ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ರೋಜರ್ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ.
ಎಂಎಸ್ ಧೋನಿ 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ಕೊನೆಯ ಬಾರಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು.
" ಅವರು(ಧೋನಿ) ತಮ್ಮ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಹಲವಾರು ಯುವ ಆಟಗಾರರು ವ್ಯವಸ್ಥೆಯ ಮೂಲಕ ರಾಷ್ಟ್ರೀಯ ತಂಡಕ್ಕೆ ಬರುತ್ತಿದ್ದಾರೆ. ಧೋನಿ ಯುವ ಪೀಳಿಗೆಯ ಆಟಗಾರರಿಗೆ ತಮ್ಮ ಗ್ಲೌಸ್ ನೀಡುವುದಕ್ಕೆ ಇದು ಸಕಾಲ. ಆದರೆ ಧೋನಿ ಗತಕಾಲ ಅತ್ಯುತ್ತಮವಾದದ್ದು ಎಂದು ಫೇಸ್ಬುಕ್ ಸಂವಾದದ ವೇಳೆ ತಿಳಿಸಿದ್ದಾರೆ.
"ಅವರನ್ನು(ಧೋನಿ) ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಈ ಹಿಂದೆ ತಮ್ಮ ಅತ್ಯುತ್ತಮ ಕ್ರಿಕೆಟ್ಅನ್ನು ಕಳೆದಿದ್ದಾರೆ. ಅವರು ತಮ್ಮ ಚಾಣಾಕ್ಷತನದಿಂದ ಹಲವಾರು ಪಂದ್ಯಗಳನ್ನು ಗೆದ್ದಕೊಟ್ಟಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಧೋನಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಮುನ್ನಡೆಸಸಲು ಸಿದ್ದರಿದ್ದರು. ಈಮೂಲಕ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್ನಲ್ಲಿ ಅವಕಾಶ ಪಡೆಯುವ ಆಸೆ ಹೊಂದಿದ್ದರು. ಆದರೆ ಕೋವಿಡ್ 19 ಭೀತಿಯಿಂದ ವಿಶ್ವಕಪ್ ಮುಂದೂಡಲ್ಪಟ್ಟಿದೆ. ಆದರೂ ಐಪಿಎಲ್ನಲ್ಲಿ ಅವರು ನೀಡುವ ಪ್ರದರ್ಶನದ ಮೇಲೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ನಿಂತಿದೆ.