ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಒಂದು ವರ್ಷ ಬಾಕಿ ಇದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ. ಈಗಾಗಲೆ 10 ತಂಡಗಳು ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ 6 ಸ್ಥಾನಕ್ಕಾಗಿ 14 ತಂಡಗಳು ಕಾದಾಟ ನಡೆಸಲಿವೆ.
ಇಂದಿನಿಂದ ಅರ್ಹತಾ ಸುತ್ತಿನ ಪಂದ್ಯಗಳು ಪ್ರಾರಂಭವಾಗಿವೆ. ಅರ್ಹತಾ ಸುತ್ತಿನ ಟೂರ್ನಿಯಲ್ಲಿರುವ 14 ತಂಡಗಳನ್ನ A ಮತ್ತು B ಗುಂಪುಗಳಾಗಿ ವಿಭಾಗಸಿದ್ದು, ಪ್ರತಿಯೊಂದು ಗುಂಪಿನಲ್ಲೂ 7 ತಂಡಗಳು ಇರಲಿವೆ. ಒಂದೊಂದು ತಂಡ ಪ್ರತಿಯೊಂದು ತಂಡದ ವಿರುದ್ಧ 1 ಪಂದ್ಯಗಳನ್ನ ಆಡಬೇಕು. ಅಂತಿಮವಾಗಿ ಎರಡೂ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ತಂಡಗಳು ನೇರವಾಗಿ ಟಿ-20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಪ್ರತಿ ಗುಂಪಿನಲ್ಲಿರುವ 2 ಮತ್ತು 3ನೇ ಸ್ಥಾನದಲ್ಲಿರುವ ತಂಡ ಪ್ಲೇ ಆಫ್ ಸುತ್ತಿನಲ್ಲಿ ಸೆಣಸಾಡಲಿವೆ. ಈ ಹಂತದಲ್ಲಿ ಜಯ ಗಳಿಸುವ 2 ತಂಡಗಳು ಟಿ-20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲಿವೆ. ಇನ್ನು ಈ ಪ್ಲೇ ಆಫ್ ಹಂತದಲ್ಲಿ ಸೋಲು ಅನುಭವಿಸುವ ತಂಡ ನಾಲ್ಕನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಕಾದಾಟ ನಡೆಸಲಿವೆ. ಈ ಹಂತದಲ್ಲಿ ಜಯಗಳಿಸುವ 2 ತಂಡಗಳು ಅಂತಿಮ 2 ಸ್ಥಾನಕ್ಕೆ ಅರ್ಹತೆ ಪಡೆದುಕೊಳ್ಳಲಿವೆ.
ಪ್ರತಿಯೊಂದು ಅರ್ಹತಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇಂದಿನಿಂದ ಅರ್ಹತಾ ಸುತ್ತಿನ ಪಂದ್ಯಗಳು ಪ್ರಾರಂಭವಾಗಿದ್ದು ಮೊದಲ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಸಿಂಗಪುರ್ ತಂಡ ಜಯಗಳಿಸಿ ಶುಭಾರಂಭ ಮಾಡಿದೆ.