ETV Bharat / sports

ವೆಸ್ಟ್ ಇಂಡೀಸ್ ಟೆಸ್ಟ್ ನಾಯಕನಾಗಿ ಕ್ರೇಗ್ ಬ್ರಾಥ್‌ವೈಟ್ ಆಯ್ಕೆ - ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ

ವೆಸ್ಟ್ ಇಂಡೀಸ್ ಪರ ಏಳು ಟೆಸ್ಟ್ ಪಂದ್ಯಗಳನ್ನ ಮುನ್ನಡೆಸಿರುವ ​ಬ್ರಾಥ್‌ವೈಟ್, ಕಳೆದ ತಿಂಗಳು ನಡೆದ ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ 2-0 ದಿಂದ ಸರಣಿ ವಶಪಡಿಸಿಕೊಂಡಿದ್ದರು.

Kraigg Brathwaite
ಕ್ರೇಗ್ ಬ್ರಾಥ್‌ವೈಟ್
author img

By

Published : Mar 12, 2021, 10:22 AM IST

ಸೇಂಟ್ ಜಾನ್ಸ್ [ಆಂಟಿಗುವಾ]: ಜೇಸನ್ ಹೋಲ್ಡರ್ ಬದಲಿಗೆ ವೆಸ್ಟ್ ಇಂಡೀಸ್ ಟೆಸ್ಟ್ ನಾಯಕನ ಪಟ್ಟವನ್ನ ಸ್ಟಾರ್ ಆಲ್​ ರೌಂಡರ್​ ಕ್ರೇಗ್ ಬ್ರಾಥ್‌ವೈಟ್​ರಿಗೆ ನೀಡಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ವೆಸ್ಟ್ ಇಂಡೀಸ್ ಪರ ಏಳು ಟೆಸ್ಟ್ ಪಂದ್ಯಗಳನ್ನು ಮುನ್ನಡೆಸಿರುವ ​ಬ್ರಾಥ್‌ವೈಟ್, ಕಳೆದ ತಿಂಗಳು ನಡೆದ ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ 2-0 ದಿಂದ ಸರಣಿ ವಶಪಡಿಸಿಕೊಂಡಿದ್ದರು.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪ್ರಸ್ತುತ ನಂ.1 ಆಲ್‌ರೌಂಡರ್ ಆಗಿರುವ ಜೇಸನ್ ಹೋಲ್ಡರ್ 2015 ರಲ್ಲಿ ದಿನೇಶ್ ರಾಮ್ದಿನ್ ನಂತರ ವೆಸ್ಟ್ ಇಂಡೀಸ್ ಟೆಸ್ಟ್​ ತಂಡದ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಹೋಲ್ಡರ್ 37 ಟೆಸ್ಟ್‌ ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 37 ಟೆಸ್ಟ್​ ಪೈಕಿ 11 ರಲ್ಲಿ ಜಯ ಸಾಧಿಸಿದರೆ, 5 ಡ್ರಾ ಆಗಿದ್ದು, 21 ಪಂದ್ಯಗಳಲ್ಲಿ ಸೋಲಾಗಿದೆ.

"ಸಿಡಬ್ಲ್ಯುಐ ಪರವಾಗಿ, ನಮ್ಮ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಸೇವೆ ಸಲ್ಲಿದ ಜೇಸನ್​ಗೆ ಧನ್ಯವಾದಗಳು. 5-6 ವರ್ಷ ನಮ್ಮ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ತಂಡದ ಗೌರವವನ್ನು ಮತ್ತಷ್ಟು ಎತ್ತಿಹಿಡಿದಿದ್ದಾರೆ. ವಿಶ್ವದ ಪ್ರಮುಖ ಟೆಸ್ಟ್ ಆಲ್‌ರೌಂಡರ್ ಆಗಿ, ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಸನ್‌ಗೆ ಇನ್ನೂ ಅದ್ಭುತ ಪಾತ್ರವಿದೆ ಎಂದು ನಾವೆಲ್ಲರೂ ನಂಬುತ್ತೇವೆ ಎಂದು ಸಿಡಬ್ಲ್ಯುಐ ನಿರ್ದೇಶಕ ಜಿಮ್ಮಿ ಆಡಮ್ಸ್ ಹೇಳಿದ್ದಾರೆ.

ಈ ಸಮಯದಲ್ಲಿ ನಮ್ಮ ಟೆಸ್ಟ್ ತಂಡವನ್ನು ಮುನ್ನಡೆಸಲು ಕ್ರೇಗ್ ಸರಿಯಾದ ವ್ಯಕ್ತಿ ಎಂದು ನಾವೆಲ್ಲರೂ ನಂಬುತ್ತೇವೆ ಮತ್ತು ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ನನಗೆ ಖುಷಿಯಾಗಿದೆ ಎಂದು ಸಿಡಬ್ಲ್ಯುಐ ಲೀಡ್ ಸೆಲೆಕ್ಟರ್ ರೋಜರ್ ಹಾರ್ಪರ್ ಹೇಳಿದರು.

ಓದಿ : ಇಂದಿನಿಂದ ಟಿ-20 ಸರಣಿ ಆರಂಭ : ತಂಡಗಳ ಬಲಾಬಲ ಹೇಗಿದೆ..?

"ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕತ್ವ ನೀಡಿದ್ದು ಒಂದು ದೊಡ್ಡ ಗೌರವ. ತಂಡ ಮುನ್ನಡೆಸಲು ಮಂಡಳಿ ಮತ್ತು ಆಯ್ಕೆದಾರರು ನನಗೆ ಅವಕಾಶ ಮತ್ತು ಜವಾಬ್ದಾರಿಯನ್ನ ನೀಡಿದ್ದಾರೆ. ಈ ಜವಾಬ್ದಾರಿ ನೀಡಿದ್ದಕ್ಕೆ ವಿನಮ್ರನಾಗಿದ್ದೇನೆ." ಎಂದು ಕ್ರೈಗ್ ಬ್ರಾಥ್‌ವೈಟ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.