ETV Bharat / sports

ಗಬ್ಬರ್​ಗೆ ನಿರಾಸೆ: ಕೇವಲ 2 ರನ್​ಗಳಿಂದ ಧವನ್​​ ಶತಕ ವಂಚಿತ - ಶಿಖರ್ ಧವನ್ 18ನೇ ಶತಕ

ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ಶಿಖರ್ ಧವನ್ ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟ ನೀಡಿದರು. ರೋಹಿತ್ ಔಟಾದ ನಂತರ ಬಿರುಸಿನ ಆಟವಾಡಿದ ಧವನ್, ನಾಯಕ ಕೊಹ್ಲಿ ಜೊತೆಗೆ 2ನೇ ವಿಕೆಟ್​ ಜೊತೆಯಾಟದಲ್ಲಿ 105 ರನ್​ ಸೇರಿಸಿದರು.

ಶಿಖರ್ ಧವನ್​
ಶಿಖರ್ ಧವನ್​
author img

By

Published : Mar 23, 2021, 4:48 PM IST

Updated : Mar 23, 2021, 5:34 PM IST

ಪುಣೆ: ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ವೈಫಲ್ಯ ಅನುಭವಿಸಿ ಅವಕಾಶ ವಂಚಿರಾಗಿದ್ದ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರಾದರೂ ಕೇವಲ 2 ರನ್​ಗಳಿಂದ ಶತಕ ವಂಚಿತರಾಗುವ ಮೂಲಕ ನಿರಾಶೆ ಅನುಭವಿಸಿದ್ದಾರೆ. ಆದರೂ 98 ರನ್ ​ಗಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಟಿ-20ಯಲ್ಲಿ ಬೆಂಚ್​ ಕಾದಿದ್ದ ಧವನ್, ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿ ಮೊದಲ ವಿಕೆಟ್​ಗೆ 64 ರನ್​ಗಳ ಜೊತೆಯಾಟ ನೀಡಿದರು. ರೋಹಿತ್ ಔಟಾದ ನಂತರ ಬಿರುಸಿನ ಆಟವಾಡಿದ ಡೆಲ್ಲಿ ಡ್ಯಾಶರ್​ ನಾಯಕ ಕೊಹ್ಲಿ ಜೊತೆಗೆ 2ನೇ ವಿಕೆಟ್​ ಜೊತೆಯಾಟದಲ್ಲಿ 105 ರನ್​ ಸೇರಿಸಿದರು.

106 ಎಸೆತಗಳನ್ನು ಎದುರಿಸಿದ ಅವರು 2 ಸಿಕ್ಸರ್​ ಮತ್ತು 11 ಬೌಂಡರಿಗಳ ನೆರವಿನಿಂದ 98 ರನ್​ಗಳಿಗೆ ಔಟಾಗುವ ಮೂಲಕ ತಮ್ಮ 18ನೇ ಏಕದಿನ ಶತಕವನ್ನು ಕೇವಲ 2 ರನ್​ಗಳಿಂದ ತಪ್ಪಿಸಿಕೊಂಡು ನಿರಾಶೆ ಅನುಭವಿಸಿದರು.

ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೂಡ 42 ಎಸೆತಗಳಲ್ಲಿ ಕೇವಲ 28 ರನ್ ​ಗಳಿಸಿ ಔಟಾದರೆ, ನಾಯಕ ವಿರಾಟ್​ ಕೊಹ್ಲಿ 56 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಕೂಡ ಕಳೆದ ಒಂದು ವರ್ಷ 222 ದಿನಗಳಿಂದ ಯಾವುದೇ ಮಾದರಿಯಲ್ಲಿ ಶತಕ ಸಿಡಿಸಿಲ್ಲ.

Last Updated : Mar 23, 2021, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.