ಸೌತಾಂಪ್ಟನ್: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಎರಡನೇ ಪಂದ್ಯದ ವೇಳೆ ಬೆರಳಿನ ಗಾಯಕ್ಕೊಳಗಾಗಿದ್ದರಿಂದ 3ನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದು, ಉಪನಾಯಕ ಮೊಯಿನ್ ಅಲಿ ತಂಡದ ನಾಯಕರಾಗಿ ಬಡ್ತಿ ಪಡೆದಿದ್ದಾರೆ.
ಇಯಾನ್ ಮಾರ್ಗನ್ ಫೀಲ್ಡಿಂಗ್ ವೇಳೆ ಬೆರಳಿನ ಗಂಭೀರ ಗಾಯಕ್ಕೆ ಒಳಗಾಗಿದ್ದರು. ಆದರೂ ಬ್ಯಾಟಿಂಗ್ ನಡೆಸಿದ್ದ ಅವರು 7 ರನ್ಗಳಿಸಿ ಔಟಾಗಿದ್ದರು. ಏಕದಿನ ಸರಣಿಗೂ ಮುನ್ನ ಅವರಿಗೆ ಇಸಿಬಿ ವಿಶ್ರಾಂತಿ ನೀಡಿದ್ದು ಔಪಚಾರಿಕ ಪಂದ್ಯವಾದ ಕೊನೆಯ ಟಿ20ಯಲ್ಲಿ ಮೊಯಿನ್ ಅಲಿಗೆ ನಾಯಕತ್ವ ನೀಡಿದೆ. ಮೊಯಿನ್ ಅಲಿ ಟಿ20 ಬ್ಯಾಸ್ಟ್ ಪ್ರಶಸ್ತಿ ಗೆದ್ದ ತಂಡದ ನಾಯಕರಾಗಿದ್ದಾರೆ.
-
Both sides have made changes from the second T20I, including Moeen Ali stepping up as captain for England with Eoin Morgan ruled out through injury 🤕 #ENGvAUS pic.twitter.com/mMegeJKOj1
— ICC (@ICC) September 8, 2020 " class="align-text-top noRightClick twitterSection" data="
">Both sides have made changes from the second T20I, including Moeen Ali stepping up as captain for England with Eoin Morgan ruled out through injury 🤕 #ENGvAUS pic.twitter.com/mMegeJKOj1
— ICC (@ICC) September 8, 2020Both sides have made changes from the second T20I, including Moeen Ali stepping up as captain for England with Eoin Morgan ruled out through injury 🤕 #ENGvAUS pic.twitter.com/mMegeJKOj1
— ICC (@ICC) September 8, 2020
ಈ ಮೂಲಕ ಆಂಗ್ಲರ ಟಿ20 ತಂಡವನ್ನು ಮುನ್ನಡೆಸಿದ ಏಷ್ಯಾ ಮೂಲದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಮೊಯಿನ್ ಅಲಿ ಪಾತ್ರರಾದರು. ಹಾಗೂ ಯಾವುದೇ ಮಾದರಿ ಕ್ರಿಕೆಟ್ನಲ್ಲಿ ನಾಸಿರ್ ಹುಸೇನ್ ನಂತರ ಇಂಗ್ಲೆಂಡ್ ತಂಡದ ನಾಯಕನಾದ ಹೆಗ್ಗಳಿಕೆಗೂ ಪಾತ್ರರಾದರು. ನಾಸಿರ್ 2003ರಲ್ಲಿ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು.
ಇಂಗ್ಲೆಂಡ್ ತಂಡವನ್ನು ಮುನ್ನಡೆಸುವುದು ಒಂದು ದೊಡ್ಡ ಗೌರವ, ಆ ಜವಾಬ್ದಾರಿವಹಿಸಿಕೊಳ್ಳುವುದಕ್ಕೆ ಖುಷಿಯಾಗಿದೆ. ಆದರೆ ಮಾರ್ಗನ್ ರಷ್ಟು ಉತ್ತಮ ಎಂದು ಆಲೋಚಿಸುವುದಿಲ್ಲ. ಮಾರ್ಗನ್ ಅಂತಹ ನಾಯಕರು ತಂಡದಲ್ಲಿ ಇತರ ನಾಯಕರನ್ನು ಸೃಷ್ಠಿಸುತ್ತಾರೆ ಎಂದಿದ್ದಾರೆ.
ಈಗಾಗಲೆ ಸರಣಿ ಗೆದ್ದಿರುವ ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಆಸ್ಟ್ರೇಲಿಯಾ ಕೂಡ ಡೇವಿಡ್ ವಾರ್ನರ್,ಪ್ಯಾಟ್ ಕಮ್ಮಿನ್ಸ್ ಹಾಗೂ ಅಲೆಕ್ಸ್ ಕ್ಯಾರಿಗೆ ವಿಶ್ರಾಂತಿ ನೀಡಿದೆ.