ETV Bharat / sports

ಭಾರತೀಯ ಕ್ರಿಕೆಟ್​​​ ಇತಿಹಾಸದ ಪುಟದಲ್ಲಿ ಧೋನಿ ಎಂಬ ಸಾಧಕನ ಯಶೋಗಾಥೆ

ಭಾರತೀಯ ಕ್ರಿಕೆಟ್​​ನ 'ಹೊಸ ಇತಿಹಾಸಕಾರ' ಎಂದೇ ಧೋನಿಯನ್ನು ಹೆಸರಿಸಲಾಗಿತ್ತು. ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುತ್ತಿದ್ದ ಧೋನಿ ಭಾರತ ತಂಡ ಕಂಡಿರುವ ಅತ್ಯಂತ ಯಶಸ್ವಿ ನಾಯಕ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಅವರು ವಿದಾಯ ಘೋಷಿಸಿದ್ದಾರೆ.

Mahendra Singh Dhoni retired from cricket
ಭಾರತೀಯ ಕ್ರಿಕೆಟ್​​​ ಇತಿಹಾಸದ ಪುಟದಲ್ಲಿ ಧೋನಿ ಎಂಬ ಸಾಧಕನ ಯಶೋಗಾಥೆ..!
author img

By

Published : Aug 15, 2020, 9:44 PM IST

ರಾಂಚಿ: ಭಾರತೀಯ ಕ್ರಿಕೆಟ್​ ಇತಿಹಾಸದ ಪುಟದಲ್ಲಿ ಎಂ.ಎಸ್.ಧೋನಿ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಅವರು ಕ್ರೀಸ್​​​ನಲ್ಲಿ ಇರುವವರೆಗೂ ಭಾರತ ಯಾವುದೇ ಹಂತದಲ್ಲೂ ಸೋಲು ಕಾಣದು ಅನ್ನೋದು ಅಭಿಮಾನಿಗಳ ಕಟ್ಟಾ ನಂಬಿಕೆ. ಆದರೆ ಇದೀಗ ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಕ್ಯಾಪ್ಟನ್​ ಕೂಲ್​​ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಧೋನಿ ಯುಗ ಆರಂಭ ಹೀಗಿತ್ತು..

ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಅಂದರೆ ಸರಿಯಾಗಿ 15 ವರ್ಷದ ಹಿಂದೆ ಏಕದಿನ ಕ್ರಿಕಟ್​​​ನಲ್ಲಿ ಚೊಚ್ಚಲ ಶತಕ ಸಿಡಿಸಿ ಅವರು ಸಂಭ್ರಮಿಸಿದ್ದರು. ಅಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು 123 ಎಸೆತದಲ್ಲಿ 148 ರನ್​​ಗಳಿಸಿದ್ದರು. ಈ ಪಂದ್ಯದ ಬಳಿಕ ಧೋನಿ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ.

ಧೋನಿ ಹಿಂದಿತ್ತು 7ರ ಗುಟ್ಟು:

ಎಂಎಸ್‌ಡಿ ಕ್ರಿಕೆಟ್​ಗೆ ಕಾಲಿಟ್ಟ ಕೆಲವೇ ಪಂದ್ಯಗಳಲ್ಲಿ ಫೇಮಸ್​​ ಆಗಿಬಿಟ್ಟಿದ್ದರು. ಅವರ ಯಶಸ್ಸಿನಲ್ಲಿ ಕೆಲವು ಸಂಖ್ಯೆಗಳು ಸಹ ಪ್ರಮುಖ ಎನಿಸಿವೆ. ಅವರ ಅದೃಷ್ಟ ಸಂಖ್ಯೆ 7 ಆಗಿತ್ತು. ಮೈದಾನದಲ್ಲೂ 7 ನೇ ನಂಬರ್ ಜರ್ಸಿ ತೊಟ್ಟು ಆಡುತ್ತಿದ್ದರು. ಇದಲ್ಲದೆ ನೆಚ್ಚಿನ ಕಾರಿನ ಸಂಖ್ಯೆಯೂ ಕೂಡಾ 7. ಕ್ರಿಕೆಟ್‌ ಜೀವನದ ಆರಂಭದಲ್ಲಿ 7ನೇ ಸ್ಥಾನದಲ್ಲಿಯೂ ಅವರು ಬ್ಯಾಟಿಂಗ್​ಗೆ ಇಳಿಯುತ್ತಿದ್ದರು.

ಅತ್ಯಂತ ಸಹನೆಯ ಕ್ರಿಕೆಟಿಗನ ಕ್ರಿಕೆಟ್ ಜೀವನ ಬಾಂಗ್ಲಾದೇಶದ ವಿರುದ್ಧ ಆರಂಭವಾಗಿತ್ತು. ಆದರೆ ಮೊದಲ ನಾಲ್ಕು ಪಂದ್ಯಗಳಲ್ಲಿ ಅವರು ರನ್​​ ಗಳಿಸಲು ಪರದಾಡಿದ್ದರು. ಆ ಸಂದರ್ಭದಲ್ಲಿ ಕ್ರಮವಾಗಿ 0,12,7,3 ರನ್​ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದ್ದರು.

ನಂತರ ಅಂದಿನ ನಾಯಕ ಸೌರವ್ ಗಂಗೂಲಿ ಪಾಕಿಸ್ತಾನದ ಪಂದ್ಯದಲ್ಲಿ ಧೋನಿಯನ್ನು ಹುರಿದುಂಬಿಸಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದ್ದರು. ಇದೇ ಪಂದ್ಯ ಧೋನಿಯ ಭವಿಷ್ಯದ ಜೊತೆ ಭಾರತ ತಂಡದ ದಿಕ್ಕನ್ನೇ ಬದಲಿಸಿ ಬಿಟ್ಟತು.

