ETV Bharat / sports

ಕೊಹ್ಲಿ ಬರ್ತ್​ಡೇ ವಿಶೇಷ: ವಿರಾಟ್ ನೇತೃತ್ವದ U-19 ತಂಡದ ಆಟಗಾರರು ಎಲ್ಲೆಲ್ಲಿದ್ದಾರೆ..?

19 ವರ್ಷದೊಳಗಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಈ ಟೂರ್ನಿಯಿಂದಲೇ ಕೊಹ್ಲಿ ರಾಷ್ಟ್ರೀಯ ತಂಡದ ಟಿಕೆಟ್ ಪಡೆದಿದ್ದರು. ಹಾಗಿದ್ದರೆ ಕೊಹ್ಲಿ ಜೊತೆಗೆ ಅಂದು ಆಡಿದ್ದ ಉಳಿದ ಆಟಗಾರರು ಎಲ್ಲಿದ್ದಾರೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ..

ಕೊಹ್ಲಿ ಬರ್ತ್​ಡೇ
author img

By

Published : Nov 5, 2019, 2:29 PM IST

ನವದೆಹಲಿ: ಟೀಂ ಇಂಡಿಯಾದ ಕಪ್ತಾನ ವಿರಾಟ್ ಕೊಹ್ಲಿಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ಬಾಂಗ್ಲಾ ವಿರುದ್ಧ ಟಿ-20 ಸರಣಿಯಿಂದ ಹೊರಗುಳಿದಿರುವ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ.

19 ವರ್ಷದೊಳಗಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಈ ಟೂರ್ನಿಯಿಂದಲೇ ಕೊಹ್ಲಿ ರಾಷ್ಟ್ರೀಯ ತಂಡದ ಟಿಕೆಟ್ ಪಡೆದಿದ್ದರು. ಹಾಗಿದ್ದರೆ ಕೊಹ್ಲಿ ಜೊತೆಗೆ ಅಂದು ಆಡಿದ್ದ ಉಳಿದ ಆಟಗಾರರು ಎಲ್ಲಿದ್ದಾರೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ..

ರವೀಂದ್ರ ಜಡೇಜಾ:

ಟೀಂ ಇಂಡಿಯಾದ ಶ್ರೇಷ್ಠ ಆಲ್​​ರೌಂಡರ್ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ, 46 ಟೆಸ್ಟ್, 156 ಏಕದಿನ ಹಾಗೂ 44 ಟಿ-20 ಪಂದ್ಯವನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಬಳಗದ ಸದ್ಯದ ನಂಬಿಕಸ್ತ ಆಟಗಾರನಾಗಿ ಜಡ್ಡು ತಂಡದಲ್ಲಿದ್ದಾರೆ. ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದಾರೆ.

ಅಜಿತೇಶ್ ಅರ್ಗಲ್​​:

U-19 ವಿಶ್ವಕಪ್ ಫೈನಲ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅಜಿತೇಶ್ ಆ ಬಳಿಕ ಕ್ರಿಕೆಟ್​ನಿಂದ ದೂರವಾಗಿದ್ದಾರೆ. ವಡೋದರದಲ್ಲಿ ಪ್ರಸ್ತುತ ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೆಪೋಲಿಯನ್​​ ಐನ್​ಸ್ಟೀನ್​: ನೆಪೋಲಿಯನ್​ 2008ರ ಐಪಿಎಲ್​ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಸದ್ಯ ಈ ಬಲಗೈ ಆಟಗಾರನ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಶ್ರೀವತ್ಸ್ ಗೋಸ್ವಾಮಿ: ವಿಕೆಟ್ ಕೀಪರ್ ಬ್ಯಾಟ್ಸ್​​ಮನ್​​​ U-19 ವಿಶ್ವಕಪ್​​ನಲ್ಲಿ ಒಟ್ಟಾರೆ 152 ರನ್ ಗಳಿಸಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ್ದರು. ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಪೆರಿ ಗೋಯಲ್: ಪೆರಿ ಗೋಯಲ್​​ U-19 ವಿಶ್ವಕಪ್​ನಲ್ಲಿ ಒಂದು ಪಂದ್ಯವನ್ನೂ ಆಡಿರಲಿಲ್ಲ. ಆ ಬಳಿಕ ಜಂಟಲ್​ಮೆನ್ ಕ್ರೀಡೆಯನ್ನು ತ್ಯಜಿಸಿ ಆರ್​ಎಸ್​ಜಿ ಪ್ರಾಪರ್ಟೀಸ್ ಹೆಸರಿನ ಕಂಪನಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಕ್ಬಾಲ್ ಅಬ್ದುಲ್ಲಾ: U-19 ವಿಶ್ವಕಪ್​ನಲ್ಲಿ ತಂಡದ ಪರವಾಗಿ ಅತಿಹೆಚ್ಚು ವಿಕೆಟ್(10) ಪಡೆದು ಮಿಂಚಿದ್ದರು. ಮುಂಬೈ ತಂಡದ ಪರವಾಗಿ ರಣಜಿ ಆಡಿದ್ದ ಇಕ್ಬಾಲ್​, 2016ರಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಆಡಿದ್ದಾರೆ.

