ETV Bharat / sports

ಹರಿಣಗಳ ತಂಡಕ್ಕೆ 360* ಕಮ್‌ಬ್ಯಾಕ್‌!? ಎಬಿಡಿ ಕುರಿತು ಮಾರ್ಕ್​ ಬೌಷರ್ ಹೇಳಿದ್ದೇನು?

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಟಿ20 ಕ್ರಿಕೆಟ್‌ ವಿಶ್ವಕಪ್ ನಡೆಯಲಿದೆ. ಈಗ ದುರ್ಬಲವಾಗಿರುವ ದಕ್ಷಿಣ ಆಫ್ರಿಕಾ ತಂಡದ ಬಲ ಹೆಚ್ಚಿಸಲು ಎಬಿ ಡಿ'ವಿಲಿಯರ್ಸ್‌ ಸೇರಿ ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಕೆಲ ಆಟಗಾರರನ್ನು ತಂಡಕ್ಕೆ ಕರೆತರುವ ಪ್ರಯತ್ನ ಮಾಡುವುದಾಗಿ ಮಾರ್ಕ್​ಬೌಷರ್​ ತಿಳಿಸಿದ್ದಾರೆ.

author img

By

Published : Dec 15, 2019, 7:56 PM IST

Mark Boucher- AB de Villiers
Mark Boucher- AB de Villiers

ಜೊಹಾನ್ಸ್‌ಬರ್ಗ್‌: ಮೈದಾನದ ಮೂಲೆ ಮೂಲೆಗೂ ಬೌಂಡರಿ ಬಾರಿಸುವ ಮೂಲಕ ಮಿಸ್ಟರ್​ 360 ಎಂದೇ ಖ್ಯಾತಿ ಪಡೆದಿರುವ ಎಬಿ ಡಿ ವಿಲಿಯರ್ಸ್​ರನ್ನು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ​ ವಾಪಸ್‌ ಕರೆತರುವ ಪ್ರಯತ್ನ ಮಾಡಲಿದ್ದೇನೆ ಎಂದು ಹರಿಣಗಳ ನೂತನ ಕೋಚ್​ ಮಾರ್ಕ್​ ಬೌಷರ್​ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಟಿ20 ಕ್ರಿಕೆಟ್‌ ವಿಶ್ವಕಪ್‌ ನಡೆಯಲಿದೆ. ಈಗ ದುರ್ಬಲವಾಗಿರುವ ದಕ್ಷಿಣ ಆಫ್ರಿಕಾ ತಂಡದ ಬಲ ಹೆಚ್ಚಿಸಲು ಎಬಿ ಡಿ'ವಿಲಿಯರ್ಸ್‌ ಸೇರಿದಂತೆ ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ಕೆಲ ಆಟಗಾರರನ್ನು ತಂಡಕ್ಕೆ ಕರೆತರುವ ಪ್ರಯತ್ನ ಮಾಡುವುದಾಗಿ ಮಾರ್ಕ್​ ಬೌಷರ್​ ತಿಳಿಸಿದ್ದಾರೆ.

2018ರಲ್ಲಿ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಬಳಿಕ 2019ರ ಏಕದಿನ ವಿಶ್ವಕಪ್​ ವೇಳೆ ತಂಡದ ಆಡಳಿತ ಮಂಡಳಿ ಬಯಸುವುದಾದರೆ ವಿಶ್ವಕಪ್​ ಆಡಲು ಸಿದ್ದ ಎಂದು ತಿಳಿಸಿದ್ದರು. ಆದರೆ, ಇದಕ್ಕೆ ದ.ಆಫ್ರಿಕಾ ಕ್ರಿಕೆಟ್​ ಮಂಡಳಿ ಒಪ್ಪಿಗೆ ಸೂಚಿಸಿರಲಿಲ್ಲ. ಪರಿಣಾಮ ಲೀಗ್​ ಹಂತದಲ್ಲಿ ಬಾಂಗ್ಲಾದೇಶದಂತಹ ರಾಷ್ಟ್ರದೆದುರು ಸೋಲುಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.

ಹೀಗಾಗಿ ಮಾರ್ಕ್​ ಬೌಷರ್​ ಟಿ20 ವಿಶ್ವಕಪ್​ಗಾದರೂ ತಮ್ಮ ತಂಡವನ್ನು ಬಲಿಷ್ಠಗೊಳಿಸಲು ಬಯಸಿ ಎಬಿಡಿಯನ್ನು ತಂಡಕ್ಕೆ ಕರೆತರುವ ಆಲೋಚನೆ ಮಾಡಿದ್ದಾರೆ. " ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಿಗೆ ಹೋಗಬೇಕಾದರೆ, ನಿಮಗೆ ನಿಮ್ಮ ತಂಡದಲ್ಲಿ ಬಲಿಷ್ಠ ಆಟಗಾರರು ಬೇಕಾಗುತ್ತದೆ. ವಿಲಿಯರ್ಸ್‌ ನನ್ನ ಪ್ರಕಾರ ಅತ್ಯುತ್ತಮ ಆಟಗಾರ ಎಂದು ಭಾವಿಸಿದ್ದೇನೆ.

ಹೀಗಾಗಿ ನಾನೇಕೆ ಒಮ್ಮೆ ಅವರೊಡನೆ ಈ ಕುರಿತು ಮಾತನಾಡಬಾರದು? ನಾನು ಈಗಷ್ಟೇ ಕೆಲಸ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಕೆಲವು ಆಟಗಾರರನ್ನು ಭೇಟಿ ಮಾಡಿ ಅವರೊಡನೆ ಚರ್ಚೆ ನಡೆಸಲಿದ್ದೇನೆ " ಎಂದು ಬೌಷರ್‌ ಹೇಳಿದ್ದಾರೆ. 35 ವರ್ಷದ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರೂ ದೇಶ ವಿದೇಶಗಳ ಟಿ20 ಲೀಗ್​ಗಳಲ್ಲಿ ಮಾತ್ರ ಇನ್ನೂ ಸಕ್ರಿಯರಾಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.