ETV Bharat / sports

ಟೆಸ್ಟ್​ ರ್ಯಾಂಕಿಂಗ್​ ಪ್ರಕಟ : 2ನೇ ಸ್ಥಾನಕ್ಕೇರಿದ ಕೊಹ್ಲಿ, ಅಗ್ರ ಹತ್ತರಲ್ಲಿ ಪೂಜಾರ, ರಹಾನೆ

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಬಾರಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್​​ನ ಕೇನ್‌ ವಿಲಿಯಮ್ಸನ್‌ (877) ಇದೀಗ ಮತ್ತೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ..

ICC Test ranking for batsmen
ಟೆಸ್ಟ್​ ರ್ಯಾಂಕಿಂಗ್​ ಪ್ರಕಟ
author img

By

Published : Dec 15, 2020, 6:47 PM IST

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ಪ್ರಕಟಿಸಿರುವ ಟೆಸ್ಟ್ ರ್ಯಾಂಕಿಂಗ್​ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ 2ನೇ ಸ್ಥಾನಕ್ಕೆ (886 ಅಂಕ) ಲಗ್ಗೆ ಇಟ್ಟಿದ್ದು, ಚೇತೇಶ್ವರ್​ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅಗ್ರ ಹತ್ತರಲ್ಲಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಬಾರಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್​​ನ ಕೇನ್‌ ವಿಲಿಯಮ್ಸನ್‌ (877) ಇದೀಗ ಮತ್ತೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನಂತರದ ಸ್ಥಾನದಲ್ಲಿ ಮಾರ್ನಸ್​ ಲಬುಶೇನ್ (827)​, ಬಾಬರ್ ಅಜಾಮ್ (797)​, ಡೇವಿಡ್​ ವಾರ್ನರ್ (793) ಇದ್ದಾರೆ.

ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​​ ಸ್ಟೀವ್​ ಸ್ಮಿತ್​ ಅಗ್ರಸ್ಥಾನದಲ್ಲೇ (911) ಮುಂದುವರೆದಿದ್ದಾರೆ. ಚೇತೇಶ್ವರ ಪೂಜಾರ 766 ಪಾಯಿಂಟ್​​ಗಳೊಂದಿಗೆ ಏಳನೇ ಸ್ಥಾನದಲ್ಲಿದ್ರೆ, ಬೆನ್​ಸ್ಟೊಕ್ಸ್ (760), ಜೋ ರೂಟ್ (738) ಮತ್ತು ರಹಾನೆ ಒಂದು ಸ್ಥಾನ ಏರಿಕೆ ಕಾಣುವ ಮೂಲಕ 726 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.

ICC Test ranking for batsmen
ಟೆಸ್ಟ್​ ರ್ಯಾಂಕಿಂಗ್ ಪಟ್ಟಿ

ಐಸಿಸಿ ಟೆಸ್ಟ್ ಬೌಲರ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ( 779) ಮತ್ತು ಆರ್‌ ಅಶ್ವಿನ್ (756 ) ಅಂಕಗಳೊಂದಿಗೆ ಕ್ರಮವಾಗಿ 8 ಮತ್ತು 10ನೇ ಸ್ಥಾನದಲ್ಲಿದ್ದಾರೆ. ಪ್ಯಾಟ್​ ಕಮಿನ್ಸ್​ (904) ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, ನಂತರದ ಸ್ಥಾನದಲ್ಲಿ ಸ್ಟುವರ್ಟ್​ ಬ್ರಾಡ್ (845)​, ನೆಲಿ ವ್ಯಾಗ್ನರ್ (840, 2ನೇ ಸ್ಥಾನದಿಂದ ಮೂರಕ್ಕೆ ಕುಸಿದಿದ್ದಾರೆ)​​ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್​ ಆಲ್​ರೌಂಡರ್​ ಪಟ್ಟಿಯಲ್ಲಿ ಬೆನ್​ಸ್ಟೋಕ್ಸ್​​ 446 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್​​​​​ (423) ಎರಡನೇ ಸ್ಥಾನ, ಜಡೇಜಾ ಮೂರನೇ ಸ್ಥಾನದಲ್ಲಿದ್ರೆ, ಆರ್‌. ಅಶ್ವಿನ್ 281 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

ತಂಡಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ 2-0 ಸರಣಿ ಗೆಲುವಿನ ನಂತರ ನ್ಯೂಜಿಲೆಂಡ್ 2ನೇ ಸ್ಥಾನಕ್ಕೇರಿದೆ. ಭಾರತ ಪ್ರಸ್ತುತ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.