ಸಿದ್ಧಾರ್ಥ್ ಕೌಲ್​: ಭಾರತದ ರಾಷ್ಟ್ರೀಯ ತಂಡದ ಪರವಾಗಿ 3 ಏಕದಿನ ಹಾಗೂ 2 ಟಿ20 ಪಂದ್ಯವನ್ನಾಡಿರುವ ಸಿದ್ಧಾರ್ಥ್​ ಕೌಲ್ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್​​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್​, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರವಾಗಿ ಆಡಿದ್ದಾರೆ.

ತರುವರ್ ಕೊಹ್ಲಿ: ತರುವರ್ ಕೊಹ್ಲಿ, ಎರಡನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಿದ್ದರು. ನಂತರದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲೂ ಕಾಣಿಸಿಕೊಂಡಿದ್ದರು. 2012-13ರ ರಣಜಿ ಸೆಮಿಫೈನಲ್​ನಲ್ಲಿ ಪಂಜಾಬ್​ ಪರ ತ್ರಿಶತಕ ಬಾರಿಸಿ ಮಿಂಚಿದ್ದರು.2018-19ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಜೋರಾಂ ರಾಜ್ಯ ಪ್ರತಿನಿಧಿಸಿದ್ದ ತರುವರ್ ಕೊಹ್ಲಿ 373 ರನ್ ಹಾಗೂ 8 ವಿಕೆಟ್ ಕಿತ್ತಿದ್ದರು.

ಅಭಿನವ್ ಮುಕುಂದ್: ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅಭಿನವ್ ಮುಕುಂದ್ ರಾಷ್ಟ್ರೀಯ ತಂಡದಲ್ಲಿ ಅಷ್ಟಾಗಿ ಮಿಂಚಿಲ್ಲ. 2011ರಲ್ಲಿ ಸತತ ವೈಫಲ್ಯದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದ ಮುಕುಂದ್ 2017ರಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. ಆ ವೇಳೆ ಶ್ರೀಲಂಕಾ ವಿರುದ್ಧ 81 ರನ್ ಸಿಡಿಸಿದ್ದರು.

ಮನೀಷ್ ಪಾಂಡೆ: U-19 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಮನೀಷ್ ರಾಷ್ಟ್ರೀಯ ತಂಡದಲ್ಲಿ 23 ಏಕದಿನ, 31 ಟಿ-20 ಪಂದ್ಯವನ್ನಾಡಿದ್ದಾರೆ. ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರವಾಗಿ ಆಡಿದ್ದಾರೆ. ಐಪಿಎಲ್​​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ(2014) ಎನ್ನುವ ಹೆಗ್ಗಳಿಕೆ ಮನೀಷ್ ಪಾಂಡೆಯದ್ದು.

ಪ್ರದೀಪ್ ಸಾಂಗ್ವಾನ್: U-19 ವಿಶ್ವಕಪ್​​ನಲ್ಲಿ ಐದು ವಿಕೆಟ್​ ಕಿತ್ತು ಮಿಂಚಿದ್ದ ಸಾಂಗ್ವಾನ್, ರಣಜಿಯಲ್ಲಿ ದೆಹಲಿ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಐಪಿಎಲ್​​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 2013ರ ಆವೃತ್ತಿಯ ಐಪಿಎಲ್​ ವೇಳೆ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ಸಾಂಗ್ವಾನ್​ರನ್ನು 18 ತಿಂಗಳುಗಳ ಕಾಲ ಬ್ಯಾನ್ ಮಾಡಲಾಗಿತ್ತು.

ತನ್ಮಯ್ ಶ್ರೀವಾಸ್ತವ:

U-19 ವಿಶ್ವಕಪ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತನ್ಮಯ್​​, 52ರ ಸರಾಸರಿಯಲ್ಲಿ 262 ರನ್ ಕಲೆಹಾಕಿದ್ದರು. ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಮೈದಾನಕ್ಕಿಳಿಯುತ್ತಿದ್ದಾರೆ.

