ETV Bharat / sports

ಶತಕವೀರ ಅಗರ್​ವಾಲ್ ಉಪಹಾರ ಕ್ರಮ ಗೊತ್ತೇ? ಪುಜಾರಾ ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು!

author img

By

Published : Oct 10, 2019, 8:10 PM IST

ಶತಕಗಳ ಮೇಲೆ ಶತಕ ಬಾರಿಸಿ ಹರಿಣಗಳನ್ನು ಹೈರಾಣಗೊಳಿಸುತ್ತಿರುವ ಮಯಾಂಕ್​ 2ನೇ ಟೆಸ್ಟ್​ನ ಮೊದಲ ದಿನದ ಬಳಿಕ ಪೂಜಾರ ನಡೆಸಿದ ಸಂದರ್ಶನದಲ್ಲಿ ತಮ್ಮ ಯಶಸ್ವಿನ ಹಿಂದಿರುವ ಸೀಕ್ರೆಟ್​ ಬಹಿರಂಗ ಮಾಡಿದ್ದಾರೆ.

mayank

ಪುಣೆ: ದ. ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚುತ್ತಿರುವ ಕನ್ನಡಿಗ ಅಗರ್​ವಾಲ್​ ಪಂದ್ಯಕ್ಕೂ ಮುನ್ನ ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿದ್ದಾರೆ.

ಮಯಾಂಕ್​ ಪಂದ್ಯಕ್ಕೂ ಮುನ್ನ ಕೇವಲ 2 ಎರಡು ಇಡ್ಲಿ ಹಾಗೂ ತೆಂಗಿನ ಕಾಯಿ ಚಟ್ನಿ ಮಾತ್ರ ಸೇವಿಸುವುದಾಗಿ ಹೇಳಿದ್ರು.

ಪ್ರಥಮ ದರ್ಜೆ ಕ್ರಿಕೆಟ್​ನ ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಮುಂದುವರಿಸುತ್ತಿರುವುದರ ಬಗ್ಗೆ ಮಾತನಾಡಿರುವ ಯುವ ಕ್ರಿಕೆಟಿಗ, ದೇಶಿ ಕ್ರಿಕೆಟ್​ನಲ್ಲಿ ಸಾಕಷ್ಟು ರನ್​ಗಳಿಸಿದಾಗ ವಿದೇಶದಲ್ಲಿ ಭಾರತ ಎ ತಂಡದ ಪರ ಆಡಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ವಿರುದ್ಧ ಕ್ವಾಲಿಟಿ ಬೌಲಿಂಗ್​ ಎದುರಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಜೊತೆಗೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಪದಾರ್ಪಣೆ ಮಾಡಿ ರನ್​ಗಳಿಸುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.

ರಣಜಿಯಂತಹ ಸುದೀರ್ಘ ಸರಣಿಯಲ್ಲಿ ಪಾಲ್ಗೊಳ್ಳುವುದರಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ರನ್​ಗಳಿಸಲು ಸುಲಭವಾಗಿದೆ ಎಂದು ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.

ಪೂಜಾರ-ಮಯಾಂಕ್​​ ಸಂದರ್ಶನ ವೀಕ್ಷಿಸಿ http://www.bcci.tv/vijay-hazare-trophy-2019-20/match/59

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.