ETV Bharat / sports

IPL ಸೇರಿ, ಪ್ರಾಂಚೈಸಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಯಾರ್ಕರ್​ ಕಿಂಗ್​... ಮಹತ್ವದ ನಿರ್ಧಾರ ಪ್ರಕಟಿಸಿದ ಮಾಲಿಂಗ!

author img

By

Published : Jan 20, 2021, 11:53 PM IST

ಶ್ರೀಲಂಕಾ ಕ್ರಿಕೆಟ್ ತಂಡದ ಯಾರ್ಕರ್​ ಕಿಂಗ್ ಲಸಿಂತ್ ಮಾಲಿಂಗ ಪ್ರಾಂಚೈಸಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

Lasith Malinga
Lasith Malinga

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಅತಿ ಹೆಚ್ಚು ವಿಕೆಟ್​ ಪಡೆದುಕೊಂಡಿರುವ ಸ್ಟಾರ್​ ಬೌಲರ್​ ಲಸಿತ್ ಮಾಲಿಂಗ ಇನ್ಮುಂದೆ ಪ್ರಾಂಚೈಸಿ ಕ್ರಿಕೆಟ್​ನಲ್ಲಿ ಭಾಗಿಯಾಗಲ್ಲ. ತಾವು ಅದರಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಕುಟುಂಬದೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಪ್ರಾಂಚೈಸಿ ಕ್ರಿಕೆಟ್​ನಲ್ಲಿ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ಪರಿಸ್ಥಿತಿ ಹಾಗೂ ಪ್ರಯಾಣದ ಮೇಲಿನ ನಿರ್ಬಂಧಗಳು ಹಾಗೂ ವೈಯಕ್ತಿಕ ವಿಷಯಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಕಳೆದ ತಿಂಗಳ ಇದಕ್ಕೆ ಸಂಬಂಧಿಸಿದಂತೆ ತಾವು ಮುಂಬೈ ಇಂಡಿಯನ್ಸ್​ ಪ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಅವರನ್ನ ತಂಡದಿಂದ ಕೈಬಿಟ್ಟಿದೆ.

ಓದಿ: ದಶಕದ ನಂತರ ಮಾಲಿಂಗನ ಬಿಟ್ಟುಕೊಟ್ಟ ಮುಂಬೈ ಇಂಡಿಯನ್ಸ್​: 18 ಆಟಗಾರರ ರೀಟೈನ್

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್​ ಮಾಲೀಕ ಆಕಾಶ್​ ಅಂಬಾನಿ, ಕಳೆದ 12 ವರ್ಷಗಳಿಂದ ಅವರು ನಮ್ಮ ತಂಡದ ಭಾಗವಾಗಿದ್ದರು. ಅವರು ತೆಗೆದುಕೊಂಡಿರುವ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಇನ್ನೂ ಐದು ವರ್ಷಗಳ ಕಾಲ ಅವರು ನಮ್ಮ ಬೌಲಿಂಗ್​ ವಿಭಾಗದ ಪ್ರಮುಖ ಶಕ್ತಿಯಾಗಲು ನಾನು ಇಷ್ಟಪಡುತ್ತಿದೆ ಎಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್​(170) ಪಡೆದು ದಾಖಲೆ ನಿರ್ಮಾಣ ಮಾಡಿರುವ ಲಸಿತ್ ಮಾಲಿಂಗ 13ನೇ ಆವೃತ್ತಿಯ ಐಪಿಎಲ್​ ಟೂರ್ನಿ ಸೇರಿ ಪ್ರಾಂಚೈಸಿ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಶ್ರೀಲಂಕಾದ ಯಾರ್ಕರ್​ ಕಿಂಗ್ ಮಾಲಿಂಗ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿದ್ದ ವೇಳೆ ತಂಡ 4 ಸಲ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ವೈಯಕ್ತಿಕ ಕಾರಣದಿಂದಾಗಿ ಇವರು 2020ರ ಐಪಿಎಲ್​ನಲ್ಲಿ ಮುಂಬೈ ತಂಡದ ಭಾಗವಾಗಿರಲಿಲ್ಲ.

ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ಗೆ ಮಲಿಂಗ ನಿವೃತ್ತಿ ಘೋಷಣೆ ಮಾಡಿದ್ದು, ಟಿ-20 ಕ್ರಿಕೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಐಪಿಎಲ್​ನಲ್ಲಿ 122 ಪಂದ್ಯಗಳನ್ನಾಡಿ 170 ವಿಕೆಟ್​ ಪಡೆದುಕೊಂಡಿದ್ದಾರೆ. ಇದರಲ್ಲಿ 13ರನ್​ಗಳಿಗೆ 5 ವಿಕೆಟ್ ಪಡೆದಿರುವುದು ಅತ್ಯದ್ಭುತ ಸಾಧನೆಯಾಗಿದೆ.

ಮುಂಬೈ ಇಂಡಿಯನ್ಸ್​ ತಂಡಕ್ಕೆ ಧನ್ಯವಾದ ತಿಳಿಸಿರುವ ವೇಗದ ಬೌಲರ್​, ಪ್ರಾಂಚೈಸಿಯಲ್ಲಿ ತಮಗೆ ಕುಟುಂಬದ ರೀತಿಯಲ್ಲಿ ನೋಡಿಕೊಂಡಿರುವುದಕ್ಕಾಗಿ ಆಬಾರಿಯಾಗಿರುವೆ ಎಂದಿರುವ ಅವರು, ಪ್ರಾಂಚೈಸಿಯ ಒಡತಿ ನೀತಾ ಅಂಬಾನಿ, ಕೋಚ್​ ಜಯವರ್ದನೆ ಹಾಗೂ ಆಕಾಶ್​ ಅಂಬಾನಿಗೆ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.