ಸೌರಭ್ ತಿವಾರಿ: ರಾಷ್ಟ್ರೀಯ ತಂಡದಲ್ಲಿ ತಿವಾರಿ 3 ಏಕದಿನ ಪಂದ್ಯವನ್ನಾಡಿದ್ದಾರೆ. 2010ರ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸಿದ್ದ ಸೌರಭ್​ ತಿವಾರಿ ನಂತರದಲ್ಲಿ ಆರ್​ಸಿಬಿ ಸೇರಿದ್ದರು. ಡೆಲ್ಲಿ ಹಾಗೂ ಪುಣೆ ತಂಡದಲ್ಲೂ ತಿವಾರಿ ಆಡಿದ್ದರು. ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Intro:Body:

ನವದೆಹಲಿ: ಟೀಂ ಇಂಡಿಯಾದ ಕಪ್ತಾನ ವಿರಾಟ್ ಕೊಹ್ಲಿಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ಬಾಂಗ್ಲಾ ವಿರುದ್ಧ ಟಿ20 ಸರಣಿಯಿಂದ ಹೊರಗುಳಿದಿರುವ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಜೊತೆಗೆ ಎಂಜಾಯ್ ಮಾಡುತ್ತಿದ್ದಾರೆ.

19 ವರ್ಷದೊಳಗಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಈ ಟೂರ್ನಿಯಿಂದಲೇ ಕೊಹ್ಲಿ ರಾಷ್ಟ್ರೀಯ ತಂಡದ ಟಿಕೆಟ್ ಪಡೆದಿದ್ದರು. ಹಾಗಿದ್ದರೆ ಕೊಹ್ಲಿ ಜೊತೆಗೆ ಅಂದು ಆಡಿದ್ದ ಉಳಿದ ಆಟಗಾರರು ಎಲ್ಲಿದ್ದಾರೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ..

ರವೀಂದ್ರ ಜಡೇಜಾ: 

ಟೀಂ ಇಂಡಿಯಾದ ಶ್ರೇಷ್ಠ ಆಲ್​​ರೌಂಡರ್ ಆಗಿ ಗುರುತಿಸಿಕೊಂಡಿರುವ ರವೀಂದ್ರ ಜಡೇಜಾ, 46 ಟೆಸ್ಟ್, 156 ಏಕದಿನ ಹಾಗೂ 44 ಟಿ20 ಪಂದ್ಯವನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಬಳಗದ ಸದ್ಯದ ನಂಬಿಕಸ್ತ ಆಟಗಾರನಾಗಿ ಜಡ್ಡು ತಂಡದಲ್ಲಿದ್ದಾರೆ. ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದಾರೆ.

ಅಜಿತೇಶ್ ಅರ್ಗಲ್​​:

U-19 ವಿಶ್ವಕಪ್ ಫೈನಲ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅಜಿತೇಶ್ ಆ ಬಳಿಕ ಕ್ರಿಕೆಟ್​ನಿಂದ ದೂರವಾಗಿದ್ದಾರೆ. ವಡೋದರದಲ್ಲಿ ಪ್ರಸ್ತುತ ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೆಪೋಲಿಯನ್​​ ಐನ್​ಸ್ಟೀನ್​:

ನೆಪೋಲಿಯನ್​ 2008ರ ಐಪಿಎಲ್​ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಸದ್ಯ ಈ ಬಲಗೈ ಆಟಗಾರನ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

ಶ್ರೀವತ್ಸ್ ಗೋಸ್ವಾಮಿ: 

ವಿಕೆಟ್ ಕೀಪರ್ ಬ್ಯಾಟ್ಸ್​​ಮನ್​​​ U-19 ವಿಶ್ವಕಪ್​​ನಲ್ಲಿ ಒಟ್ಟಾರೆ 152 ರನ್ ಗಳಿಸಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ್ದರು. ದೇಶೇಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಪೆರಿ ಗೋಯಲ್:

ಪೆರಿ ಗೋಯಲ್​​ U-19 ವಿಶ್ವಕಪ್​ನಲ್ಲಿ ಒಂದು ಪಂದ್ಯವನ್ನೂ ಆಡಿರಲಿಲ್ಲ. ಆ ಬಳಿಕ ಜಂಟಲ್​ಮೆನ್ ಕ್ರೀಡೆಯನ್ನು ತ್ಯಜಿಸಿ ಆರ್​ಎಸ್​ಜಿ ಪ್ರಾಪರ್ಟೀಸ್ ಹೆಸರಿನ ಕಂಪೆನಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಕ್ಬಾಲ್ ಅಬ್ದುಲ್ಲಾ:

U-19 ವಿಶ್ವಕಪ್​ನಲ್ಲಿ ತಂಡದ ಪರವಾಗಿ ಅತೀಹೆಚ್ಚು ವಿಕೆಟ್(10) ಪಡೆದು ಮಿಂಚಿದ್ದರು. ಮುಂಬೈ ತಂಡದ ಪರವಾಗಿ ರಣಜಿ ಆಡಿದ್ದ ಇಕ್ಬಾಲ್​, 2016ರಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಆಡಿದ್ದಾರೆ.

