ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ಬ್ಯಾಟಿಂಗ್ ವೈಫಲ್ಯದಿಂದ ಹಲವರ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ, ಅಭಿಮಾನಿಯೊಬ್ಬ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣವನ್ನೇ ಬಳಿಸುವ ಮೂಲಕ ತಾನೂ ಗೆದ್ದರೂ, ಸೋತರೂ ಧೋನಿಗೆ ತನ್ನ ಬೆಂಬಲ ಸದಾ ಇರುತ್ತದೆ ಎನ್ನುವುದನ್ನ ಸಾಬೀತುಪಡಿಸಿದ್ದಾನೆ.
ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ನಾಯಕನಾಗಿರುವ ಎಂಎಸ್ ಧೋನಿ ಇತ್ತೀಚೆಗಷ್ಟೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಒಂದು ವರ್ಷದ ಬಳಿಕ ಕ್ರಿಕೆಟ್ಗೆ ಮರಳಿರುವ ಟೀಮ್ ಇಂಡಿಯಾ ಮಾಜಿ ಕಪ್ತಾನ 13ನೇ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಈ ಕಾರಣದಿಂದ ಕೆಲವು ಕ್ರಿಕೆಟ್ ಪಂಡಿತರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಧೋನಿಯ ಕಟ್ಟಾ ಅಭಿಮಾನಿಯೊಬ್ಬ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣವನ್ನೇ ಹೊಡೆಸಿದ್ದು, ಅದಕ್ಕೆ 'ಹೋಮ್ ಆಫ್ ಧೋನಿ ಫ್ಯಾನ್' ಎಂದು ನಾಮಕರಣ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದಾರೆ.
-
Super Fan Gopi Krishnan and his family in Arangur, Tamil Nadu call their residence Home of Dhoni Fan and rightly so. 🦁💛
— Chennai Super Kings (@ChennaiIPL) October 13, 2020 " class="align-text-top noRightClick twitterSection" data="
A super duper tribute that fills our hearts with #yellove. #WhistlePodu #WhistleFromHome pic.twitter.com/WPMfuzlC3k
">Super Fan Gopi Krishnan and his family in Arangur, Tamil Nadu call their residence Home of Dhoni Fan and rightly so. 🦁💛
— Chennai Super Kings (@ChennaiIPL) October 13, 2020
A super duper tribute that fills our hearts with #yellove. #WhistlePodu #WhistleFromHome pic.twitter.com/WPMfuzlC3kSuper Fan Gopi Krishnan and his family in Arangur, Tamil Nadu call their residence Home of Dhoni Fan and rightly so. 🦁💛
— Chennai Super Kings (@ChennaiIPL) October 13, 2020
A super duper tribute that fills our hearts with #yellove. #WhistlePodu #WhistleFromHome pic.twitter.com/WPMfuzlC3k
ಸುಮಾರು 1.5 ಲಕ್ಷ ರೂ. ಖರ್ಚು ಮಾಡಿರುವ ಗೋಪಿಕೃಷ್ಣನ್ ಎಂಬಾತ ತನ್ನ ಮನೆಯ ಗೋಡೆಗಳ ಮೇಲೆ ಧೋನಿಯ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಸಿಎಸ್ಕೆ ಲೋಗೋ ಮತ್ತು ವಿಸಲ್ ಪೋಡು ಎಂಬ ಟ್ಯಾಗ್ ಲೈನ್ ಕೂಡ ಬರೆಸಿಕೊಂಡಿದ್ದಾರೆ.
ಗೋಪಿಕೃಷ್ಣನ್ ತಮಿಳುನಾಡಿನ ಕಡಲೂರು ನಿವಾಸಿಯಾಗಿದ್ದಾರೆ. ಇವರು ಕೆಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಸಿಎಸ್ಕೆ ಪಂದ್ಯಗಳಿಗೂ ಹಾಜರಾಗುತ್ತಿದ್ದ ಅವರಿಗೆ ಕೋವಿಡ್ 19 ಕಾರಣದಿಂದ ತಮ್ಮ ಸ್ವಂತ ಊರಿನಲ್ಲಿದ್ದಾರೆ. ಈ ವರ್ಷ ಕೋವಿಡ್ ಕಾರಣದಿಂದ ಸಿಎಸ್ಕೆ ಪಂದ್ಯಗಳನ್ನು ನೇರವಾಗಿ ಕ್ರೀಡಾಂಗಣದಲ್ಲಿ ನೋಡಲಾಗುತ್ತಿಲ್ಲ ಎಂಬ ಬೇಸರ ಕೂಡ ಅವರಿಗಿದೆ.
"ಧೋನಿ ಆಟವಾಡುವುದನ್ನು ನೇರವಾಗಿ ನೋಡಲು ಸಾಧ್ಯವಾಗದಿರುವುದಕ್ಕೆ ನಾನು ನಿರಾಸೆಗೊಂಡಿದ್ದೇನೆ. ಜೊತೆಗೆ ಧೋನಿ ಉತ್ತಮ ಪ್ರದರ್ಶನ ನೀಡದಿರುವುದಕ್ಕೆ ಸಾಕಷ್ಟು ಜನರು ಟೀಕಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರನ್ನು ಪ್ರೇರೇಪಿಸಲು ಬಯಸುತ್ತೇನೆ ಮತ್ತು ಅವರು ಗೆದ್ದರೂ ಅಥವಾ ಸೋಲನುಭವಿಸಿದರೂ ನಾನು ಯಾವಾಗಲೂ ಅವರನ್ನು ಬೆಂಬಲಿಸುತ್ತೇನೆ ಎಂದು” ಗೋಪಿಕೃಷ್ಣನ್ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.