ಗಬ್ಬಾ(ಆಸ್ಟ್ರೇಲಿಯಾ): ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ಗೆ ಜನಾಂಗೀಯ ನಿಂದನೆ ಮಾಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಇಂದಿನಿಂದ ಗಬ್ಬಾ ಮೈದಾನದಲ್ಲಿ ಆರಂಭಗೊಂಡಿರುವ ಅಂತಿಮ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಹಾಗೂ ವಾಷಿಂಗ್ಟನ್ ಸುಂದರ್ಗೆ ಇಂತಹ ಘಟನೆಯ ಅನುಭವ ಆಗಿದೆ.
ಇದನ್ನೂ ಓದಿ: ಸಿರಾಜ್ರನ್ನು ಪ್ರೇಕ್ಷಕರು ಕಂದು ನಾಯಿ, ದೊಡ್ಡ ಕೋತಿ ಎಂದು ನಿಂದಿಸಿದ್ದಾರೆ : ಬಿಸಿಸಿಐ ಮೂಲ
ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡ್ತಿದ್ದ ವೇಳೆ ಅಭಿಮಾನಿಗಳ ಗುಂಪೊಂದು ಅವರಿಗೆ ಪದೇ ಪದೆ 'ಗ್ರಬ್ಸ್' ಎಂದು ಕರೆದು ಲೇವಡಿ ಮಾಡಿದೆ. ಇದರ ಜತೆಗೆ ಮೊಹಮ್ಮದ್ ಸಿರಾಜ್ಗೆ “Que Shiraz, Shiraz” to the tune of Que Sera, Sera ಎಂದು ಕರೆದಿದ್ದಾರೆ. ಸಿಡ್ನಿ ಮೈದಾನದಲ್ಲಿ ನಡೆದ ಜನಾಂಗೀಯ ನಿಂದನೆ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದರ ಬಗ್ಗೆ ಕ್ಷಮೆಯಾಚನೆ ಮಾಡಿತ್ತು.
ಗಬ್ಬಾ ಮೈದಾನದಲ್ಲಿ ಇಂದಿನಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ಮೊದಲ ದಿನಾದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಕೆ ಮಾಡಿದೆ.