ದುಬೈ: ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಸ್ಥಿರವಾಗಿದ್ದರೆ, ಸ್ಪೋಟಕ ಬ್ಯಾಟರ್ ಸ್ಮೃತಿ ಮಂಧಾನ ಒಂದು ಸ್ಥಾನ ಕುಸಿತ ಕಂಡ 6ರಿಂದ 7ಕ್ಕಿಳಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಿಥಾಲಿ ರಾಜ್ 4 ರೇಟಿಂಗ್ ಅಂಕಗಳನ್ನು ಹೆಚ್ಚಿಸಿಕೊಂಡಿದ್ದರೂ, ಆಸ್ಟ್ರೇಲಿಯಾದ ಆಲ್ರೌಂಡರ್ ಎಲಿಸ್ ಪೆರ್ರಿ ಅವರೊಂದಿಗೆ 9ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
-
↗️ Laura Wolvaardt
— ICC (@ICC) March 9, 2021 " class="align-text-top noRightClick twitterSection" data="
↗️ Lizelle Lee
After winning the first #INDvSA ODI, South Africa batters sizzle in the weekly @MRFWorldwide ICC Women's ODI Rankings update.
Full list: https://t.co/KjDYT8qgqn pic.twitter.com/KlfegTU8ia
">↗️ Laura Wolvaardt
— ICC (@ICC) March 9, 2021
↗️ Lizelle Lee
After winning the first #INDvSA ODI, South Africa batters sizzle in the weekly @MRFWorldwide ICC Women's ODI Rankings update.
Full list: https://t.co/KjDYT8qgqn pic.twitter.com/KlfegTU8ia↗️ Laura Wolvaardt
— ICC (@ICC) March 9, 2021
↗️ Lizelle Lee
After winning the first #INDvSA ODI, South Africa batters sizzle in the weekly @MRFWorldwide ICC Women's ODI Rankings update.
Full list: https://t.co/KjDYT8qgqn pic.twitter.com/KlfegTU8ia
ಆಕರ್ಷಕ 40 ರನ್ ಸಿಡಿಸಿದ್ದ ಹರ್ಮನ್ ಪ್ರೀತ್ ಕೌರ್ ಒಂದು ಸ್ಥಾನ ಮೇಲೇರಿ 17ಕ್ಕೇರಿದ್ದಾರೆ. ಇತ್ತ ದಕ್ಷಿಣ ಆಫ್ರಿಕಾ ಪರ ಅರ್ಧಶತಕ ಸಿಡಿಸಿದ್ದ ಲೌರಾ ವಾಲ್ವಾರ್ಡ್ಟ್ ಒಂದು ಸ್ಥಾನ ಮೇಲೇರಿದ್ದರೆ,ಲಿಜೆಲ್ಲೆ ಲೀ 3 ಸ್ಥಾನಗಳ ಏರಿಕೆ ಕಂಡು ಮಂಧಾನ ನಂತರದಲ್ಲಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ಇಸ್ಮಾಯಿಲ್ 4ರಿಂದ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮತ್ತೊಬ್ಬ ವೇಗಿ ಅಯಬೊಂಗಾ ಕಾಕ 3 ಸ್ಥಾನ ಮೇಲೇರಿ 10ನೇ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಜೂಲನ್ ಗೋಸ್ವಾಮಿ, ಪೂನಮ್ ಯಾದವ್ ಮತ್ತು ಶಿಖಾ ಪಾಂಡೆ ಕ್ರಮವಾಗಿ 5,6 ಮತ್ತು 8ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಜೆಸ್ ಜೊನಾಸೆನ್ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನು ಓದಿ: ಸ್ಪೋರ್ಟ್ಸ್ ಆ್ಯಂಕರ್ ಸಂಜನಾ ಗಣೇಶನ್ ಜೊತೆ ಜಸ್ಪ್ರೀತ್ ಬುಮ್ರಾ ವಿವಾಹ: ವರದಿ