ETV Bharat / sports

ಬಿಬಿಎಲ್ 2020​ ವೇಳಾಪಟ್ಟಿ ಬಿಡುಗಡೆ ಮಾಡಿದ ಕ್ರಿಕೆಟ್​ ಆಸ್ಟ್ರೇಲಿಯಾ - ಮಹಳೆಯರ ಬಿಬಿಎಲ್​ ಅಕ್ಟೋಬರ್​ 17ರಿಂದ ಆರಂಭ

10 ತಂಡಗಳ ನಡುವೆ 2 ತಿಂಗಳ ಕಾಲ ನಡೆಯುವ ಟಿ-20 ಲೀಗ್​ ಡಿಸೆಂಬರ್​ 3 ರಂದು ಆರಂಭವಾಗಲಿದೆ. ಈ ವರ್ಷ ಕಳೆದ ಆವೃತ್ತಿಗಿಂತ ಎರಡು ವಾರ ಮುಂದಾಗಿ ಬಿಗ್​ಬ್ಯಾಶ್​ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಅಡಿಲೇಡ್​ ಸ್ಟ್ರೈಕರ್ಸ್​ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್​ ನಡುವೆ ಆರಂಭವಾಗಲಿದೆ.

ಕ್ರಿಕೆಟ್​ ಆಸ್ಟ್ರೇಲಿಯಾ
ಕ್ರಿಕೆಟ್​ ಆಸ್ಟ್ರೇಲಿಯಾ
author img

By

Published : Jul 15, 2020, 3:09 PM IST

ಮೆಲ್ಬೋರ್ನ್​: ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಕ್ರಿಕೆಟ್​ ಆಸ್ಟ್ರೇಲಿಯಾ ಕೋವಿಡ್​ 19 ಭೀತಿಯ ನಡುವೆಯೂ 10 ನೇ ಆವೃತ್ತಿಯ ಬಿಬಿಎಲ್​ನ ವೇಳಾಪಟ್ಟಿ ಬಿಡುಗಡೆ ಮಾಡಿದೆ.

10 ತಂಡಗಳ ನಡುವೆ 2 ತಿಂಗಳ ಕಾಲ ನಡೆಯುವ ಟಿ-20 ಲೀಗ್​ ಡಿಸೆಂಬರ್​ 3 ರಂದು ಆರಂಭವಾಗಲಿದೆ. ಈ ವರ್ಷ ಕಳೆದ ಆವೃತ್ತಿಗಿಂತ ಎರಡು ವಾರ ಮುಂದಾಗಿ ಬಿಗ್​ಬ್ಯಾಶ್​ ಆರಂಭವಾಗುತ್ತಿದೆ. ಮೊದಲ ಪಂದ್ಯ ಅಡಿಲೇಡ್​ ಸ್ಟ್ರೈಕರ್ಸ್​ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್​ ನಡುವೆ ಆರಂಭವಾಗಲಿದೆ.

ಈಗಾಗಲೆ ನಿಗದಿಯಾಗಿರುವ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿ ಕೂಡ ಡಿಸೆಂಬರ್​ 3ರಿಂದ ಬ್ರಿಸ್ಬೇನ್​ನಲ್ಲಿ ಆರಂಭವಾಗಲಿದೆ. ಆದರೆ, ಬಿಸಿಸಿಐ ಈ ಸರಣಿಯನ್ನು ಒಂದು ವಾರಗಳ ಕಾಲ ಮುಂದೂಡಬೇಕೆಂದು ಕ್ರಿಕೆಟ್​ ಆಸ್ಟ್ರೇಲಿಯಾ ಜೊತೆ ಮಾತನಾಡಲು ಬಯಸಿದೆ.

  • There's more important things in the world than cricket right now, but here's how we'd love to see the summer of BBL unfold. Stay safe and healthy everyone! #BBL10 pic.twitter.com/yE3tKuAEGp

    — KFC Big Bash League (@BBL) July 15, 2020 " class="align-text-top noRightClick twitterSection" data=" ">

ಇನ್ನು ಕಳೆದ ವರ್ಷದಿಂದ ಪ್ರತ್ಯೇಕವಾಗಿ ನಡೆಯುತ್ತಿರುವ ಮಹಿಳಾ ಬಿಗ್​ಬ್ಯಾಶ್ ಕೂಡ ಈ ವರ್ಷವೂ ಪುರುಷರ ಲೀಗ್​ಗಿಂತಲೂ ಬೇಗ ಆರಂಭವಾಗಲಿದೆ. ಅಕ್ಟೋಬರ್​ 17ರಿಂದ ಸಿಡ್ನಿ ಸಿಕ್ಸರ್ಸ್​ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್​ ನಡುವೆ ಆರಂಭವಾಗಲಿದೆ. ಫೈನಲ್​ ನವೆಂಬರ್​ 29 ರಂದು ನಡೆಯಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.