ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರಿಂದ ಕಲಿಯಲು ಎದುರು ನೋಡುತ್ತಿದ್ದೇನೆ ಎಂದು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಗುರುವಾರ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಗ್ಲೇನ್ ಮ್ಯಾಕ್ಸ್ವೆಲ್, ಈ ತಂಡಕ್ಕೆ ಸೇರ್ಪಡೆಗೊಂಡಿರುವುದು ಖುಷಿಯಾಗಿದೆ. ಈ ತಂಡಕ್ಕೆ ನಾನು ಸ್ವಲ್ಪ ಶಕ್ತಿಯನ್ನು ತುಂಬಬಲ್ಲೆ ಎಂದು ನಾನು ಭಾವಿಸುತ್ತೇನೆ. ಯಾವುದೇ ತಂಡವಾದರೂ ನಾನು ಉತ್ಸಾಹದಿಂದ ಮತ್ತು ಎನರ್ಜಿಯಿಂದ ಆಡುತ್ತೇನೆ ಎಂದು ಮ್ಯಾಕ್ಸ್ವೆಲ್ ತಿಳಿಸಿದ್ದಾರೆ.
ಮಾತು ಮುಂದುವರೆಸಿ, ನಾನು ಯಾವಾಗಲೂ ಅತ್ಯುತ್ತಮರಿಂದ(ವಿರಾಟ್ ಮತ್ತು ಎಬಿಡಿ) ಕಲಿಯಲು ಇಷ್ಟಪಡುತ್ತೇನೆ. ಅವರಿಬ್ಬರು ಕೇವಲ ಟಿ-20 ಕ್ರಿಕೆಟ್ನಲ್ಲಿ ಮಾತ್ರ ಅತ್ಯುತ್ತಮರಲ್ಲ, ಅವರು ವಿಶ್ವ ಕ್ರಿಕೆಟ್ನಲ್ಲಿ ಅತ್ಯುತ್ತಮ ಕ್ರಿಕೆಟಿಗರಾಗಿದ್ದಾರೆ. ನಾನು ಅವರಿಬ್ಬರ ಆಟವನ್ನು ನೋಡಲು ಬಯಸುತ್ತೇನೆ ಎಂದು ತಿಳಿಸಿರುವ ಆಸೀಸ್ ಆಲ್ರೌಂಡರ್, ಕಳೆದ ವರ್ಷಕ್ಕಿಂತ ಈ ಬಾರಿ ನಾವು ಒಂದೆರಡು ಹೆಜ್ಜೆಗಳನ್ನು ಮುಂದಕ್ಕಿಡುವ ಭರವಸೆಯಿದೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿರುವ ಕೊಹ್ಲಿ ಮತ್ತು ಎಬಿಡಿ ಕೂಡ ಮ್ಯಾಕ್ಸ್ವೆಲ್ ತಂಡ ಸೇರಿಕೊಂಡಿರುವುದು ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.
ನಾವು ಅವರನ್ನು ಹೊಂದಿರುವುದಕ್ಕೆ ಅದೃಷ್ಟವಂತರಾಗಿದ್ದೇವೆ, ಮುಂದೆ ನಾವು ರೋಚಕ ಸಮಯಗಳನ್ನು ಹೊಂದಲಿದ್ದೇವೆ ಎಂದು ಕೊಹ್ಲಿ ತಿಳಿಸಿದರೆ, ಎಬಿಡಿ ಕೂಡ "ನಾನು ಸ್ವಲ್ಪ ಸಮಯದಿಂದ ಅನುಸರಿಸುತ್ತಿರುವ ಮ್ಯಾಕ್ಸಿ ಅವರಂತಹ ಆಟಗಾರರೊಂದಿಗೆ ಇರಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.
ಇದನ್ನು ಓದಿ:ನಮ್ಮ ಯುವ ಆಟಗಾರರು ಅನುಭವಿಗಳಿದ್ದಾರೆ, ಎದುರಾಳಿಗಳಿಗೆ ತಲೆನೋವು ತರಬಲ್ಲರು: ಕೊಹ್ಲಿ