ETV Bharat / sports

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ಫ್ಯಾಂಥರ್ಸ್ ಮಾಲೀಕನಿಂದ ಹೊರಬಿತ್ತು ಸ್ಫೋಟಕ ಮಾಹಿತಿ - ದುಬೈ-ಬೆಂಗಳೂರು ಬುಕ್ಕಿ

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಅಲಿ ಬೇರೆ ಬೇರೆ ತಂಡದ ಆಟಗಾರರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯಿದೆ. ಹಾಗಾಗಿ ಬೇರೆ ಬೇರೆ ತಂಡಗಳ ಆಟಗಾರರನ್ನೂ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಸಹಾಯ ಪಡೆದು ಫಿಕ್ಸಿಂಗ್ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್
author img

By

Published : Sep 24, 2019, 3:19 PM IST

ಬೆಂಗಳೂರು: ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಅವರು ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ‌ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಸ್ಫಾಕ್ ಅವರನ್ನು ಬಂಧಿಸಿ ತನಿಖೆ ನಡೆಸಿದಾಗ ಆರೋಪಿ ಸಿಸಿಬಿ ಪೊಲೀಸರ ಎದುರು ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡಿರೋದರ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಅಲಿ ಅಸ್ಫಾಕ್ ದುಬೈ ಮೂಲದ ಬುಕ್ಕಿ ಜೊತೆ 11 ಲಕ್ಷ ರೂ. ಬೆಟ್ಟಿಂಗ್ ಮಾಡಿರುವ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೆಎಸ್​ಸಿಎಗೆ ಪತ್ರ ಬರೆದು ಕ್ರಿಕೆಟ್‌ ಪಂದ್ಯದ ನಿಯಮಾವಳಿಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಇನ್ನು ಕೆಎಸ್​ಸಿಎ ಸಿಸಿಬಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಯಾವುದೇ ಕ್ರಿಕೆಟ್ ತಂಡದ ಮಾಲೀಕ ಬೆಟ್ಟಿಂಗ್ ಆಡಿದ್ರೆ ಅದು ಕ್ರಿಕೆಟ್ ನಿಮಯಾವಳಿಯ ಪ್ರಕಾರ ಅಪರಾಧ. ಈ ವಿಷಯ ಗೊತ್ತಿದ್ದು ಅಲಿ ಬೆಟ್ಟಿಂಗ್ ಆಡಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಲಿಯನ್ನ ಸತತ ಮೂರು ದಿನಗಳ ಕಾಲ‌ ವಿಚಾರಣೆ ನಡೆಸಿದ್ದ ಸಿಸಿಬಿ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಅಷ್ಟಕ್ಕೂ ಈ ಅಲಿ ಅಸ್ಫಾಕ್ ಯಾರು? ಅವರ ಹಿನ್ನೆಲೆ ಏನು?

ಅಲಿ ಅಸ್ಫಾಕ್ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ. ಮೂಲತಃ ಗುಜರಾತ್​ನವರು. ಆದ್ರೆ ಬೆಳೆದಿದ್ದು ಬೆಂಗಳೂರಿನಲ್ಲೇ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅಲಿ ಅಸ್ಫಾಕ್​, ಅಲಿ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ನ ಮಾಲೀಕ ಸಹ ಹೌದು. 2017ರಲ್ಲಿ ಶ್ರೀಲಂಕಾದಲ್ಲಿ ಕೂಡ ಕ್ರಿಕೆಟ್ ಟೂರ್ನಿ ನಡೆಸಿದ್ದರು. ಹಾಗೆಯೇ ಇಂಟರ್ ನ್ಯಾಷನಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ IPL, KPL ಮಾದರಿಯಲ್ಲಿ ICPL ಎಂಬ ಹೆಸರಿನಲ್ಲಿ ಟೂರ್ನಿ ಆಯೋಜಿಸಿದ್ದರು ಎಂದು ತಿಳಿದುಬಂದಿದೆ.

ಇನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ ಈ ವರ್ಷದ ಕೆಪಿಎಲ್​ನಲ್ಲಿ ಅನೇಕ ಜನರು ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬುದರ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು. ಇದರ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನಂತರ, ಬೆಳಗಾವಿ ತಂಡದ ಮಾಲೀಕ ಬೆಟ್ಟಿಂಗ್ ನಡೆಸಿರುವುದು ಸಾಬೀತಾಗಿದೆ. ಬೆಳಗಾವಿ ತಂಡದ ಮಾಲೀಕ ಅಲಿ ಅಸ್ಫಾಕ್​ರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಅಲಿ ಬೇರೆ ಬೇರೆ ತಂಡದ ಆಟಗಾರರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯಿದೆ. ಹಾಗಾಗಿ ಬೇರೆ ಬೇರೆ ತಂಡದ ಆಟಗಾರರನ್ನೂ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಸಹಾಯ ಪಡೆದು ಫಿಕ್ಸಿಂಗ್ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ
ಬೆಳಗಾವಿ ಫ್ಯಾಂಥರ್ಸ್ ಮಾಲೀಕನಿಂದ ರೋಚಕ ಕಹಾನಿ ಬೆಳಕಿಗೆ

Mojo byite
ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ‌ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಸ್ಪಾಕ್ ಬಂಧನ ಮಾಡಿ ತನಿಖೆ ನಡೆಸಿದಾಗ ಆರೋಪಿ ಸಿಸಿಬಿ ಪೊಲೀಸರ ಎದುರು ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡಿರೊದನ್ನ ಬಾಯಿ ಬಿಟ್ಟಿದ್ದಾನೆ..

