ETV Bharat / sports

ವೇಡ್-ಮ್ಯಾಕ್ಸ್​ವೆಲ್ ಸಿಡಿಲಬ್ಬರದ ಅರ್ಧಶತಕ.. ಭಾರತ​ಕ್ಕೆ 187 ರನ್​ಗಳ ಟಾರ್ಗೇಟ್​

author img

By

Published : Dec 8, 2020, 3:43 PM IST

ವೇಡ್​ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 80 ರನ್​ ಹಾಗೂ ಮ್ಯಾಕ್ಸ್​ವೆಲ್ ಕೇವಲ 36 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳೊಂದಿಗೆ 54 ರನ್​ ಗಳಿಸಿದರು..

ವೇಡ್-ಮ್ಯಾಕ್ಸ್​ವೆಲ್
ವೇಡ್-ಮ್ಯಾಕ್ಸ್​ವೆಲ್

ಸಿಡ್ನಿ : ಮೊನಚು ಕಾಣದ ಭಾರತೀಯ ಬೌಲಿಂಗ್​ ದಾಳಿಯನ್ನು ಮನಬಂದಂತೆ ದಂಡಿಸಿದ ಮ್ಯಾಕ್ಸ್​ವೆಲ್ ಹಾಗೂ ಮ್ಯಾಥ್ಯೂ ವೇಡ್ ಆಕರ್ಷಕ ಅರ್ಧಶತಕ ಸಿಡಿಸಿ ಭಾರತಕ್ಕೆ ಬೃಹತ್​ ಮೊತ್ತದ ಟಾರ್ಗೆಟ್​ ನೀಡಲು ನೆರವಾಗಿದ್ದಾರೆ.

ಕೊನೆಯ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಓವರ್​ನಲ್ಲೇ ವಾಷಿಂಗ್ಟನ್​ ಸುಂದರ್​ ಆಸ್ಟ್ರೇಲಿಯಾ ನಾಯಕ ಫಿಂಚ್​ ವಿಕೆಟ್​ ಪಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

Australia finish with 186/5 on the back of fifties from Glenn Maxwell and Matthew Wade!

What are your predictions for the chase? 👀#AUSvIND SCORECARD 👉 https://t.co/aLozLSAnsU pic.twitter.com/EnDwHzsPzJ

— ICC (@ICC) December 8, 2020 ">

ಆದರೆ, ಮ್ಯಾಥ್ಯೂ ವೇಡ್​ ಮತ್ತು ಸ್ಮಿತ್​ 2ನೇ ವಿಕೆಟ್‌ಗೆ 65 ರನ್​ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಸ್ಮಿತ್​ 23 ಎಸೆತಗಳಲ್ಲಿ 24 ರನ್​ಗಳಿಸಿ ಔಟಾದರು. ನಂತರ ವೇಡ್​ ಜೊತೆಗೂಡಿದ ಮ್ಯಾಕ್ಸ್​ವೆಲ್ ಸಿಕ್ಕ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ಕೇವಲ 36 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳೊಂದಿಗೆ 54 ರನ್​ ಸಿಡಿಸಿದರು. ಅಲ್ಲದೆ ವೇಡ್​ ಜೊತೆ 3ನೇ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನಡೆಸಿದರು.

ವೇಡ್​ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರು.​ ಡಾರ್ಸಿ ಶಾರ್ಟ್​ 7, ಹೆನ್ರಿಕ್ಸ್​ ಅಜೇಯ 5, ಸ್ಯಾಮ್ಸ್​ ಅಜೇಯ 4 ರನ್​ ಗಳಿಸಿದರು. ಭಾರತದ ಪರ ವಾಷಿಂಗ್ಟನ್​ ಸುಂದರ್​ 34ಕ್ಕೆ 2, ನಟರಾಜನ್​ 33ಕ್ಕೆ1, ಶಾರ್ದುಲ್ ಠಾಕೂರ್​ 43ಕ್ಕೆ 1 ವಿಕೆಟ್​ ಪಡೆದರು.

ಸಿಡ್ನಿ : ಮೊನಚು ಕಾಣದ ಭಾರತೀಯ ಬೌಲಿಂಗ್​ ದಾಳಿಯನ್ನು ಮನಬಂದಂತೆ ದಂಡಿಸಿದ ಮ್ಯಾಕ್ಸ್​ವೆಲ್ ಹಾಗೂ ಮ್ಯಾಥ್ಯೂ ವೇಡ್ ಆಕರ್ಷಕ ಅರ್ಧಶತಕ ಸಿಡಿಸಿ ಭಾರತಕ್ಕೆ ಬೃಹತ್​ ಮೊತ್ತದ ಟಾರ್ಗೆಟ್​ ನೀಡಲು ನೆರವಾಗಿದ್ದಾರೆ.

ಕೊನೆಯ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಓವರ್​ನಲ್ಲೇ ವಾಷಿಂಗ್ಟನ್​ ಸುಂದರ್​ ಆಸ್ಟ್ರೇಲಿಯಾ ನಾಯಕ ಫಿಂಚ್​ ವಿಕೆಟ್​ ಪಡೆದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ, ಮ್ಯಾಥ್ಯೂ ವೇಡ್​ ಮತ್ತು ಸ್ಮಿತ್​ 2ನೇ ವಿಕೆಟ್‌ಗೆ 65 ರನ್​ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಸ್ಮಿತ್​ 23 ಎಸೆತಗಳಲ್ಲಿ 24 ರನ್​ಗಳಿಸಿ ಔಟಾದರು. ನಂತರ ವೇಡ್​ ಜೊತೆಗೂಡಿದ ಮ್ಯಾಕ್ಸ್​ವೆಲ್ ಸಿಕ್ಕ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ಕೇವಲ 36 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳೊಂದಿಗೆ 54 ರನ್​ ಸಿಡಿಸಿದರು. ಅಲ್ಲದೆ ವೇಡ್​ ಜೊತೆ 3ನೇ ವಿಕೆಟ್​ಗೆ 90 ರನ್​ಗಳ ಜೊತೆಯಾಟ ನಡೆಸಿದರು.

ವೇಡ್​ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರು.​ ಡಾರ್ಸಿ ಶಾರ್ಟ್​ 7, ಹೆನ್ರಿಕ್ಸ್​ ಅಜೇಯ 5, ಸ್ಯಾಮ್ಸ್​ ಅಜೇಯ 4 ರನ್​ ಗಳಿಸಿದರು. ಭಾರತದ ಪರ ವಾಷಿಂಗ್ಟನ್​ ಸುಂದರ್​ 34ಕ್ಕೆ 2, ನಟರಾಜನ್​ 33ಕ್ಕೆ1, ಶಾರ್ದುಲ್ ಠಾಕೂರ್​ 43ಕ್ಕೆ 1 ವಿಕೆಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.