ಪಲ್ಲೆಕೆಲೆ: ಕಿವೀಸ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಮಾರಕ ಬೌಲಿಂಗ್ ನಡೆಸಿದ ಶ್ರೀಲಂಕಾ ತಂಡದ ಯಾರ್ಕರ್ ಕಿಂಗ್ ಲಸಿತ್ ಮಲಿಂಗಾ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದು ಮಿಂಚಿದ್ದಾರೆ.
ಲಂಕಾದ ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ನಡೆಸಿತು. ಮಿಚೆಲ್ ಸ್ಯಾಂಟ್ನರ್ ಹಾಗೂ ಟಾಡ್ ಅಸ್ಟ್ಲೆ ಬೌಲಿಂಗ್ ದಾಳಿಗೆ ಸಿಲುಕಿದ ಲಂಕನ್ನರು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125 ರನ್ಗಳ ಸಾಧಾರಣ ಮೊತ್ತ ಪೇರಿಸಿದ್ದಾರೆ. ಲಂಕಾ ಪರ ಡಿ. ಗುಣತಿಲಕಾ 30 ಹಾಗೂ ನಿರೊಶನ್ ಡಿಕ್ವೆಲ್ಲಾ 24 ರನ್ ಗಳಿಸಿದರು.
-
This is how he did it. #FourIn4 #Malinga pic.twitter.com/yiqo7hx9lI
— Sunil Avula (@avulasunil) September 6, 2019 " class="align-text-top noRightClick twitterSection" data="
">This is how he did it. #FourIn4 #Malinga pic.twitter.com/yiqo7hx9lI
— Sunil Avula (@avulasunil) September 6, 2019This is how he did it. #FourIn4 #Malinga pic.twitter.com/yiqo7hx9lI
— Sunil Avula (@avulasunil) September 6, 2019
ಇನ್ನು 126 ರನ್ಗಳ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಮಲಿಂಗಾ ದಾಳಿಗೆ ಸಿಲುಕಿದೆ. ಪಂದ್ಯದ ಮೂರನೇ ಓವರ್ನಲ್ಲಿ ಬೌಲಿಂಗ್ಗಿಳಿದ ಮಲಿಂಗಾ ಸತತ ನಾಲ್ಕು ಎಸೆತಗಳಲ್ಲಿ ನಾಲ್ವರನ್ನು ಪೆವಿಲಿಯನ್ಗೆ ಅಟ್ಟಿದರು. ಓವರ್ನ ಮೂರನೇ ಎಸೆತದಲ್ಲಿ ಮನ್ರೋ (ಬೌಲ್ಡ್), ನಾಲ್ಕನೇ ಎಸೆತದಲ್ಲಿ ರುದರ್ಫೋರ್ಡ್(ಎಲ್ಬಿಡಬ್ಲ್ಯೂ), 5ನೇ ಎಸೆತದಲ್ಲಿ ಗ್ರಾಂಡೋಮ್ (ಬೌಲ್ಡ್) ಹಾಗೂ 6ನೇ ಎಸೆತದಲ್ಲಿ ರಾಸ್ ಟೇಲರ್ (ಎಲ್ಬಿಡಬ್ಲ್ಯೂ) ವಿಕೆಟ್ ಕೀಳುವ ಮೂಲಕ ಇತಿಹಾಸ ನಿರ್ಮಿಸಿದರು.
ಇನ್ನು ಇದಕ್ಕೂ ಮುನ್ನ 2007ರ ವಿಶ್ವಕಪ್ನಲ್ಲಿ ಮಲಿಂಗಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ದರು. ಇದೀಗ ಮತ್ತೊಮ್ಮೆ ಈ ಸಾಧನೆಗೈದಿದ್ದಾರೆ. ಅಲ್ಲದೆ ಮಲಿಂಗ ನಿಗದಿತ ಓವರ್ ಕ್ರಿಕೆಟ್ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಂತಾಗಿದೆ. ಟಿ-20 ಮಾದರಿಯಲ್ಲಿ 2 ಬಾರಿ ಹಾಗೂ ಏಕದಿನ ಕ್ರಿಕೆಟ್ನಲ್ಲಿ 3 ಸಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
126 ಗುರಿ ಬೆನ್ನತ್ತಿರುವ ಕಿವೀಸ್ 8 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದೆ. ಮೊದಲೆರಡು ಪಂದ್ಯ ಗೆದ್ದಿರುವ ನ್ಯೂಜಿಲೆಂಡ್ ಈಗಾಗಗಲೇ 3 ಪಂದ್ಯಗಳ ಟಿ-20 ಸರಣಿಯನ್ನು ಕೈವಶಪಡಿಸಿಕೊಂಡಿದೆ.