ETV Bharat / sports

ಚೊಚ್ಚಲ ಲಂಕಾ ಪ್ರೀಮಿಯಲ್​ ಲೀಗ್​ನ ಹರಾಜು ಲಿಸ್ಟ್​​ನಲ್ಲಿ ಇರ್ಪಾನ್ ಪಠಾಣ್​ ಹೆಸರು

author img

By

Published : Aug 1, 2020, 2:45 PM IST

ಈಗಾಗಲೇ ಲಂಕಾ ಪ್ರೀಮಿಯರ್ ಲೀಗ್‌ಗಾಗಿ ನೋಂದಾಯಿಸಲ್ಪಟ್ಟಿರುವ 70 ಮಂದಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಬರೋಡಾ ವೇಗಿ ಇರ್ಫಾನ್ ಪಠಾಣ್ ಹೆಸರೂ ಕೂಡ ಸೇರಿದೆ.

ಇರ್ಪಾನ್ ಪಠಾಣ್
ಇರ್ಪಾನ್ ಪಠಾಣ್

ಕೊಲೊಂಬೊ: ಆಗಸ್ಟ್​ 28 ರಿಂದ ಶ್ರೀಲಂಕಾದಲ್ಲಿ ಆರಂಭಗೊಳ್ಳಲಿರುವ ಚೊಚ್ಚಲ ಲಂಕಾ ಪ್ರೀಮಿಯರ್​ ಲೀಗ್​ನ ಭಾಗವಾಗಬೇಕೆಂದು ಭಾರತ ತಂಡದ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಇಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಶ್ರೀಲಂಕಾ ಪ್ರೀಮಿಯರ್ ಲೀಗ್‌ಗಾಗಿ ನೋಂದಾಯಿಸಲ್ಪಟ್ಟಿರುವ 70 ಮಂದಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಬರೋಡಾ ವೇಗಿ ಇರ್ಫಾನ್ ಪಠಾಣ್ ಹೆಸರೂ ಕೂಡ ಸೇರಿದೆ.

ಇರ್ಫಾನ್​ ಪಠಾಣ್​ ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಆಡಲು ಬಿಸಿಸಿಐನಿಂದ ಅನುಮತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಿಸಿಸಿಐ ತನ್ನ ವ್ಯಾಪ್ತಿಗೆ ಒಳಪಡುವ ಯಾವುದೇ ಕ್ರಿಕೆಟ್​ನಲ್ಲಿ ಆಡಲು ಬಯಸುವ ಕ್ರಿಕೆಟಿಗರಿಗೆ ವಿದೇಶಿ ಲೀಗ್​ನಲ್ಲಿ ಆಡಲು ಅನುಮತಿ ನೀಡುವುದಿಲ್ಲ. ಆದರೆ, ಪಠಾಣ್ ಈ ವರ್ಷದ ಜನವರಿಯಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ನೀಡಿರುವುದರಿಂದ ವಿದೇಶಿ ಲೀಗ್​ಗಳಲ್ಲಿ ಭಾಗವಹಿಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಪಠಾಣ್​ಗೂ ಮೊದಲೇ ಭಾರತದ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ಹಾಗೂ ಮನ್​ಪ್ರೀತ್ ಗೋನಿ ಕೂಡ ಈಗಾಗಲೇ ಅಬುದಾಬಿ ಟಿ-10 ಹಾಗೂ ಕೆನಡಾ ಗ್ಲೋಬಲ್​ ಟಿ-20 ಟೂರ್ನಿಯಲ್ಲಿ ಆಡಿದ್ದಾರೆ. ಇದೀಗ ಪಠಾಣ್​ ಲಂಕಾ ಪ್ರೀಮಿಯರ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ಸೋಮವಾರ ಎಸ್​ಎಲ್​ಸಿ ಎಕ್ಸಿಕ್ಯೂಟಿವ್ ಕಮಿಟಿ ಟೂರ್ನಮೆಂಟ್​ ನಡೆಸಲು ಅನುಮತಿ ನೀಡಿದೆ. 23 ಪಂದ್ಯಗಳ ಲೀಗ್ 4 ಸ್ಥಳಗಳಲ್ಲಿ ನಡೆಯಲಿದೆ. ಒಟ್ಟು ಕೊಲಂಬೊ, ಕ್ಯಾಂಡಿ, ಗ್ಯಾಲೆ, ದಂಬುಲ್ಲಾ ಮತ್ತು ಜಾಫ್ನಾ ಎಂಬ 5 ನಗರಗಳು ಹೆಸರಿನ ತಂಡಗಳು ಪಾಲ್ಗೊಳ್ಳಲಿವೆ. ಪ್ರಾಂಚೈಸಿ ಮಾಲೀಕರ ವಿವರ ಇನ್ನಷ್ಟೇ ಹೊರ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.