ನವದೆಹಲಿ: ಕೊರೊನಾ ಲಾಕ್ಡೌನ್ನಿಂದ ಕ್ರಿಕೆಟ್ ಸ್ಥಗಿತಗೊಂಡಿರುವ ಕಾರಣ ಕ್ರಿಕೆಟಿಗರು ಸಮಯ ಕಳೆಯಲು ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಸವಾಲುಗಳನ್ನು ಒಬ್ಬರಿಗೊಬ್ಬರು ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಜಿಮ್ನಲ್ಲಿ ತಲೆಕೆಳಗಾಗಿ ನೇತಾಡುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವರ್ಕೌಟ್ ನೋಡಿ ಭಾರತೀಯ ಅಭಿಮಾನಿಗಳು ಅಗರ್ವಾಲ್ ಅವರ ಕ್ಷಮತೆಗೆ ಫಿದಾ ಆಗಿದ್ದರು.
ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಇಶಾಂತ್ ಶರ್ಮಾ ಮಯಾಂಕ್ ಅವರನ್ನು ಟ್ರೋಲ್ ಮಾಡಿದ್ದಾರೆ. 'ಏನಾಗಿದೆ ಭಾಯ್, ನನ್ನ ಪ್ರಕಾರ ಲಾಕ್ಡೌನ್ ಜನರ ಸಂಯಮದ ಮಿತಿಯನ್ನು ಮೀರಿಸಿದೆ' ಎಂದು ಬರೆದುಕೊಂಡಿದ್ದಾರೆ.
ಇಶಾಂತ್ ಪ್ರತಿಕ್ರಿಯಿಸುತ್ತಾ, 'ಪ್ರಪಂಚ ಉಲ್ಟಾ ಕಾಣಿಸುತ್ತಿದೆಯಾ ಅಥವಾ ಸರಿಯಾಗಿ ಕಾಣಿಸುತ್ತಿದೆಯಾ' ಎಂದು ಕಾಲೆಳೆದಿದ್ದಾರೆ.