ಸಿದ್ಧಾರ್ಥ್ ಕೌಲ್​:

ಭಾರತದ ರಾಷ್ಟ್ರೀಯ ತಂಡದ ಪರವಾಗಿ 3 ಏಕದಿನ ಹಾಗೂ 2 ಟಿ20 ಪಂದ್ಯವನ್ನಾಡಿರುವ ಸಿದ್ಧಾರ್ಥ್​ ಕೌಲ್ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್​​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್​, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರವಾಗಿ ಆಡಿದ್ದಾರೆ.

ತರುವರ್ ಕೊಹ್ಲಿ:

ತರುವರ್ ಕೊಹ್ಲಿ, ಎರಡನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಿದ್ದರು. ನಂತರದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲೂ ಕಾಣಿಸಿಕೊಂಡಿದ್ದರು. 2012-13ರ ರಣಜಿ ಸೆಮಿಫೈನಲ್​ನಲ್ಲಿ ಪಂಜಾಬ್​ ಪರ ತ್ರಿಶತಕ ಬಾರಿಸಿ ಮಿಂಚಿದ್ದರು.2018-19ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಜೋರಾಂ ರಾಜ್ಯ ಪ್ರತಿನಿಧಿಸಿದ್ದ ತರುವರ್ ಕೊಹ್ಲಿ 373 ರನ್ ಹಾಗೂ 8 ವಿಕೆಟ್ ಕಿತ್ತಿದ್ದರು.

ಅಭಿನವ್ ಮುಕುಂದ್:

ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅಭಿನವ್ ಮುಕುಂದ್ ರಾಷ್ಟ್ರೀಯ ತಂಡದಲ್ಲಿ ಅಷ್ಟಾಗಿ ಮಿಂಚಿಲ್ಲ. 2011ರಲ್ಲಿ ಸತತ ವೈಫಲ್ಯದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದ ಮುಕುಂದ್ 2017ರಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. ಆ ವೇಳೆ ಶ್ರೀಲಂಕಾ ವಿರುದ್ಧ 81 ರನ್ ಸಿಡಿಸಿದ್ದರು.

ಮನೀಷ್ ಪಾಂಡೆ:

U-19 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಮನೀಷ್ ರಾಷ್ಟ್ರೀಯ ತಂಡದಲ್ಲಿ 23 ಏಕದಿನ, 31 ಟಿ20 ಪಂದ್ಯವನ್ನಾಡಿದ್ದಾರೆ. ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರವಾಗಿ ಆಡಿದ್ದಾರೆ. ಐಪಿಎಲ್​​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ(2014) ಎನ್ನುವ ಹೆಗ್ಗಳಿಕೆ ಮನೀಷ್ ಪಾಂಡೆಯದ್ದು.

ಪ್ರದೀಪ್ ಸಾಂಗ್ವಾನ್:

U-19 ವಿಶ್ವಕಪ್​​ನಲ್ಲಿ ಐದು ವಿಕೆಟ್​ ಕಿತ್ತು ಮಿಂಚಿದ್ದ ಸಾಂಗ್ವಾನ್, ರಣಜಿಯಲ್ಲಿ ದೆಹಲಿ ತಂಡದ ಪರವಾಗಿ ಕಣಕ್ಕಿಳಿದಿದ್ದರು.  ಐಪಿಎಲ್​​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. 2013ರ ಆವೃತ್ತಿಯ ಐಪಿಎಲ್​ ವೇಳೆ ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ಸಾಂಗ್ವಾನ್​ರನ್ನು 18 ತಿಂಗಳುಗಳ ಕಾಲ ಬ್ಯಾನ್ ಮಾಡಲಾಗಿತ್ತು.

ತನ್ಮಯ್ ಶ್ರೀವಾಸ್ತವ:

U-19 ವಿಶ್ವಕಪ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತನ್ಮಯ್​​, 52ರ ಸರಾಸರಿಯಲ್ಲಿ 262 ರನ್ ಕಲೆಹಾಕಿದ್ದರು. ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಮೈದಾನಕ್ಕಿಳಿಯುತ್ತಿದ್ದಾರೆ.

ಸೌರಭ್ ತಿವಾರಿ:

ರಾಷ್ಟ್ರೀಯ ತಂಡದಲ್ಲಿ ತಿವಾರಿ 3 ಏಕದಿನ ಪಂದ್ಯವನ್ನಾಡಿದ್ದಾರೆ. 2010ರ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸಿದ್ದ ಸೌರಭ್​ ತಿವಾರಿ ನಂತರದಲ್ಲಿ ಆರ್​ಸಿಬಿ ಸೇರಿದ್ದರು. ಡೆಲ್ಲಿ ಹಾಗೂ ಪುಣೆ ತಂಡದಲ್ಲೂ ತಿವಾರಿ ಆಡಿದ್ದರು. ಸದ್ಯ ದೇಶೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.