ಚೆನ್ನೈ : ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಬಿಡ್ಡಿಂಗ್ನಲ್ಲಿ ಭಾಗಿಯಾಗಿದ್ದ 8 ಫ್ರಾಂಚೈಸಿಗಳು ತಮಗೆ ಇಷ್ಟವಾದ ಪ್ಲೇಯರ್ಸ್ ಖರೀದಿ ಮಾಡಿ ತಂಡಗಳನ್ನ ಸದೃಢ ಮಾಡಿಕೊಂಡಿವೆ.
ನಿನ್ನೆ ನಡೆದ ಬಿಡ್ಡಿಂಗ್ ವೇಳೆ ಚೆನ್ನೈ ತಂಡ ವಿಶೇಷ ಮಾಸ್ಕ್ ಜೊತೆಗೆ ಭಾಗಿಯಾಗಿತ್ತು. ಬಿಡ್ಡಿಂಗ್ ವೇಳೆ ಚೆನ್ನೈ ತಂಡದ ಮ್ಯಾನೇಜ್ಮೆಂಟ್ನ ಎಲ್ಲಾ ಸದಸ್ಯರು ನಂ.7 ಎಂದು ಬರೆದಿರುವ ಮಾಸ್ಕ್ ಧರಿಸಿ ಬಂದಿದ್ದು ವಿಶೇಷವಾಗಿತ್ತು.
ಚೆನ್ನೈ ತಂಡದ ನಾಯಕ ಹಾಗೂ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜರ್ಸಿ ನಂಬರ್ ಕೂಡಾ 7 ಆಗಿದ್ದು, ಎಲ್ಲಾ ಸದಸ್ಯರು ಈ ನಂಬರ್ನ ಮಾಸ್ಕ್ ಧರಿಸಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.
145.3 ಕೋಟಿ ರೂ. ನೀಡಿ ಒಟ್ಟು 57 ಪ್ಲೇಯರ್ಸ್ ಖರೀದಿ ಆಗಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಬರೋಬ್ಬರಿ 16.25 ಕೋಟಿ ರೂ.ಗೆ ಸೇಲ್ ಆಗಿ ದಾಖಲೆ ನಿರ್ಮಾಣ ಮಾಡಿದ್ರೆ, ಕನ್ನಡಿಗ ಕೆ.ಗೌತಮ್ 9.25 ಕೋಟಿ ರೂ.ಗೆ ಹರಾಜು ಆಗುವ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಭಾರತೀಯ ಪ್ಲೇಯರ್ ಆಗಿದ್ದಾರೆ.
ಓದಿ : ಐಪಿಎಲ್ ಹರಾಜು ಮುಕ್ತಾಯ: 145.3 ಕೋಟಿ ರೂ.ಗೆ 57 ಆಟಗಾರರು ಸೇಲ್, ಯಾರು ಯಾವ ತಂಡಕ್ಕೆ ಸೇರ್ಪಡೆ!?