ETV Bharat / sports

ಅರ್ಧಶತಕವನ್ನು ದಿವಂಗತ ತಂದೆಗೆ ಅರ್ಪಿಸಿ ಕಣ್ಣೀರಿಟ್ಟ ಕೃನಾಲ್ ಪಾಂಡ್ಯ - ಕೃನಾಲ್ ಪಾಂಡ್ಯ ಕಣ್ಣೀರು

ಭಾರತ ತಂಡ 205ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ಗೆ ಇಳಿದ ಕೃನಾಲ್, ಕನ್ನಡಿಗ ರಾಹುಲ್ ಜೊತೆಗೂಡಿ ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 57 ಎಸೆತಗಳಲ್ಲಿ 112 ರನ್​ಗಳ ಜೊತೆಯಾಟ ನೀಡಿದರು.

ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ
author img

By

Published : Mar 23, 2021, 7:14 PM IST

ಪುಣೆ: ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಪಂದ್ಯದಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿದ ಭಾರತ ತಂಡದ ಆಲ್​ರೌಂಡರ್​ ಕೃನಾಲ್ ಪಾಂಡ್ಯ, ತಮ್ಮ ಅದ್ಭುತ ಆಟವನ್ನು ಇತ್ತೀಚೆಗೆ ನಿಧನರಾದ ತಮ್ಮ ತಂದೆಗೆ ಅರ್ಪಿಸಿ ಕಣ್ಣೀರಿಟ್ಟ ಘಟನೆ ನಡೆದಿದೆ.

ಭಾರತ ತಂಡ 205ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ಗೆ ಇಳಿದ ಕೃನಾಲ್, ಕನ್ನಡಿಗ ರಾಹುಲ್ ಜೊತೆಗೂಡಿ ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 57 ಎಸೆತಗಳಲ್ಲಿ 112 ರನ್​ಗಳ ಜೊತೆಯಾಟ ನೀಡಿದರು. ಇಂದೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕೃನಾಲ್ 31 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 58 ರನ್ ​ಗಳಿಸಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದರು.

ಇನ್ನಿಂಗ್ಸ್​ ನಂತರ ನಿರೂಪಕರ ಜೊತೆ ಸಂದರ್ಶನದಲ್ಲಿ ಪಾಲ್ಗೊಂಡ ವೇಳೆ, "ಈ ನನ್ನ ಇನ್ನಿಂಗ್ಸ್​ಅನ್ನು ನನ್ನ ತಂದೆಗೆ ಅರ್ಪಿಸುತ್ತೇನೆ" ಎಂದು ಹೇಳಿ ಕಣ್ಣೀರಿಟ್ಟರು. ಮತ್ತೆ ಮಾತು ಮುಂದುವರಿಸಲಾಗದೇ ಭಾವುಕರಾಗಿದ್ದ ಅವರನ್ನು ಸಹೋದರ ಹಾರ್ದಿಕ್ ಪಾಂಡ್ಯ ಅಪ್ಪಿಕೊಂಡು ಸಂತೈಸಿದರು.

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 317 ರನ್ ​ಗಳಿಸಿದೆ. ಧವನ್ 98, ಕೊಹ್ಲಿ 56, ಕೆ.ಎಲ್.ರಾಹುಲ್ 62 ಮತ್ತು ಕೃನಾಲ್ 58 ರನ್ ​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಇದನ್ನು ಓದಿ:ಧವನ್​ರ​ 98 ರನ್​ ಸೇರಿ ನಾಲ್ವರ ಅರ್ಧಶತಕ : ಇಂಗ್ಲೆಂಡ್​ಗೆ 318 ರನ್​ಗಳ ಟಾರ್ಗೆಟ್ ನೀಡಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.