ETV Bharat / sports

ಟಿ-20 ಕ್ರಿಕೆಟ್​ನಲ್ಲಿ 100 ವಿಕೆಟ್​​​​ ಪಡೆದು ವಿಶ್ವದಾಖಲೆ ನಿರ್ಮಿಸಿದ ಯಾರ್ಕರ್​​ ಕಿಂಗ್​​ ಮಲಿಂಗಾ

author img

By

Published : Sep 7, 2019, 4:57 PM IST

ಕಿವೀಸ್​ ಆರಂಭಿಕ ಬ್ಯಾಟ್ಸ್​ಮನ್​ ಕಾಲಿನ್​ ಮನ್ರೋ ವಿಕೆಟ್​ ಪಡೆಯುವ ಮೂಲಕ ಮಲಿಂಗಾ ಟಿ-20 ಕ್ರಿಕೆಟ್​ನಲ್ಲಿ 100 ವಿಕೆಟ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡರು.

Lasith Malinga

ಕ್ಯಾಂಡಿ: ಶ್ರೀಲಂಕಾ ತಂಡದ ನಾಯಕ ಲಸಿತ್​ ಮಲಿಂಗಾ ನ್ಯೂಜಿಲ್ಯಾಂಡ್​ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ನೂರನೇ ವಿಕೆಟ್​ ಪಡೆಯುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ.

ನ್ಯೂಜಿಲ್ಯಾಂಡ್​ನ ಆರಂಭಿಕ ಬ್ಯಾಟ್ಸ್​ಮನ್​ ಕಾಲಿನ್​ ಮನ್ರೋ ಅವರ ವಿಕೆಟ್​ ಪಡೆಯುವ ಮೂಲಕ ಮಲಿಂಗಾ ಅಂತಾರಾಷ್ಟ್ರೀಯ ಟಿ-20ಯಲ್ಲಿ ನೂರನೇ ವಿಕೆಟ್​ ಪಡೆದ ದಾಖಲೆ ಬರೆದರು.

ಇದೇ ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್​ ಅಫ್ರಿದಿ(97) ವಿಕೆಟ್​ ಪಡೆಯುವ ಮೂಲಕ ಟಿ-20 ಕ್ರಿಕೆಟ್​​ನಲ್ಲಿ ಗರಿಷ್ಠ ವಿಕೆಟ್​ ಸರದಾರರಾಗಿದ್ದರು. ಇದೀಗ ಕೊನೆಯ ಪಂದ್ಯದಲ್ಲಿ 5 ವಿಕೆಟ್​ ಪಡೆಯುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 100 ವಿಕೆಟ್​ ಗಡಿ ದಾಟಿದ ಶ್ರೇಯಕ್ಕೆ 38 ವರ್ಷದ ಮಲಿಂಗಾ ಪಾತ್ರರಾದರು.

ಇದೇ ಪಂದ್ಯದಲ್ಲಿ ಹ್ಯಾಟ್ರಿಕ್​ ಸೇರಿದಂತೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಬಾರಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರಲ್ಲದೆ, ಪಾಕಿಸ್ತಾನದ ವಾಸಿಂ ಅಕ್ರಮ್​ ದಾಖಲೆ ಬ್ರೇಕ್​ ಮಾಡಿದರು. ಅಕ್ರಮ್​ ನಾಲ್ಕು ಹ್ಯಾಟ್ರಿಕ್​ ಪಡೆದಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.