ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನ್ಯೂಜಿಲ್ಯಾಂಡ್ನ ಮಾಜಿ ಆಟಗಾರ ಮೈಕ್ ಹಸ್ಸನ್ ಇದೀಗ ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಟೀಂ ಇಂಡಿಯಾ ಪುರುಷರ ತಂಡದ ಕೋಚ್ ಆಗಲು ಮುಂದಾಗಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಹಿರಿಯರ ತಂಡದ ಕೋಚ್ ಹುದ್ದಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ಪಂಜಾಬ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
-
A message from me regarding @lionsdenkxip pic.twitter.com/xOGfEw4LBq
— Mike Hesson (@CoachHesson) August 7, 2019 " class="align-text-top noRightClick twitterSection" data="
">A message from me regarding @lionsdenkxip pic.twitter.com/xOGfEw4LBq
— Mike Hesson (@CoachHesson) August 7, 2019A message from me regarding @lionsdenkxip pic.twitter.com/xOGfEw4LBq
— Mike Hesson (@CoachHesson) August 7, 2019
ಈಗಾಗಲೇ ನ್ಯೂಜಿಲ್ಯಾಂಡ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಮೈಕ್ ಹಸ್ಸೆನ್, ಇದೀಗ ಟೀಂ ಇಂಡಿಯಾ ಕೋಚ್ ಆಗಲು ಮುಂದಾಗಿದ್ದಾರೆ. ಇವರ ಜತೆಗೆ ಆಸ್ಟ್ರೇಲಿಯಾ ಆಲ್ರೌಂಡರ್ ಟಾಮ್ ಮೂಡಿ, ಟೀಂ ಇಂಡಿಯಾದ ಮಾಜಿ ಪ್ಲೇಯರ್ ರಾಬಿನ್ ಸಿಂಗ್, ಲಾಲ್ಚಂದ್ ರಜಪೂತ್ ಸೇರಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ದ. ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್ ಕೂಡ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಒಟ್ಟು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ಇನ್ನು ಈಗಾಗಲೇ ಕೋಚ್ ಆಗಿರುವ ರವಿಶಾಸ್ತ್ರಿ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರರಾಗಿ ಸೇರಲು ಆರಂಭದಲ್ಲಿ ಉತ್ಸಾಹ ತೋರಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ದನೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.