ETV Bharat / sports

‘ಕೊಹ್ಲಿ ಬ್ರದರ್​ , ಇದು ನೀವೇನಾ... ಗೊಂದಲಕ್ಕೆ ಎಡೆಮಾಡಿಕೊಟ್ಟ ಪಾಕ್​ ಬೌಲರ್​ ಟ್ವೀಟ್​ - Pakistan booweler

ಪಾಕಿಸ್ತಾನ ವೇಗಿ ಮೊಹಮ್ಮದ್​ ಅಮೀರ್ ತಮ್ಮ ಬಿಡುವಿನ ವೇಳೆಯಲ್ಲಿ ಟರ್ಕೀಸ್​ ಡ್ರಾಮಾ​ ಸಿರೀಸ್​ ನೋಡುವ ಸಂದರ್ಭದಲ್ಲಿ ಕೊಹ್ಲಿಯಂತೆ ಇರುವ ನಟನ ಫೋಟೋವೊಂದನ್ನು ಗುರುತಿಸಿ ಆ ಫೋಟೋ ತೆಗೆದು ಶೇರ್​ ಮಾಡಿಕೊಂಡಿದ್ದಾರೆ.

ವಿರಾಟ್​
ವಿರಾಟ್​
author img

By

Published : May 17, 2020, 3:36 PM IST

ಲಾಹೋರ್​: ಪಾಕಿಸ್ತಾನದ ಸ್ಟಾರ್​ ವೇಗದ ಬೌಲರ್ ಮೊಹಮ್ಮದ್​ ಅಮೀರ್​ , ಕೊಹ್ಲಿ ತದ್ರೂಪಿ ಸಿನಿಮಾ ನಟನ ಫೋಟೋವೊಂದನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಕೊರೊನಾ ಲಾಕ್​ಡೌನ್​ನಿಂದ ಕ್ರಿಕೆಟ್​ ಸ್ಥಗಿತಗೊಂಡಿದ್ದು, ಕ್ರಿಕೆಟಿಗರು ಸಮಯಕಳೆಯಲು ಸಾಮಾಜಿಕ ಜಾಲಾತಾಣಗಳ ಮೊರೆ ಹೋಗಿದ್ದಾರೆ. ಪಾಕಿಸ್ತಾನ ವೇಗಿ ತಮ್ಮ ಬಿಡುವಿನ ವೇಳೆಯಲ್ಲಿ ಟರ್ಕೀಸ್​ ಡ್ರಾಮಾ​ ಸಿರೀಸ್​ ನೋಡುವ ಸಂದರ್ಭದಲ್ಲಿ ಕೊಹ್ಲಿಯಂತೆ ಇರುವ ನಟನ ಫೋಟೋವೊಂದನ್ನು ಗುರುತಿಸಿ ಆ ಫೋಟೋ ತೆಗೆದು ಶೇರ್​ ಮಾಡಿಕೊಂಡಿದ್ದಾರೆ.

‘ಕೊಹ್ಲಿ ಬ್ರದರ್​ , ಇದು ನೀವೇನಾ, ನಾನು ಇದನ್ನು ನೋಡಿ ಗೊಂದಲಕ್ಕೊಳಗಾಗಿದ್ದೇನೆ’ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಇತ್ತೇಚೆಗೆ ಪಿಸಿಬಿ 2020-21ರ ಕೇಂದ್ರಗುತ್ತಿಗೆ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಹಿರಿಯ ವೇಗಿಗಳಾದ ಅಮೀರ್​, ವಹಾಬ್​ ರಿಯಾಜ್​ ಹಾಗೂ ಹಸನ್​ ಅಲಿ ಅವರನ್ನು ಗುತ್ತಿಗೆಯಿಂದ ಕೈಬಿಟ್ಟಿತ್ತು. ಅಮೀರ್​ ಟ್ವೀಟ್​ಗೆ ಪ್ರತಿಕ್ರಿಯಿಸುತ್ತಿರುವ ಕೆಲವು ಅಭಿಮಾನಿಗಳು ಅಮೀರ್​ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.