ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್​ ತಂಡದ ಆಲ್​ರೌಂಡರ್​ ಮಾರ್ಲಾನ್​​ - ಕ್ರಿಕೆಟ್ ವೆಸ್ಟ್ ಇಂಡೀಸ್​

ಸ್ಯಾಮ್ಯುಯೆಲ್ಸ್ ವೆಸ್ಟ್​ ಇಂಡೀಸ್ ಅಲ್ಲದೆ ಕೆಲವು ಟಿ-20 ಲೀಗ್​ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ಐಪಿಎಲ್​ನಲ್ಲಿ ಡೆಲ್ಲಿ ಡೇರ್​ ಡೇವಿಲ್ಸ್, ಪುಣೆ ವಾರಿಯರ್ಸ್, ಬಿಗ್​ಬ್ಯಾಶ್​ನಲ್ಲಿ ಮೆಲ್ಬೋರ್ನ್​ ರೆನೆಗೇರ್ಡ್ಸ್​, ಪಿಎಸ್​ಎಲ್​ನಲ್ಲಿ ಪೇಶಾವರ ಝಲ್ಮಿ ತಂಡದ ಪರ ಆಡಿದ್ದರು.

ಮಾರ್ಲಾನ್​​ ಸ್ಯಾಮ್ಯುಯೆಲ್ಸ್​
ಮಾರ್ಲಾನ್​​ ಸ್ಯಾಮ್ಯುಯೆಲ್ಸ್​
author img

By

Published : Nov 4, 2020, 4:19 PM IST

ಸೇಂಟ್​ ಲೂಸಿಯ: ವೆಸ್ಟ್​ ಇಂಡೀಸ್​ ತಂಡದ ಮಾಜಿ ಬ್ಯಾಟ್ಸ್​ಮನ್​ ಮಾರ್ಲಾನ್ ಸ್ಯಾಮ್ಯುಯೆಲ್ಸ್​ ವೃತ್ತಿಪರ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಜೂನ್​ ತಿಂಗಳಲ್ಲೇ ಸ್ಯಾಮ್ಯುಯೆಲ್ಸ್​ ತಮ್ಮ ನಿವೃತ್ತಿ ಕುರಿತು ಕ್ರಿಕೆಟ್​ ಬೋರ್ಡ್​ಗೆ ಮಾಹಿತಿ ನೀಡಿದ್ದರು ಎಂದು ಕ್ರಿಕೆಟ್ ವೆಸ್ಟ್​ ಇಂಡೀಸ್​ ಮುಖ್ಯಸ್ಥ ಜಾನಿ ಗ್ರೇವ್​ ತಿಳಿಸಿದ್ದಾರೆ. ಸ್ಯಾಮ್ಯುಯೆಲ್ಸ್​ 2018ರಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.

39 ವರ್ಷದ ಆಟಗಾರ ವಿಂಡೀಸ್ ಪರ 71 ಟೆಸ್ಟ್​, 207 ಏಕದಿನ ಹಾಗೂ 67 ಟಿ-20 ಪಂದ್ಯಗಳನ್ನಾಡಿದ್ದಾರೆ. ಅವರು ಒಟ್ಟಾರೆ 11,000ಕ್ಕೂ ಹೆಚ್ಚು ರನ್​ ಹಾಗೂ 150ಕ್ಕೂ ಹೆಚ್ಚು ವಿಕೆಟ್​ ಪಡೆದಿದ್ದಾರೆ.

ವೆಸ್ಟ್ ಇಂಡೀಸ್​ ತಂಡಕ್ಕೆ ಸ್ಯಾಮ್ಯುಯೆಲ್ಸ್​ ಮಹತ್ವದ ಸರಣಿಗಳಲ್ಲಿ ಆಪತ್ಪಾಂಧವರಾಗಿದ್ದರು. ಅವರು 2012 ಮತ್ತು 2016ರ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಮಿಂಚುವ ಮೂಲಕ ತಂಡಕ್ಕೆ 2 ವಿಶ್ವಕಪ್ ಗೆಲ್ಲುವಲ್ಲಿ ನೆರವಾಗಿದ್ದರು. 2012ರ ವಿಶ್ವಕಪ್​ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ 78 ಹಾಗೂ 2016ರ ವಿಶ್ವಕಪ್​​ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 85 ರನ್​ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.