ETV Bharat / sports

ಕೇಂದ್ರ ಗುತ್ತಿಗೆಯಲ್ಲಿಲ್ಲದಿದ್ದರೂ ಮಲಿಕ್​, ಹಫೀಜ್​ ಮತ್ತು ಅಮೀರ್​ಗೆ 'ಎ' ಕೆಟಗರಿ ವೇತನ

author img

By

Published : Nov 21, 2020, 8:46 PM IST

2020ರ ಕೇಂದ್ರ ಗುತ್ತಿಗೆಯ ಒಪ್ಪಂದಗಳನ್ನು ಹೊಂದಿರದ ಕಾರಣ ಅವರು ಪ್ರಸ್ತುತ ಎ ವಿಭಾಗದಲ್ಲಿ ಪಂದ್ಯದ ಶುಲ್ಕವನ್ನು ಸ್ವೀಕರಿಸುತ್ತಾರೆ ಎಂದು ಪಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್​
ಪಾಕಿಸ್ತಾನ ಕ್ರಿಕೆಟ್ ಬೋರ್ಡ್​

ಕರಾಚಿ: ಹಿರಿಯ ಕ್ರಿಕೆಟಿಗರಾದ ಶೋಯಬ್ ಮಲಿಕ್, ಮೊಹಮ್ಮದ್​ ಹಫೀಜ್, ವಹಾಬ್​ ರಿಯಾಜ್​ ಮತ್ತು ಮೊಹಮ್ಮದ್ ಅಮೀರ್​ ಪಿಸಿಬಿಯಿಂದ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆಯದಿದ್ದರೂ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎ ಕೆಟಗರಿಯ ಆಟಗಾರರಿಗೆ ನೀಡುವ ವೇತನವನ್ನು ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ ಮೂಲಗಳಿಂದ​ ತಿಳಿದು ಬಂದಿದೆ.

2020ರ ಕೇಂದ್ರ ಗುತ್ತಿಗೆಯ ಒಪ್ಪಂದಗಳನ್ನು ಹೊಂದಿರದ ಕಾರಣ ಅವರು ಪ್ರಸ್ತುತ ಎ ವಿಭಾಗದಲ್ಲಿ ಪಂದ್ಯದ ಶುಲ್ಕವನ್ನು ಸ್ವೀಕರಿಸುತ್ತಾರೆ ಎಂದು ಪಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೂ ಮೊದಲು ಅವರು ಕೇಂದ್ರ ಗುತ್ತಿಗೆ ಪಡೆಯಲು ವಿಫಲರಾಗಿರುವುದರಿಂದ ಅವರು ಆಡುವ ಪಂದ್ಯಗಳಲ್ಲಿ ಸಿ ವಿಭಾಗದ ಆಟಗಾರರಿಗೆ ನೀಡುವ ವೇತನ ನೀಡಲಾಗುತ್ತಿತ್ತು. ಅಂದರೆ ಏಕದಿನ ಪಂದ್ಯಕ್ಕೆ 2,02,000 ಪಿಕೆಆರ್​ ಹಾಗೂ ಟಿ-20 ಪಂದ್ಯಕ್ಕೆ ಅದಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿತ್ತು. ಈ ಕಾರಣದಿಂದ ಮಂಡಳಿ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಮೂಲಗಳ ಪ್ರಕಾರ ಈ ನಾಲ್ವರು ಎ ವಿಭಾಗಕ್ಕೆ ನೀಡುವಷ್ಟೇ ಪಂದ್ಯದ ವೇತನವನ್ನು ಪಡೆಯಲಿದ್ದಾರೆ. ಏಕದಿನ ಪಂದ್ಯವೊಂದಕ್ಕೆ 4,60,000 ಹಾಗೂ ಟಿ-20 ಪಂದ್ಯಕ್ಕೆ 3,30,000 ಪಿಕೆಆರ್ ಪಡೆಯಲಿದ್ದಾರೆ.

ಆದಾಗ್ಯೂ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ವಿದೇಶಿ ಟಿ-20 ಲೀಗ್ ಒಪ್ಪಂದಗಳನ್ನು ಕಳೆದುಕೊಂಡಿದ್ದಕ್ಕಾಗಿ ಅವರಿಗೆ ಸ್ವಲ್ಪ ಪರಿಹಾರವನ್ನು ನೀಡಬೇಕೆಂದು ಆಟಗಾರರಿಂದ ಸಲ್ಲಿಸಿದ್ದ ವಿನಂತಿಯನ್ನು ಮಂಡಳಿ ಸ್ವೀಕರಿಸಲಿಲ್ಲ. ರಾಷ್ಟ್ರೀಯ ಕರ್ತವ್ಯಕ್ಕೆ ಆದ್ಯತೆ ನೀಡಿರುವುದಕ್ಕೆ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.