ETV Bharat / sports

ಶಮಿ, ಕಾಟ್ರೆಲ್​ ಬೌಲಿಂಗ್​ ದಾಳಿ ನಡುವೆಯೂ ಸ್ಟೋಯ್ನಿಸ್​ ಭರ್ಜರಿ ಅರ್ಧಶತಕ: ಪಂಜಾಬ್​ಗೆ 158 ರನ್​ಗಳ ಗುರಿ - DC vs KXIP IPL update

ಮಾರ್ಕಸ್​ ಸ್ಟೋಯ್ನಿಸ್​ ಅವರ ಅರ್ಧಶತಕ ಹಾಗೂ ನಾಯಕ ಶ್ರೇಯಸ್​ ಅಯ್ಯರ್(39)​ ಹಾಗೂ ಪಂತ್(31)​ರ ಉಪಯುಕ್ತ ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್​ಗಳಿಸಿದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​- ಡೆಲ್ಲಿ ಕ್ಯಾಪಿಟಲ್​

author img

By

Published : Sep 20, 2020, 9:25 PM IST

Updated : Sep 20, 2020, 9:47 PM IST

ದುಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಎರಡನೇ ಪಂದ್ಯದಲ್ಲಿ ಪಂಜಾಬ್ ತಂಡದ ಶಮಿ ಹಾಗೂ ಶೆಲ್ಡಾನ್ ಕಾಟ್ರೆಲ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 157 ರನ್​ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್​ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಅವರ ಅರ್ಧಶತಕ ಹಾಗೂ ನಾಯಕ ಶ್ರೇಯಸ್​ ಅಯ್ಯರ್(39)​ ಹಾಗೂ ಪಂತ್(31)​ರ ಉಪಯುಕ್ತ ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್​ಗಳಿಸಿದೆ.

ಆರಂಭಿಕರಾಗಿ ಕಣಕ್ಕಿಳಿದ ಶಿಖರ್​ ಧವನ್​ ಖಾತೆ ತೆರೆಯದೇ ರನ್​ ಔಟ್​ ಆದರು. ಉದಯೋನ್ಮುಖ ಬ್ಯಾಟ್ಸ್​ಮನ್​ ಪೃಥ್ವಿ ಶಾ ಕೇವಲ 4 ರನ್​ಗಳಿಸಿ ಶಮಿಗೆ ಓವರ್​ನಲ್ಲಿ ಜೋರ್ಡಾನ್​ಗೆ ಕ್ಯಾಚ್​ ನೀಡಿ ಔಟಾದರು. ನಂತರ ಬಂದ ಶಿಮ್ರಾನ್ ಹೆಟ್ಮೈರ್​ ಕೂಡ ಅದೇ ಓವರ್​ನ ಕೊನೆಯ ಎಸೆತದಲ್ಲಿ ಮಾಯಾಂಕ್​ಗೆ ಕ್ಯಾಚ್​ ನೀಡಿ ಔಟಾದರು.

13 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದ್ದ ವೇಳೆ ಜೊತೆಯಾದ ಶ್ರೇಯಸ್​ ಅಯ್ಯರ್​ ಹಾಗೂ ರಿಷಭ್ ಪಂತ್ 4ನೇ ವಿಕೆಟ್​ ಜೊತೆಯಾಟದಲ್ಲಿ 73 ರನ್​ಗಳ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ಪಂತ್​ 29 ಎಸೆತಗಳಲ್ಲಿ 4 ಬೌಂಡರಿ ಸಹಿತ 31 ರನ್​ಗಳಿಸಿ ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ ಓವರ್​ನಲ್ಲಿ ಕ್ಲೀನ್ ಬೌಲ್ಡ್​ ಆದರು.

ನಂತರದ ಓವರ್​ನಲ್ಲೇ ನಾಯಕ 32 ಎಸೆತಗಳಲ್ಲಿ 3 ಸಿಕ್ಸರ್​ ಸಹಿತ 39 ರನ್​ಗಳಿಸಿದ್ದ ಶ್ರೇಯಸ್​ ಅಯ್ಯರ್ ಕೂಡ ಶಮಿ ಓವರ್​ನಲ್ಲಿ ಜೋರ್ಡಾನ್​ಗೆ ಕ್ಯಾಚ್​ ನೀಡಿದರು. ಅಕ್ಷರ್​ ಪಟೇಲ್ ಆಟ ​ 6 ರನ್​ಗಳಿಗೆ ಸೀಮಿತವಾದರೆ, ಅಶ್ವಿನ್​ 4 ರನ್​ಗಳಿಸಿ ಕಾಟ್ರೆಲ್​ಗೆ ವಿಕೆಟ್​ ಒಪ್ಪಿಸಿದರು.

ಒಂದು ಕಡೆ ವಿಕೆಟ್​ ಬೀಳುತ್ತಿದ್ದರು ಮತ್ತೊಂದು ಕಡೆ ಅಬ್ಬರಿಸಿದ ಆಲ್​ರೌಂಡರ್​ ಸ್ಟೋಯ್ನಿಸ್​21 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 7 ಬೌಂಡರಿ ಸಹಿತ 53 ರನ್​ ಸಿಡಿಸಿದರು. ಜೋರ್ಡಾನ್ ಎಸೆದ ಕೊನೆಯ ಓವರ್​ನಲ್ಲಿ​ 3 ಬೌಂಡರಿ ಹಾಗೂ 2 ಸಿಕ್ಸರ್​ ಸಿಡಿಸಿ ರನ್​ ಔಟ್​ ಆದರು.

ಪಂಜಾಬ್ ತಂಡದ ಪರ ಮೊಹಮ್ಮದ್​ ಶಮಿ 15 ರನ್​ ನೀಡಿ 3 ವಿಕೆಟ್​, ಶೆಲ್ಡಾನ್​ ಕಾಟ್ರೆಲ್​ 24 ರನ್​ ನೀಡಿ 2 ವಿಕೆಟ್​ ಪಡೆದರೆ ಇಂದೇ ಪದಾರ್ಪಣೆ ಮಾಡಿದ ರವಿ ಬಿಷ್ಣೋಯ್​ 22 ರನ್​ ನೀಡಿ ಒಂದು ವಿಕೆಟ್​ ಪಡೆದರು.

ಕ್ರಿಸ್​ ಜೋರ್ಡಾನ್​ 4 ಓವರ್​ಗಳಲ್ಲಿ ವಿಕೆಟ್​ ಇಲ್ಲದೆ 56 ರನ್​ ನೀಡಿ ದುಬಾರಿ ಬೌಲರ್​ ಎನಿಸಿಕೊಂಡರು. ಅವರು ಕೊನೆಯ ಓವರ್​ನಲ್ಲಿ 30 ರನ್​ ಬಿಟ್ಟುಕೊಟ್ಟರು.

Last Updated : Sep 20, 2020, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.