ಬರ್ಮಿಂಗ್ಹ್ಯಾಮ್: ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹಾಗೂ ಇಂಗ್ಲೆಂಡ್ನ ಜೋ ರೂಟ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ 2019ರ ವಿಶ್ವಕಪ್ನಲ್ಲಿ 27 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೂರ್ಣಿಯಲ್ಲಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದವರೇ ಆದ ಮೆಕ್ಗ್ರಾತ್ 2007 ವಿಶ್ವಕಪ್ನಲ್ಲಿ 26 ವಿಕೆಟ್ ಪಡೆದಿರುವುದು ವಿಶ್ವದಾಕಲೆಯಾಗಿತ್ತು.
ಇನ್ನು ಜೋ ರೂಟ್ ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಪಡೆಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಕ್ಯಾಚ್ ಪಡೆದ ಫೀಲ್ಡರ್ ಎನಿಸಿಕೊಂಡರು. ರೂಟ್ ಪ್ರಸ್ತುತ ವಿಶ್ವಕಪ್ನಲ್ಲಿ 12 ಕ್ಯಾಚ್ ಪಡೆದಿದ್ದಾರೆ. ರೂಟ್ಗೂ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2003 ರ ವಿಶ್ವಕಪ್ನಲ್ಲಿ 11 ಕ್ಯಾಚ್ ಪಡೆದಿದ್ದು ಈವರೆಗಿ ದಾಖಲೆಯಾಗಿತ್ತು.