಂದು ವೈರಲ್‌ ಆಗಿದೆ.

ಸೇನೆಯಲ್ಲಿ ಕ್ರಿಕೆಟ್‌ ಸಾಮ್ರಾಟ್‌ ಧೋನಿ ದಿನಚರಿ ಹೀಗಿರುತ್ತೆ..

ಈ ಫೋಟೋದಲ್ಲಿ ಕೆಳಗೆ ಕುಳಿತು ಧೋನಿ ತಮ್ಮ ಶೂಗಳನ್ನ ತಾವೇ ಪಾಲಿಶ್ ಮಾಡಿಕೊಳ್ತಿದ್ದಾರೆ. ಎಲ್ಲಾ ಸೈನಿಕರಂತೆಯೇ ಮಾಹಿ ದಿನಚರಿಯೂ ಇರುತ್ತೆ. ಧೋನಿಯ ಈ ನಡೆಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ. 38 ವರ್ಷದ ಮಾಹಿಗೆ 2011ರಿಂದಲೇ ಭಾರತೀಯ ಟೆರಿಟೊರಿಯಲ್‌ ಆರ್ಮಿಯಲ್ಲಿ ಗೌರವಾರ್ಥವಾಗಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆ ನೀಡಲಾಗಿದೆ. ಒಬ್ಬ ಸಾಮಾನ್ಯ ಯೋಧನಂತೆ ಗಡಿಯಲ್ಲಿ ಸರಳವಾಗಿ ಕರ್ತವ್ಯ ನಿರ್ವಹಿಸ್ತಿರುವ ಧೋನಿ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ.

ವಿಶೇಷ ಭದ್ರತೆ, ಸೌಲಭ್ಯಗಳಿಲ್ಲದೇ ವೀರನಂತೆ ಧೋನಿ ಈಗ ದೇಶ ಸೇವೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲರೂ ಈಗಲೂ ಧೋನಿಯನ್ನ ಪ್ರೀತಿಸ್ತಾರೆ. ಅವರ ಸರಳ ವ್ಯಕ್ತಿತ್ವದಿಂದಲೇ ಈಗ ಯುವಕರು ಭಾರತೀಯ ಸೇನೆಗೆ ಸೇರುವಂತೆ ಪ್ರೇರಣೆ ನೀಡುತ್ತಿದ್ದಾರೆ ಅಂತಾ ಫ್ಯಾನ್ಸ್‌ ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘಿಸುತ್ತಿದ್ದಾರೆ.

Intro:Body:

ಸೇನೆಯಲ್ಲಿ ಕ್ರಿಕೆಟ್‌ ಸಾಮ್ರಾಟ್‌ ಧೋನಿ ದಿನಚರಿ ಹೀಗಿರುತ್ತೆ.. ಸೆಲ್ಯೂಟ್‌ ಸೋಲ್ಚರ್‌!

ಕಾಶ್ಮೀರ: ಕ್ರಿಕೆಟ್‌ ಲೋಕದ ತಾರೆ, ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಪ್ರೀತಿಸದವರೇ ಇಲ್ಲ. ಇತ್ತೀಚೆಗೆ ಅವರ ಪರ್ಫಾಮೆನ್ಸ್‌ ಬಗ್ಗೆ ಎಷ್ಟೇ ಟೀಕೆಗಳಿದ್ರೂ ಈಗಲೂ ಮಾಹಿ ಯುವಕರಿಗೆ ಸ್ಫೂರ್ತಿ. ಸೇನೆಯಲ್ಲಿ ಗಡಿ ಕಾಯ್ತಿರುವ ಧೋನಿ ನಡೆ ಕಂಡ್ರೇ ನೀವೂ ಸೆಲ್ಯೂಟ್‌ ಮಾಡದೇ ಇರೋದಿಲ್ಲ.

ಕಾಶ್ಮೀರದಲ್ಲಿನ ಭಾರತೀಯ ಸೇನೆಯ 106 TA ಬಟಾಲಿಯನ್‌ನಲ್ಲಿ ಮಾಜಿ ಕ್ಯಾಪ್ಟನ್‌ ಧೋನಿ ಈಗ ಗಡಿ ಕಾಯುತ್ತಿದ್ದಾರೆ. ಕ್ಯಾಪ್ಟನ್‌ ಕೂಲ್‌ 2 ತಿಂಗಳು ಕ್ರಿಕೆಟ್‌ಗೆ ವಿಶ್ರಾಂತಿ ಪಡೆದು ಸೇನೆ ಸೇರಿರೋದು ಎಲ್ಲರಿಗೂ ಗೊತ್ತಿದೆ. ಅಗಸ್ಟ್‌ 15ರವರೆಗೂ ಧೋನಿ ಗಡಿ ಕಾಯಲಿದ್ದಾರೆ. ಮೊನ್ನೆಯಷ್ಟೇ ಯೋಧರ ಜತೆ ಲೆಫ್ಟಿನೆಂಟ್‌ ಕರ್ನಲ್ ಧೋನಿ ವಾಲಿಬಾಲ್ ಆಡಿ ಗಮನ ಸೆಳೆದಿದ್ದರು. ಈಗ ಅದೇ ಧೋನಿ ಡ್ಯುಟಿಗೆ ತೆರಳುವ ಮೊದಲು ತಮ್ಮ ಶೂಗಳನ್ನ ತಾವೇ ಪಾಲಿಶ್‌ ಮಾಡ್ತಿರುವ ಫೋಟೋವೊಂದು ವೈರಲ್‌ ಆಗಿದೆ.

ಈ ಫೋಟೋದಲ್ಲಿ ಕೆಳಗೆ ಕುಳಿತು ಧೋನಿ ತಮ್ಮ ಶೂಗಳನ್ನ ತಾವೇ ಪಾಲಿಶ್ ಮಾಡಿಕೊಳ್ತಿದ್ದಾರೆ. ಎಲ್ಲಾ ಸೈನಿಕರಂತೆಯೇ ಮಾಹಿ ದಿನಚರಿಯೂ ಇರುತ್ತೆ. ಧೋನಿಯ ಈ ನಡೆಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ. 38 ವರ್ಷದ ಮಾಹಿಗೆ 2011ರಿಂದಲೇ ಭಾರತೀಯ ಟೆರಿಟೊರಿಯಲ್‌ ಆರ್ಮಿಯಲ್ಲಿ ಗೌರವಾರ್ಥವಾಗಿ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆ ನೀಡಲಾಗಿದೆ. ಒಬ್ಬ ಸಾಮಾನ್ಯ ಯೋಧನಂತೆ ಗಡಿಯಲ್ಲಿ ಸರಳವಾಗಿ ಕರ್ತವ್ಯ ನಿರ್ವಹಿಸ್ತಿರುವ ಧೋನಿ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ. ವಿಶೇಷ ಭದ್ರತೆ, ಸೌಲಭ್ಯಗಳಿಲ್ಲದೇ ವೀರನಂತೆ ಧೋನಿ ಈಗ ದೇಶ ಸೇವೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲರೂ ಈಗಲೂ ಧೋನಿಯನ್ನ ಪ್ರೀತಿಸ್ತಾರೆ. ಅವರ ಸರಳ ವ್ಯಕ್ತಿತ್ವದಿಂದಲೇ ಈಗ ಯುವಕರು ಭಾರತೀಯ ಸೇನೆಗೆ ಸೇರುವಂತೆ ಪ್ರೇರಣೆ ನೀಡುತ್ತಿದ್ದಾರೆ ಅಂತಾ ಫ್ಯಾನ್ಸ್‌ ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘಿಸುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.