ಅಲಿ ಅಸ್ಪಾಕ್ ದುಬೈ ಮೂಲದ ಬುಕ್ಕಿ ಜೊತೆ11 ಲಕ್ಷ ಬೆಟ್ಟಿಂಗ್ ಮಾಡಿರುವ ವಿಚಾರ ಬಯಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೆಎಸ್ ಸಿ ಐ ಗೆ ಪತ್ರ ಬರೆದು ಕ್ರಿಕೆಟ್‌ ಪಂದ್ಯದ ನಿಯಮಾವಳಿಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಇನ್ನುಕೆಎಸ್ ಸಿ ಎ ಸಿಸಿಬಿ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದು
ಯಾವುದೇ ಕ್ರಿಕೆಟ್ ತಂಡದ ಮಾಲೀಕ ಬೆಟ್ಟಿಂಗ್ ಆಡುವ ಹಾಗಿಲ್ಲ
ಅದು ಕ್ರಿಕೆಟ್ ನಿಮಯಾವಳಿಯ ಪ್ರಕಾರ ಅಪರಾಧ ಇದು ಗೊತ್ತಿದ್ದು ಅಲಿ ಬೆಟ್ಟಿಂಗ್ ಆಡಿದ್ದು ಅಫೆನ್ಸ್ ಎಂದು ಕೆಎಸ್ ಸಿಎ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅಲಿಯನ್ನ ಸತತ ಮೂರು ದಿನಗಳ ಕಾಲ‌ ವಿಚಾರಣೆ ನಡೆಸಿದ್ದ ಸಿಸಿಬಿ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.

ಅಷ್ಟಕ್ಕೂ ಈ ಅಲಿ ಅಷ್ಪಾಕ್ ತಾರ ಯಾರು..? ಅವರ ಹಿನ್ನಲೆ ಏನು..?

ಅಲಿ ಅಷ್ಪಾಕ್ ತಾರ ಬೆಳಗಾವಿ ಫ್ಯಾಂಥರ್ಸ್ ಮಾಲೀಕ.
ಮೂಲತಃ ಗುಜರಾತ್ ನವರು . ಆದ್ರೆ ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೆ ವೃತ್ತಿಯಲ್ಲಿ ಉದ್ಯಮಿಯಾಗಿರುವ ಅಲಿ ಅಷ್ಪಾಕ್ ತಾರ‌ ಅಲಿ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕ. ಅಲಿ
2017ರಲ್ಲಿ ಶ್ರೀಲಂಕಾದಲ್ಲಿ ಕೂಡ ಕ್ರಿಕೆಟ್ ಪಂದ್ಯ ನಡೆಸಿದ್ದ ಹಾಗೆ
ಇಂಟರ್ ನ್ಯಾಷನಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಹೆಸರಿನಲ್ಲಿ
IPL, KPL ಮಾದರಿಯಲ್ಲಿ ICPL ಎಂಬ ಹೆಸರಿನಲ್ಲಿ ಟೂರ್ನಿ ಮಾಡಿದ್ದ.

ಇನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ,ಸಂದೀಪ್ ಪಾಟೀಲ್ ಮಾತಾಡಿ ಈ ವರ್ಷದ ಕೆಪಿಎಲ್ ನಲ್ಲಿ ಅನೇಕ ಜನರು ಬೆಟ್ಟಿಂಗ್ ಮಾಡಿದ್ದಾರೆ .ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಅನ್ನೋದರ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು ಇದರ ಬಗ್ಗೆ ಸುದೀರ್ಘ ವಿಚಾರಣೆ ಮಾಡಿ ಬೆಳಗಾವಿ ತಂಡದ ಮಾಲೀಕ ಬೆಟ್ಟಿಂಗ್ ಆಡಿರೋದು ಸಾಬೀತಾದ ಹಿನ್ನೆಲೆ ಬೆಳಗಾವಿ ತಂಡದ ಮಾಲೀಕ ಅಲಿ ಯನ್ನ ಬಂಧಿಸಲಾಗಿದೆ ಹಾಗೆ ಅಲಿ ದುಬೈ ಮೂಲದ ಬುಕ್ಕಿ ಜೊತೆ ಸಂಪರ್ಕ ಹಾಗೆ ಅಲಿ ಬೆಂಗಳೂರು ಬುಕ್ಕಿ ಜೊತೆಗೂ ಸಂಪರ್ಕ ಹೊಂದಿದ್ದರು

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೆಚ್ವಿನ ತನಿಖೆ ನಡೆಯುತ್ತಿದೆ ಯಾಕಂದ್ರೆ
ಅಲಿ ಬೇರೆ ಬೇರೆ ತಂಡದ ಆಟಗಾರರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದ.ಹಾಗಾಗಿ ಬೇರೆ ಬೇರೆ ತಂಡದ ಆಟಗಾರರನ್ನೂ ಕರೆಸಿ ವಿಚಾರಣೆ ನಡೆಸಲಾಗ್ತಿದೆ. ಈ ಕುರಿತು ಬಿಸಿಸಿಸಿ ಆ್ಯಂಟಿ ಕರೆಪ್ಷನ್ ಯೂನಿಟ್ ಸಹಾಯ ಪಡೆದು ಫಿಕ್ಸಿಂಗ್ ಬಗ್ಗೆ ಹೆಚ್ವಿನ ತನಿಖೆ ನಡೆಸುತ್ತೇವೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆBody:KN_BNG_03_KPL_7204498Conclusion:KN_BNG_03_KPL_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.