ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್ಗಳಿಂದ ಮಣಿಸಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ 201ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ಗಳಿಸಿ 57 ರನ್ಗಳ ಸೋಲುಕಂಡಿತು.
ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡ ಖಾತೆ ತೆರೆಯುವ ಮುನ್ನವೇ 3 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ , ರಹಾನೆಯನ್ನ ಬೌಲ್ಟ್ ಪೆವಿಲಿಯನ್ಗಟ್ಟಿದರೆ, ಶಿಖರ್ ಧವನ್ರನ್ನ ಬುಮ್ರಾ ಬೌಲ್ಡ್ ಮಾಡಿದರು. ನಂತರ ಬಂದ ಶ್ರೇಯಸ್ ಅಯ್ಯರ್ 12 ರನ್ಗಳಿಸಿ ಬುಮ್ರಾಗೆ 2ನೇ ಬಲಿಯಾದರೆ, ಪಂತ್ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿ ಕೇವಲ 3 ರನ್ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
-
An all-round performance by #MumbaiIndians as they beat #DelhiCapitals by 57 runs and march into the #Dream11IPL final 🔝🔥👏#MIvDC pic.twitter.com/el0nvnT58A
— IndianPremierLeague (@IPL) November 5, 2020 " class="align-text-top noRightClick twitterSection" data="
">An all-round performance by #MumbaiIndians as they beat #DelhiCapitals by 57 runs and march into the #Dream11IPL final 🔝🔥👏#MIvDC pic.twitter.com/el0nvnT58A
— IndianPremierLeague (@IPL) November 5, 2020An all-round performance by #MumbaiIndians as they beat #DelhiCapitals by 57 runs and march into the #Dream11IPL final 🔝🔥👏#MIvDC pic.twitter.com/el0nvnT58A
— IndianPremierLeague (@IPL) November 5, 2020
ಒಂದು ಹಂತದಲ್ಲಿ 41ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡ 100ರೊಳಗೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ ಸ್ಟೋಯ್ನಿಸ್ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 65 ರನ್ ಹಾಗೂ ಅಕ್ಸರ್ ಪಟೇಲ್ 33 ಎಸೆತಗಳಲ್ಲಿ 2 ಬೌಂಡರಿ ,3 ಸಿಕ್ಸರ್ಗಳ ಸಹಿತ 42 ರನ್ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರಲ್ಲದೆ ಸೋಲಿನ ಅಂತರವನ್ನು ತಗ್ಗಿಸಿದರು. ರಬಾಡ 15 ರನ್ಗಳಿಸಿ ಔಟಾಗದೆ ಉಳಿದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ 4 ಓವರ್ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 2 ಓವರ್ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಪೊಲಾರ್ಡ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ತಂಡಕ್ಕೆ ಡಿಕಾಕ್ 40, ಸೂರ್ಯಕುಮಾರ್ ಯಾದವ್ 51, ಇಶಾನ್ ಕಿಶನ್ 55, ಹಾರ್ದಿಕ್ ಪಾಂಡ್ಯ 37 ರನ್ಗಳಿಸಿ 200 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
ಮುಂಬೈ ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿದರು. ಈ ಹಿಂದಿನ 5 ಫೈನಲ್ಗಳಲ್ಲಿ 4 ಬಾರಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಂಬೈ 2010 ರಲ್ಲಿ ಚೆನ್ನೈ ವಿರುದ್ಧ ಸೋಲುಕಂಡು ರನ್ನರ್ ಅಪ್ ಆಗಿತ್ತು.