ಮರೆಯಲಾಗದ ಧೋನಿ ಇನ್ನಿಂಗ್ಸ್:​

ರಾಹುಲ್​ ದ್ರಾವಿಡ್​​​ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​ ಇಳಿದಿದ್ದ ಧೋನಿ 183ರನ್ ಗಳಿಸಿ ಮಿಂಚಿದ್ದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಧೋನಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಬೌಂಡರಿ ಅಟ್ಟಿದ್ದರು. ಇನ್ನೂ ಇದು ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದೆ.

ಭಾರತ ತಂಡಕ್ಕೆ ಧೋನಿ ನಾಯಕತ್ವ:

2007ರ ವಿಶ್ವಕಪ್​​​ನಲ್ಲಿ ಭಾರತ ಸೋಲು ಕಂಡಿತು. ಈ ವೇಳೆ ನಾಯಕತ್ವ ವಹಿಸಿಕೊಂಡಿದ್ದ ರಾಹುಲ್ ದ್ರಾವಿಡ್ ನಾಯಕನ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಬಳಿಕ ಆ ಸ್ಥಾನವನ್ನು ಎಂಎಸ್​ ಧೋನಿ ವಹಿಸಿಕೊಂಡರು. ಇದಾದ ಬಳಿಕ ಮೊದಲ ಟಿ-20 ವಿಶ್ವಕಪ್​ ಗೆಲ್ಲುವ ಮೂಲಕ ಧೋನಿಯ ನಾಯಕತ್ವ ಇನ್ನಷ್ಟು ಗಟ್ಟಿಯಾಯಿತು. ಇದಾದ ಬಳಿಕ ಧೋನಿ ಯಶಸ್ವಿ ನಾಯಕನಾಗಿದ್ದು ಇತಿಹಾಸ.

ಧೋನಿ-ಗಂಗೂಲಿ ಹೊಂದಾಣಿಕೆ:

ಕಾಕತಾಳೀಯ ಎಂಬಂತೆ 3ನೇ ಕ್ರಮಾಂಕದಲ್ಲಿದ್ದ ಗಂಗೂಲಿ ವಿದಾಯ ಹೇಳುತ್ತಿದ್ದಂತೆ ಅದೇ ಸ್ಥಾನಕ್ಕೆ ಮತ್ತೊಬ್ಬ ನಾಯಕನ ಎಂಟ್ರಿಯಾಗಿತ್ತು. ಅಂದು ಕೆಳ ಕ್ರಮಾಂಕದ ಬಲಿಷ್ಟ ಆಟಗಾರ ಧೋನಿಯಾಗಿದ್ದರು. ಗಂಗೂಲಿಯ ವೈಯಕ್ತಿಕ ರನ್​​ 183. ಧೋನಿಯದ್ದು ಕೂಡಾ 183 ಅನ್ನೋದು ಇಲ್ಲಿ ವಿಶೇಷ. ಇದರ ಜೊತೆಗೆ ಪ್ರಸ್ತುತ ಕೊಹ್ಲಿಯ ಅತ್ಯಧಿಕ ಸ್ಕೋರ್ ಸಹ 183 ಆಗಿದೆ ಅನ್ನೋದು ಇನ್ನೂ ಕುತೂಹಲಕಾರಿ ಅಂಶ.

3ನೇ ಕ್ರಮಾಂಕ ವಿಶ್ವಕಪ್ ತಂದುಕೊಟ್ಟಿತು:

ಹೌದು, 2011ರ ವಿಶ್ವಕಪ್​​ ಫೈನಲ್​ ಮ್ಯಾಚ್​​ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದ ಪಂದ್ಯವಾಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಧೋನಿ ಭರ್ಜರಿ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ ಕೊನೆಯಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ 28 ವರ್ಷದ ಬಳಿಕ ವಿಶ್ವಕಪ್ ತಂದುಕೊಟ್ಟಿದ್ದರು.

2011 ರ ಬಳಿಕ ಧೋನಿ ಜಾಗದಲ್ಲಿ ಹೊಸ ನಾಯಕನ ಉದಯವಾಗಿತ್ತು. 2019ರ ವಿಶ್ವಕಪ್​ನಲ್ಲಿ ನಾಯಕತ್ವ ಕೊಹ್ಲಿ ಕೈಯಲ್ಲಿದ್ದರೂ ಧೋನಿ ಅವಶ್ಯಕತೆ ತಂಡಕ್ಕೆ ತುಂಬಾ ಅಗತ್ಯವಾಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಮೂರನೇ ಸ್ಥಾನದಲ್ಲಿ ಮೈದಾನಕ್ಕಿಳಿಯದೇ ಏಳನೇ ಕ್ರಮಾಂಕದಲ್ಲಿ ಕ್ರೀಸ್​​ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ವೇಳೆಗಾಗಲೇ ಮತ್ತೆ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಕನಸು ಮುರಿದಿತ್ತು. ಧೋನಿ ಕೊನೆಯವರೆಗೂ ಒಬ್ಬಂಟಿ ಹೋರಾಟ ನಡೆಸಿ ವಿಫಲರಾಗಿದ್ದರು.

ಈ ಪಂದ್ಯ ಕೊನೆಗೊಂಡ ಬಳಿಕ ಧೋನಿ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತೆ. ಅಲ್ಲದೆ ನಿವೃತ್ತಿಯ ಸುದ್ದಿಗಳೂ ಸಹ ಅವರ ಬೆನ್ನು ಹತ್ತಿದ್ದವು.

ಇದೀಗ ವಿಶ್ವ ಕ್ರಿಕೆಟ್‌ ಲೋಕದ ಶ್ರೇಷ್ಠ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.